ನವದೆಹಲಿ:ಅಂಡಮಾನ್ ಮತ್ತು ನಿಕೋಬಾರ್​ನಲ್ಲಿ ಹಡಗು ನಿರೋಧಕ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಮಂಗಳವಾರ ಯಶಸ್ವಿಯಾಗಿ ಪೂರೈಸಿದೆ. ಭಾರತೀಯ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಾಗಿತ್ತು.
ಭೂಮಿ ಮೇಲೆ ದಾಳಿ ನಡೆಸಬಲ್ಲ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಕೆಲವು ದಿನಗಳ ಹಿಂದಷ್ಟೇ ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಈ ಪರೀಕ್ಷೆ ಕೂಡ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವ್ಯಾಪ್ತಿಯಲ್ಲೇ ನಡೆದಿತ್ತು. ಬ್ರಹ್ಮೋಸ್​ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್​ ಜಗತ್ತಿನಲ್ಲೇ ಅತ್ಯಂತ ವೇಗದ ಆಪರೇಷನಲ್ ಸಿಸ್ಟಮ್ ಹೊಂದಿರುವಂಥದ್ದಾಗಿದೆ. 298 ಕಿ.ಮೀ.ನಿಂದ 450 ಕಿ.ಮೀ. ತನಕದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:ಪುರುಷರೆಲ್ಲರೂ ಧರ್ಮ, ಉದ್ಯೋಗ, ಆದಾಯ ಘೋಷಿಸಿ ಮದುವೆ ಮಾತುಕತೆ ಮುಂದುವರಿಸಿ – ಅಸ್ಸಾಂ ಸಚಿವ
ಭಾರತೀಯ ಸೇನೆ ಈ ಪರೀಕ್ಷಾ ಪ್ರಯೋಗವನ್ನು ನೆರವೇರಿಸಿದ್ದು, ಡಿಆರ್​ಡಿಒ ಅಭಿವೃದ್ಧಿ ಪಡಿಸಿದ ಹಲವು ಕ್ಷಿಪಣಿಗಳನ್ನು ಸೇನೆ ಹೊಂದಿದ್ದು ಕ್ರಮವಾಗಿ ಪರೀಕ್ಷೆ ನಡೆಸುತ್ತ ಬಂದಿದೆ. ಬ್ರಹ್ಮೋಸ್ ಕ್ಷಿಪಣಿಯ ದಾಳಿ ಗುರಿಯನ್ನು ಇದೀಗ 400 ಕಿ.ಮೀ. ದೂರಕ್ಕೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ರೈತ ಪ್ರತಿಭಟನೆ – ಜೆ.ಪಿ.ನಡ್ಡಾ ಮನೆಯಲ್ಲಿ ಕೇಂದ್ರ ಸಚಿವರ ತುರ್ತುಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
