ನವದೆಹಲಿ:ಮದುವೆ ಸಮಾರಂಭದಲ್ಲಿ ಹಿಂದು ಮಹಿಳೆಯನ್ನು ಅಪಹರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಪಾಕಿಸ್ತಾನ ಹೈಕಮಿಷನ್‌ನ ಹಿರಿಯ ಅಧಿಕಾರಿಗೆ ಸಮನ್ಸ್​ ನೀಡಿದೆ.
ಎರಡು ದಿನಗಳ ಹಿಂದೆ ಸಿಂಧ್ ಪ್ರಾಂತ್ಯದ ಹಲಾ ನಗರದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಹಿಂದು ಮಹಿಳೆಯನ್ನು ಅಪಹರಿಸಲಾಗಿತ್ತು. ಆಕೆಗೆ ಈಗಾಗಲೇ ಪಾಕಿಸ್ತಾನದವನೊಂದಿಗೆ ಮದುವೆಯಾಗಿತ್ತು. ಇದಕ್ಕೆ ಆಕೆಯ ಮನೆಯವರ ವಿರೋಧವಿದ್ದು, ಅವರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಹರಣವನ್ನು ತೀವ್ರವಾಗಿ ಖಂಡಿಸಿರುವ ಸರ್ಕಾರ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತುರ್ತು ಪ್ರಕರಣ ಎಂದು ಪರಿಗಣಿಸಬೇಕು ಎಂದಿದೆ.
ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆ ಮಾಡುವುದು ಇಮ್ರಾನ್​ ಖಾನ್​ ಸರ್ಕಾರದ ಜವಾಬ್ದಾರಿ. ಅದರಲ್ಲಿ ಹಿಂದು ಸಮುದಾಯವೂ ಒಂದು. ಅವರ ರಕ್ಷಣೆ ಹೊರಬೇಕು ಎಂದಿದೆ.
ಭಾರತಿ ಬಾಯಿ ಅವರನ್ನು ಶಸ್ತ್ರ ಸಜ್ಜಿತ ಯುವಕರ ತಂಡ ಅಪಹರಿಸಿತು. ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದ್ದು, ಶಾರುಕ್​ ಗುಲ್​ ಎಂಬುವವನೊಂದಿಗೆ ಮದುವೆ ಮಾಡಲಾಗಿದೆ ಎಂದು ಆಲ್​ ಪಾಕಿಸ್ತಾನ ಹಿಂದು ಕೌನ್ಸಿಲ್​ ಆರೋಪಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
