ಹೊಸದಿಲ್ಲಿ:ಹೂಡಿಕೆ ಸಂಬಂಧಿತ ವಂಚನೆಗಳಿಗೆ ಕಡಿವಾಣ ಹೇರಲು ಮುಂದಾಗಿರುವ ಕೇಂದ್ರ ಸರ್ಕಾರ, ಭಾರತೀಯರನ್ನು ಗುರಿಯಾಗಿಸಿಕೊಂಡ 100ಕ್ಕೂ ಹೆಚ್ಚು ಚೀನೀ ವೆಬ್‌ಸೈಟ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಇದೀಗ ಪ್ರಾರಂಭಿಸಲು ಸಜ್ಜಾಗಿದೆ.
ಇದನ್ನೂ ಓದಿ:ಭಾರತೀಯ ಹುಡುಗನನ್ನು ಮದುವೆ ಆಗಲಿದ್ದಾಳೆ ಪಾಕಿಸ್ತಾನಿ ವಧು; 45 ದಿನಗಳ ವೀಸಾ ನೀಡಿದ ಭಾರತ ಸರ್ಕಾರ
ಈ ಕ್ರಮವು ಚೀನೀ-ಚಾಲಿತ ಹಣಕಾಸು ವಂಚನೆಯ ಮೇಲೆ ಇತ್ತೀಚಿನ ಶಿಸ್ತುಕ್ರಮವಾಗಿದೆ. ಮೂಲಗಳ ಪ್ರಕಾರ, ಗೃಹ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಂವಹನದಲ್ಲಿ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಒತ್ತಾಯಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಸರ್ಕಾರವು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ” ಎಂದು ಉಲ್ಲೇಖಿಸಿ ಸುಮಾರು 250 ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಆದೇಶಿಸಿತು.
ಈ ಅಪ್ಲಿಕೇಶನ್‌ಗಳ ಪೈಕಿ, ಟಿಕ್​​ಟಾಕ್, ಕ್ಯಾಮ್​ಸ್ಕಾನರ್​, ಶ್ರೀನ್​ ಸೇರಿದಂತೆ ಹಲವಾರು ಆ್ಯಪ್​ಗಳನ್ನು ನಿಷೇಧಿಸಲಾಗಿತ್ತು. ಈ ಆ್ಯಪ್​ಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಡೌನ್‌ಲೋಡ್‌ ಆಗಿತ್ತು.
ಇದನ್ನೂ ಓದಿ:‘ಹಾಯ್​ ನಾನ್ನ’ ಸಿನಿಮಾ ಪ್ರಮೋಷನ್​ಗಾಗಿ ಬೆಂಗಳೂರಿಗೆ ಬಂದ ನಟ ನಾನಿ
ಗೃಹ ವ್ಯವಹಾರಗಳ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಸಂವಹನ ನಡೆಸಿ, ಈ ವೆಬ್‌ಸೈಟ್‌ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಬಲವಾಗಿ ಶಿಫಾರಸು ಮಾಡಿದೆ ಎಂದು ವಿಷಯದ ಬಗ್ಗೆ ಅರಿತ ಮೂಲಗಳು ಬಹಿರಂಗಪಡಿಸಿವೆ. ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಚಾರ ಮಾಡಲಾದ ಮೋಸಗೊಳಿಸುವ ಹೂಡಿಕೆ ಯೋಜನೆಗಳಿಗೆ ತುತ್ತಾಗುವುದರಿಂದ ಭಾರತೀಯ ಬಳಕೆದಾರರನ್ನು ರಕ್ಷಿಸುವ ಸಂಘಟಿತ ಪ್ರಯತ್ನದ ಭಾಗವಾಗಿ ಈ ಕ್ರಮವು ಹೊರಹೊಮ್ಮಲಿದೆ,(ಏಜೆನ್ಸೀಸ್).
BBKS10: ಲಿಂಗ ಪರಿವರ್ತನೆ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ನೀತು!; ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
