ವಾಷಿಂಗ್ಟನ್/ದೆಹಲಿ:ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹಾಗೂ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು, 2+2 ಸಚಿವಾಲಯ ಮಟ್ಟದ ಸಭೆಗೆ ಸಿದ್ಧತೆ ನಡೆದಿದೆ. ಇದು ಮೂರನೇ ಆವೃತ್ತಿಯ ಸಭೆಯಾಗಿದೆ. ಚೀನಾದಿಂದಾಗಿ ಜಗತ್ತು ಸಂಕಷ್ಟ ಅನುಭವಿಸುತ್ತಿದ್ದು, ವಿಶೇಷವಾಗಿ ಅಮೆರಿಕ ಮತ್ತು ಭಾರತ ದೇಶಗಳು ವ್ಯೂಹಾತ್ಮಕ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿನ ಈ ಸಭೆ ಮಹತ್ವ ಪಡೆದುಕೊಂಡಿದೆ.
ಈ ಸಭೆಯು ಮುಂದಿನವಾರ 26 ಮತ್ತು 27ರಂದು ನಿಗದಿಯಾಗಿದ್ದು, ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸೇನಾ ಸಂಬಂಧ, ಬೇಹುಗಾರಿಕಾ ಮಾಹಿತಿ ವಿನಿಮಯ ಮತ್ತು ಚೀನಾ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸವಾಲುಗಳ ಕುರಿತು ಪ್ರಮುಖವಾಗಿ ಚರ್ಚೆಯಾಗಲಿದೆ.
ಇದನ್ನೂ ಓದಿ:ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್​
ಈ ವಿಚಾರವನ್ನು ಮೈಕ್ ಪೊಂಪಿಯೋ ಹೇಳಿದ್ದು, ಕಾತರದಿಂದ ಸಭೆಯನ್ನು ಎದುರು ನೋಡುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ, ಮುಂದಿನ ತಿಂಗಳು ಭಾರತದ ಕರಾವಳಿಯಲ್ಲಿ ನಡೆಯಲಿರುವ ಅತಿ ದೊಡ್ಡ ಮಟ್ಟದ ಮಲಬಾರ್ ನೌಕಾ ಕಸರತ್ತಿನಲ್ಲಿ ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾದ ನೌಕಾಪಡೆಗಳು ಪಾಲ್ಗೊಳ್ಳಲಿವೆ. (ಏಜೆನ್ಸೀಸ್)
I'm also sure that my meetings will also include discussions on how free nations can work together to thwart the threats posed by the Chinese Communist Party: US secretary of state, Mike Pompeohttps://t.co/mTwUfvwJ5u
— ANI (@ANI)October 21, 2020

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಆಸ್ತಿ ನವೆಂಬರ್ 10ಕ್ಕೆ ಹರಾಜು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 3 =
Remember me
