ನವದೆಹಲಿ:ಸ್ವದೇಶಿ ನಿರ್ಮಿತ 400 ಕಿ.ಮೀ. ದೂರದವರೆಗಿನ ಗುರಿ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ ವಿಸ್ತರಿತ ವ್ಯಾಪ್ತಿಯ ಸೂಪರ್​ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಬುಧವಾರ ಯಶಸ್ವಿಯಾಗಿ ಉಡಾಯಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​ಡಿಒ) ಪಿಜೆ-10 ಯೋಜನೆಯಡಿ ಈ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು. ಓಡಿಶಾದಲ್ಲಿರುವ ಕೇಂದ್ರದಿಂದ ಕ್ಷಿಪಣಿಯನ್ನು ದೇಶೀಯ ಬೂಸ್ಟರ್ ಮೂಲಕ ಉಡಾಯಿಸಲಾಗಿದೆ. ಕ್ಷಿಪಣಿ ಉಡಾವಣೆ ಯಶಸ್ವಿಯಾಗಿರುವುದಕ್ಕೆ ಡಿಆರ್​ಡಿಒ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಸೂಪರ್​ಸಾನಿಕ್ ಕ್ರೂಯಿಸ್ ಕ್ಷಿಪಣಿಗೆ ಇನ್ನಷ್ಟು ದೇಶೀಯ ಅಂಶಗಳ ಸೇರ್ಪಡೆಗೆ ಇದರಿಂದ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ವಿಸ್ತರಿತ ವ್ಯಾಪ್ತಿಯ ಕ್ಷಿಪಣಿಯ ಎರಡನೇ ಪರೀಕ್ಷೆಯಾಗಿದೆ. ಈ ಕ್ಷಿಪಣಿಯಲ್ಲಿ ದೇಶೀಯವಾಗಿ ಅಭಿವೃಧಿಪಡಿಸಲಾದ ಏರ್​ಫ್ರೇಮ್ ಮತ್ತು ಬೂಸ್ಟರ್​ಗಳಿವೆ. ಡಿಆರ್​ಡಿಒ ಮತ್ತು ರಷ್ಯಾದ ಎನ್​ಪಿಒ ಮಷಿನೊಸ್ತ್ರೊಯೆನಿಯಾ (ಎನ್​ಪಿಎಂಒ) ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿವೆ.
ಇದನ್ನೂ ಓದಿ:ಅಂಬಾನಿ, ಅದಾನಿ, ಬಿರ್ಲಾ, ಪತಂಜಲಿ ಗ್ರೂಪ್‌ಗೆ ಸಿಎಂ ಆಹ್ವಾನ; 55 ಟಾಪ್ ಕಂಪೆನಿಗಳಿಗೆ ವೈಯಕ್ತಿಕ ಪತ್ರ ಬರೆದ ಬಿಎಸ್‌ವೈ
ಎಲ್ಲಿಂದ ಉಡಾಯಿಸಬಹುದು?: ಬ್ರಹ್ಮೋಸ್ ಸೂಪರ್​ಸಾನಿಕ್ ಕ್ರೂಯಿಸ್ ಕ್ಷಿಪಣಿಯಾಗಿದೆ. ಅದನ್ನು ಜಲಾಂತರ್ಗಾಮಿಗಳು, ಸಮರ ನೌಕೆಗಳು ಮತ್ತು ಯುದ್ಧ ವಿಮಾನಗಳಿಂದ ಉಡಾಯಿಸಬಹುದಾಗಿದೆ. ಭೂಮಿಯಿಂದಲೂ ಉಡಾಯಿಸಬಹುದು.
Brahmos Supersonic Cruise Missile has achieved yet another milestone with successful test launch showcasing enhanced operational capabilities and additional indigenous technologies. Congratulations to all the scientists and engineers.@DRDO_India@BrahMosMissile
— Narendra Modi (@narendramodi)September 30, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
