ನವದೆಹಲಿ:ರೂಪಾಂತರಗೊಂಡ ಕರೊನಾ ವೈರಸ್ ಕಾಟ ಬ್ರಿಟನ್​ನಲ್ಲಿ ಹೆಚ್ಚಾದ ಕಾರಣ ಅಲ್ಲಿಂದ ಬರುವ ಮತ್ತು ಅಲ್ಲಿಗೆ ಹೋಗುವ ವಿಮಾನಗಳ ಹಾರಾಟವನ್ನು ಭಾರತ ಇಂದಿನಿಂದಲೇ ಅನ್ವಯವಾಗುವಂತೆ ರದ್ದುಗೊಳಿಸಿದೆ. ಈ ನಿರ್ಬಂಧ ಇಂದು ರಾತ್ರಿ 12 ಗಂಟೆಗೆ ಜಾರಿಗೆ ಬರಲಿದ್ದು, 31ನೇ ತಾರೀಕಿನ ಮಧ್ಯರಾತ್ರಿ 12 ರ ತನಕ ಜಾರಿಯಲ್ಲಿರಲಿದೆ.
ನಾಗರಿಕ ವಿಮಾನ ಯಾನ ಸಚಿವಾಲಯ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಬ್ರಿಟನ್​ನ ಸದ್ಯದ ವಿದ್ಯಮಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಅಲ್ಲಿಂದ ಹೊರಡುವ ವಿಮಾನಗಳು ಭಾರತ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತಿದೆ. ಇದು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 31 ರಾತ್ರಿ 12 ಗಂಟೆ ತನಕ ಚಾಲ್ತಿಯಲ್ಲಿರಲಿದೆ ಎಂದು ಹೇಳಿದೆ.
ಇದನ್ನೂ ಓದಿ:ರೂಪಾಂತರಗೊಂಡ ವೈರಸ್​ ಕಾಟಕ್ಕೆ ಕಂಗಾಲಾದ್ರು ಬ್ರಿಟನ್​ವಾಸಿಗಳು: ಬ್ರಿಟನ್​ ಜತೆಗೆ ವಿವಿಧ ರಾಷ್ಟ್ರಗಳ ಸಂಪರ್ಕ ಕಟ್​
ಇಂದು ಮಧ್ಯರಾತ್ರಿಯೊಳಗೆ ಬ್ರಿಟನ್​ನಿಂದ ಭಾರತಕ್ಕೆ ಆಗಮಿಸಿದ ಎಲ್ಲ ಪ್ರಯಾಣಿಕರೂ ಕಡ್ಡಾಯವಾಗಿ ಆರ್​ಟಿ-ಪಿಸಿಆರ್ ಟೆಸ್ಟ್​ಗೆ ಒಳಗಾಗಬೇಕು. ವಿಮಾನ ನಿಲ್ದಾಣದಲ್ಲೇ ಇದರ ಸೌಲಭ್ಯವಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ರೂಪಾಂತರಗೊಂಡ ವೈರಸ್​ ಬಗ್ಗೆ ಪ್ಯಾನಿಕ್ ಆಗಬೇಡಿ, ಸರ್ಕಾರ ಅಲರ್ಟ್ ಆಗಿದೆ- ಕೇಂದ್ರ ಆರೋಗ್ಯ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 15 =
Remember me
