ಆಗ್ರಾ:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿ ಹಿನ್ನೆಲೆಯಲ್ಲಿ ಅಹಮದಾಬಾದ್​ನಲ್ಲಿನ ಸ್ಲಮ್​ಗಳಿಗೆ ಗೋಡೆ ನಿರ್ಮಿಸಿದ್ದು ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೊಂದು ಯೋಜನೆಯನ್ನು ಭಾರತ ಸರ್ಕಾರ ಪೂರ್ಣಗೊಳಿಸಿರುವುದು ಬೆಳಕಿಗೆ ಬಂದಿದೆ. ಅದೇನೆಂದರೆ, ಬಹು ವರ್ಷಗಳ ಬಳಿಕ ತಾಜ್​ ಮಹಲಿನಲ್ಲಿನ ಎರಡು ಗೋರಿಗಳನ್ನು ಟ್ರಂಪ್​ ಭೇಟಿಗಾಗಿ ಶುಚಿಗೊಳಿಸಲಾಗಿದೆ.
ಅಹಮದಬಾದ್​ನಲ್ಲಿನ ನಮಸ್ತೆ ಟ್ರಂಪ್​ ಕಾರ್ಯಕ್ರಮ ಮುಗಿಸಿ ಅಧ್ಯಕ್ಷ ಟ್ರಂಪ್ ಕುಟುಂಬ ಸಮೇತ​ ನೇರವಾಗಿ ತಾಜ್​ ಮಹಲ್​ ವೀಕ್ಷಣೆಗೆ ತೆರಳಿದರು. ಹೀಗಾಗಿ ಟ್ರಂಪ್​ ಆಗಮನಕ್ಕೂ ಮುನ್ನ ತಾಜ್​ ಮಹಲ್​ ಸುತ್ತಲೂ ಸ್ವಚ್ಛಗೊಳಿಸಲಾಗಿತ್ತು. ವಿಶೇಷವೆಂದರೆ ತಾಜ್​ ಮಹಲಿನೊಳಗಿರುವ ಒಂದೇ ರೀತಿಯ ಎರಡು ಗೋರಿಗಳನ್ನು ಸುಮಾರು 300 ವರ್ಷಗಳ ಬಳಿಕ ಶುಚಿಗೊಳಿಸಲಾಗಿದೆ. ಗೋರಿಗಳಲ್ಲಿ ಉಂಟಾಗಿದ್ದ ರಂಧ್ರಗಳಿಗೆ ಜೇಡಿ ಮಣ್ಣನ್ನು ಪ್ಯಾಕ್​ ಮಾಡಿ ಮರು ಜೀವವನ್ನು ನೀಡಲಾಗಿದೆ.
ಭಾರತೀಯ ಮಹಿಳೆಯು ಸುಂದರವಾಗಿ ಕಾಣಲು ಮುಖಕ್ಕೆ ಹಾಕುವ ಫೇಸ್​ಪ್ಯಾಕ್​ನಿಂದ ಈ ಜೇಡಿ ಮಣ್ಣಿನ ಪ್ಯಾಕ್ ಯೋಜನೆ​ ಸ್ಫೂರ್ತಿ ಪಡೆದುಕೊಂಡಿದೆ. ಈ ಹಿಂದೆ ಅರಿಶಿನ ನೀರಿನ ಮೂಲಕ ತೊಳೆಯಲಾಗುತ್ತಿತ್ತು ಎಂದು ತಿಳಿದುಬಂದಿದೆ. ತಾಜ್​ ಮಹಲ್​ಗೆ ಈವರೆಗೂ ಐದು ಬಾರಿ ಜೇಡಿ ಮಣ್ಣಿನ ಪ್ಯಾಕ್​ ಮಾಡಲಾಗಿದೆ. ಆದರೆ, ಅದರ ಒಳಗಿರುವ ಗೋರಿಗಳಿಗೆ ಒಮ್ಮೆಯೂ ಪ್ಯಾಕ್​ ಮಾಡಿರಲಿಲ್ಲ. ಆ ಗೋರಿಗಳು ಮೊಘಲ್​ ರಾಜ ಶಹಜಹಾನ್​ ಮತ್ತು ಆತನ ಪತ್ನಿ ಮುಮ್ತಾಜ್​ರದ್ದಾಗಿದೆ.
ನಮಸ್ತೆ ಟ್ರಂಪ್​ ಕಾರ್ಯಕ್ರಮ ಹಿನ್ನೆಲೆಯಲ್ಲಿ ಟ್ರಂಪ್​ ಕುಟುಂಬ ಸಮೇತ ತಾಜ್​ ಮಹಲ್​ಗೆ ಇಂದು ಭೇಟಿ ನೀಡಿದ್ದರು. ಆದರೆ, ಗೋರಿಗಳ ಬಳಿ ತೆರಳಲು ಇರುವ ಪ್ರವೇಶ ದ್ವಾರ ಕೇವಲ 5 ಅಡಿ ಇದ್ದುದ್ದರಿಂದ ಗೋರಿಗಳನ್ನು ನೋಡಲು ಸಾಧ್ಯವಾಗಲಿಲ್ಲ. ಈ ಮೊದಲೇ ಟ್ರಂಪ್​ ಭದ್ರತಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. 17ನೇ ಶತಮಾನದ ಗೋರಿಗಳನ್ನು ನೋಡಲು ಟ್ರಂಪ್​ ಅವರಿಗೆ ಬಾಗುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.
ಗೋರಿಗಳನ್ನು ನೋಡಲು ವರ್ಷಕ್ಕೆ ಮೂರು ಬಾರಿ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ. ಮೊಘಲ್​ ರಾಜ್ಯ ಶಹಜಹಾನ್​ ಮರಣ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತ್ರ ತೆರೆದಿರುತ್ತದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + eighteen =
Remember me
