ಮಾಸ್ಕೋ/ನವದೆಹಲಿ :ರಷ್ಯಾದ ಸ್ಪುಟ್ನಿಕ್​ ವಿ ಕರೊನಾ ಲಸಿಕೆಯ ಉತ್ಪಾದನೆಯನ್ನು ಆಗಸ್ಟ್​ನಲ್ಲಿ ಭಾರತ ಆರಂಭಿಸಲಿದ್ದು, 850 ಮಿಲಿಯನ್​ ಡೋಸ್​ಗಳನ್ನು ಉತ್ಪಾದಿಸಲಿದೆ. ಇದರಿಂದ ಭಾರತದ ಲಸಿಕೆ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಜಗತ್ತಿನಲ್ಲಿ ಬಳಸಲಾಗುವ ಒಟ್ಟು ಸ್ಪುಟ್ನಿಕ್​ ವಿ ಲಸಿಕೆಗಳಲ್ಲಿ ಶೇ.65 ರಿಂದ 70 ರಷ್ಟು ಮೇಡ್​ ಇನ್​ ಇಂಡಿಯಾ ಆಗಲಿವೆ ಎಂದು ರಷ್ಯಾಗೆ ಭಾರತದ ಎನ್ವಾಯ್​ ಆಗಿರುವ ಅಂಬಾಸಿಡಾರ್ ಡಿ.ಬಿ. ವೆಂಕಟೇಶ್ ವರ್ಮ ಹೇಳಿದ್ದಾರೆ.
ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಮ, ಈಗಾಗಲೇ ಭಾರತಕ್ಕೆ 1,50,000 ಡೋಸ್​ ಮತ್ತು 60,000 ಡೋಸ್​ ಸಿದ್ಧ ಲಸಿಕೆಗಳನ್ನು ಎರಡು ಕಂತುಗಳಲ್ಲಿ ರಷ್ಯಾ ಪೂರೈಸಿದೆ. ಮೇ ಅಂತ್ಯಕ್ಕೆ ಇನ್ನೂ 3 ಮಿಲಿಯನ್ ಡೋಸ್​ಗಳನ್ನು ಬಲ್ಕ್​​ನಲ್ಲಿ ಪೂರೈಸಲಿದೆ ಎಂದರು. “ಇವನ್ನು ಭಾರತದಲ್ಲೇ ಫಿಲ್​ ಮಾಡಲಾಗುವುದು. ಅದನ್ನು ಫಿಲ್ ಅಂಡ್ ಫಿನಿಶ್​ ಎಂದು ಕರೆಯುತ್ತಾರೆ. ಜೂನ್​ನಲ್ಲಿ ಈ ಸಂಖ್ಯೆಯು 5 ಮಿಲಿಯನ್​ಗೆ ಏರಲಿದೆ. ಮತ್ತು ಆಗಸ್ಟ್​​ನಲ್ಲಿ ಭಾರತದಲ್ಲೇ ಉತ್ಪಾದನೆ ಆರಂಭವಾಗಲಿದೆ” ಎಂದಿದ್ದಾರೆ.
ಇದನ್ನೂ ಓದಿ:17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !
“ಸ್ಪುಟ್ನಿಕ್​ ಲಸಿಕೆಯನ್ನು ಭಾರತದಲ್ಲಿ ಮೂರು ಹಂತಗಳಲ್ಲಿ ಒದಗಿಸಲಾಗುತ್ತಿದೆ. ಮೊದಲನೆಯದಾಗಿ, ರಷ್ಯಾದಿಂದ ಪೂರ್ಣ ಸಿದ್ಧವಾಗಿ ಪೂರೈಕೆ – ಅದು ಈಗಾಗಲೇ ಶುರುವಾಗಿದೆ. ಎರಡನೆಯದಾಗಿ ಆರ್​ಡಿಐಎಫ್​ಅನ್ನು ಬಲ್ಕ್​ನಲ್ಲಿ ಭಾರತಕ್ಕೆ ಕಳುಹಿಸಲಾಗುವುದು. ಅದು ಬಳಕೆಗೆ ಸಿದ್ಧವಾಗಿರುತ್ತದೆ, ಆದರೆ, ಪ್ರತ್ಯೇಕ ಬಾಟಲಿಗಳಿಗೆ ಭಾರತದಲ್ಲಿ ತುಂಬಲಾಗುತ್ತದೆ. ಮೂರನೆಯದಾಗಿ ಇಲ್ಲೇ ಉತ್ಪಾದನೆಯಾಗುತ್ತದೆ” ಎಂದಿದ್ದಾರೆ.
“ಮತ್ತೊಂದು ಒಂದೇ ಡೋಸ್​ ಲಸಿಕೆಯಾದ ‘ಸ್ಪುಟ್ನಿಕ್ ಲೈಟ್​’ಅನ್ನು ಒದಗಿಸಲೂ ರಷ್ಯಾ ಪ್ರಸ್ತಾವನೆ ನೀಡಿದೆ. ಭಾರತದಲ್ಲಿ ಅದಕ್ಕೆ ನಿಯಂತ್ರಕ ಅನುಮೋದನೆಗಳು ಇನ್ನೂ ಪೂರ್ಣವಾಗಿಲ್ಲ. ಕಾನೂನುರೀತ್ಯ ಅನುಮೋದನೆ ಸಿಕ್ಕ ಮೇಲೆ ಅದೂ ಕೂಡ ಭಾರತ ಮತ್ತು ರಷ್ಯಾದ ನಡುವಣ ಸಹಕಾರದ ಕ್ಷೇತ್ರವಾಗಲಿದೆ” ಎಂದು ವರ್ಮ ಹೇಳಿದ್ದಾರೆ. ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನಿರ್ವಹಿಸುತ್ತಿರುವ ಡಾ.ರೆಡ್ಡೀಸ್​ ಲ್ಯಾಬರೇಟರೀಸ್ ಮೇ14 ರಂದು ಅದನ್ನು ಅಧಿಕೃತವಾಗಿ ಲಾಂಚ್​ ಮಾಡಿದೆ. ಅದರ ಬೆಲೆಯು ಡೋಸ್​ಗೆ 948 ರೂ. ಪ್ಲಸ್​ ಜಿಎಸ್​ಟಿ ಆಗಿರಲಿದೆ ಎನ್ನಲಾಗಿದೆ.(ಏಜೆನ್ಸೀಸ್)
ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

ಭವಾನಿಪುರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಮಮತಾ ಬ್ಯಾನರ್ಜಿ

ಅರ್ಧದಷ್ಟು ಭಾರತೀಯರು ಮಾಸ್ಕ್​ ತೊಡುತ್ತಿಲ್ಲ! ಶೇ.7 ಜನ ಸರಿಯಾಗಿ ತೊಡುತ್ತಿದ್ದಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
