ನವದೆಹಲಿ:ಭಾರತ ಪ್ರವಾಸದಲ್ಲಿರುವ ಕೀನ್ಯಾ ಅಧ್ಯಕ್ಷ ವಿಲಿಯಂ ಸಮೋಯಿ ರುಟೊ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ಮೋದಿ, ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ ಕೀನ್ಯಾಗೆ 250 ಮಿಲಿಯನ್​ ಡಾಲರ್​ ನೀಡುವ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದಾರೆ.
ಭಯೋತ್ಪಾದನೆ ಅತ್ಯಂತ ಗಂಭೀರ ಸವಾಲು ಎಂದು ಭಾರತ ಮತ್ತು ಕೀನ್ಯಾ ನಂಬಿದೆ. ಭಯೋತ್ಪಾದನಾ ನಿಗ್ರಹ ಸಹಕಾರ ಹೆಚ್ಚಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ ಎಂದರು. ಜಿ20ಯನ್ನು ಮೋದಿ ಯಶಸ್ವಿಯಾಗಿ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರುಟೋ, ಮೋದಿಯವರಿಂದಾಗಿ ಆಫ್ರಿಕದ ಒಕ್ಕೂಟ ಜಿ20 ಸದಸ್ಯ ಹೊಂದುವಂತಾಗಿದೆ ಎಂದು ಹೇಳಿದರು.
ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಯಾವಾಗಲೂ ಆಫ್ರಿಕಾಗೆ ಹೆಚ್ಚಿನ ಆದ್ಯತೆ ನೀಡಿದೆ. ಕಳೆದ ಒಂದು ದಶಕದಲ್ಲಿ ಮಿಷನ್​ ಮೋಡ್​ನಲ್ಲಿ ಖಂಡದೊಂದಿಗೆ ತನ್ನ ಒಟ್ಟಾರೆ ಸಂಬಂಧ ವಿಸ್ತರಿಸಿದೆ. ಅಧ್ಯ ರುಟೊ ಅವರ ಭಾರತ ಭೇಟಿಯ ದ್ವಿಪಯ ಸಂಬಂಧ ಬಲಪಡಿಸುವುದಲ್ಲದೆ, ಆಫ್ರಿಕಾದೊಂದಿಗಿನ ನಮ್ಮ ಸಂಬಂಧಗಳಿಗೆ ಹೊಸ ಚೈತನ್ಯ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ.
ಇಂಡೋ-ಪೆಸಿಫಿಕ್​ ಉಲ್ಲೆಖಿಸಿದ ಮೋದಿ, ಭಾರತ ಮತ್ತು ಕೀನ್ಯಾ ಈ ಪ್ರದೇಶದಲ್ಲಿ ನಿಕಟ ಸಹಕಾರ ಹೊಂದಿದ್ದು ಅದು ಮುನ್ನಡೆಯಲಿದೆ. ಭಾರತ-ಕೀನ್ಯಾ ಆರ್ಥಿಕ ಸಹಕಾರದ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಎರಡೂ ಕಡೆಯವರು ಹೊಸ ಅವಕಾಶಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತಾರೆ ಎಂದೂ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
