ನವದೆಹಲಿ:ಸ್ವದೇಶಿ ತಂತ್ರಜ್ಞಾನ ಮೂಲಕ ತಯಾರಿಸಲಾದ ಆಕಾಶ್ ಕ್ಷಿಪಣಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಯೋಜನೆಗೂ ಈ ನಿರ್ಧಾರ ಬಲ ತುಂಬಲಿದೆ. ರಕ್ಷಣಾ ಸಾಮಗ್ರಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಭಾರತ ಈಗ ಕ್ಷಿಪಣಿಗಳನ್ನು ರಫ್ತು ಮಾಡಲು ಮುಂದಾಗಿರುವುದು ಮಹತ್ವದ ಹೆಜ್ಜೆಯಾಗಿದೆ.
ಆಕಾಶ್ ಕ್ಷಿಪಣಿ ಶೇ. 96 ದೇಶೀಯ ನಿರ್ವಿುತವಾಗಿದೆ. ಇದನ್ನು ಭೂಮಿಯಿಂದ ಆಕಾಶಕ್ಕೆ ಉಡಾವಣೆ ಮಾಡಬಹುದಾಗಿದೆ. 25 ಕಿಮೀ ವ್ಯಾಪ್ತಿಯಲ್ಲಿನ ಗುರಿಯನ್ನು ಈ ಕ್ಷಿಪಣಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದನ್ನು 2014ರಲ್ಲಿ ನೌಕಾಪಡೆಗೆ ಹಾಗೂ 2015ರಲ್ಲಿ ಭೂಸೇನೆಗೆ ಸೇರ್ಪಡೆ ಮಾಡಲಾಗಿತ್ತು. ವಿವಿಧ ದೇಶಗಳಲ್ಲಿ ನಡೆದ ಡಿಫೆನ್ಸ್ ಎಕ್ಸ್​ಪೋಗಳಲ್ಲಿ ಈ ಕ್ಷಿಪಣಿ ಪ್ರದರ್ಶಿಸಲಾಗಿತ್ತು. ಅನೇಕ ದೇಶಗಳು
ಇದರ ಖರೀದಿಗೆ ಆಸಕ್ತಿ ತೋರಿದ್ದವು. ಈಗ ಕೇಂದ್ರದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಮಿತ್ರ ರಾಷ್ಟ್ರಗಳಿಗೆ ಭಾರತ ಈ ಕ್ಷಿಪಣಿ ರಫ್ತು ಮಾಡಲಿದೆ. ವಿವಿಧ ದೇಶಗಳಿಗೆ ಇವುಗಳನ್ನು ರಫ್ತು ಮಾಡುವ ಪ್ರಕ್ರಿಯೆ ಚುರುಕುಗೊಳಿಸಲು ಪ್ರತ್ಯೇಕ ಸಮಿತಿ ರಚನೆಗೂ ಕೇಂದ್ರ ಸಂಪುಟ ನಿರ್ಧರಿಸಿದೆ. ಕ್ಷಿಪಣಿ ರಫ್ತು ನಿರ್ಧಾರದಿಂದ ಭಾರತದ ಹಲವು ಭದ್ರತಾ ಸಂಸ್ಥೆಗಳಿಗೆ ಲಾಭವಾಗಲಿದೆ. ಇದು ಭಾರತದಲ್ಲೇ ಉತ್ಪಾದನೆ ಆಗುವ ಕಾರಣ ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ಸಿಗಲಿದೆ. ಭಾರತ 5 ಬಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರ ಹೊಮ್ಮಲು ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತರ ನಿರ್ಣಯಗಳು
ಎಥನಾಲ್ ಘಟಕಕ್ಕೆ ಪ್ರೋತ್ಸಾಹ
ಪೆಟ್ರೋಲ್, ಡೀಸೆಲ್​ಗಳಿಗೆ ಪರ್ಯಾಯವಾಗಿ ಬಳಸಬಹುದಾದ ಎಥನಾಲ್ ಉತ್ಪಾದನೆ ಮಾಡುವ ಹೊಸ ಘಟಕಗಳಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಇಂಥ ಘಟಕಗಳ ಸಾಲದ ಮೇಲಿನ ಬಡ್ಡಿಯ ನಿಗದಿತ ಮೊತ್ತವನ್ನು ಸರ್ಕಾರವೇ ಪಾವತಿ ಮಾಡಲಿದೆ. ಇದಕ್ಕಾಗಿ 4573 ಕೋಟಿ ರೂ.ಗಳನ್ನು ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 2020ರ ವೇಳೆಗೆ ದೇಶಕ್ಕೆ ಪ್ರತಿವರ್ಷ ಸಾವಿರ ಕೋಟಿ ಲೀಟರ್ ಎಥನಾಲ್ ಅಗತ್ಯವಾಗಲಿದೆ. ಆದರೆ ಈಗ 864 ಕೋಟಿ ಲೀಟರ್ ಉತ್ಪಾದನೆಯಾಗುತ್ತಿದೆ. ಇದಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ.
ತುಮಕೂರು ಕಾರಿಡಾರ್​ಗೆ -ಠಿ;1700 ಕೋಟಿ
ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ ಅಡಿಯಲ್ಲೇ ತುಮಕೂರು ಕಾರಿಡಾರ್ ಅಭಿವೃದ್ಧಿಗೆ 1701.81 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ನಿರ್ಧರಿಸಿದೆ. ವಿಶ್ವದರ್ಜೆಯ ಮೂಸೌಕರ್ಯ, ರಸ್ತೆ ಹಾಗೂ ರೈಲು ಸಂಪರ್ಕ ಕಲ್ಪಿಸಲು ಈ ಹಣ ವೆಚ್ಚ ಮಾಡಲಾಗುತ್ತದೆ. ಸರಕು ಸಾಗಾಣಿಕೆಗೆ ಉತ್ತೇಜನ ನೀಡಲು ಲಾಜಿಸ್ಟಿಕ್ ಹಬ್ ಸ್ಥಾಪನೆ, ಸಮರ್ಪಕ ವಿದ್ಯುತ್ ಪೂರೈಕೆ ಇನ್ನಿತರ ಅಂಶಗಳು ಈ ಯೋಜನೆಯಲ್ಲಿವೆ. ಈ ಯೋಜನೆಯಿಂದ 88,500 ಜನರಿಗೆ ಹೊಸ ಉದ್ಯೋಗ ಸಿಗಲಿದೆ. 17,700 ಚಿಲ್ಲರೆ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಹೆಚ್ಚಿನ ವಹಿವಾಟಿಗೆ ಅನುಕೂಲವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಆಂಧ್ರಪ್ರದೇಶದ ಕೃಷ್ಣಪಟ್ಟಣದಲ್ಲೂ ಇದೇ ರೀತಿಯ ಕೈಗಾರಿಕಾ ಕಾರಿಡಾರ್ ನಿರ್ವಣಕ್ಕೆ ಅನುಮೋದನೆ ನೀಡಲಾಗಿದೆ. ಯುಪಿಎ-2 ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್್ಜ ) ಘೊಷಣೆ ಆಗಿದ್ದು, ಇದಕ್ಕೆ 2015ರಲ್ಲಿ ತುಮಕೂರಿನ ವಸಂತನರಸಾಪುರದಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯಕ್ಕೆ 13,327 ಎಕರೆ ಪ್ರದೇಶ ಭೂಸ್ವಾಧೀನ ಪಡಿಸಿಕೊಳ್ಳಲು ಒಪ್ಪಿಗೆ ನೀಡಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
