ನವದೆಹಲಿ:ಅಬುಧಾಬಿಯ ರಾಜಕುಮಾರ ಶೇಖ್ ಖಾಲೇದ್ ಬಿನ್ ಮೊಹಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹಲವು ಮಹತ್ವದ ವಿಷಯಗಳ ಕುರಿತು ರ್ಚಚಿಸಿದ್ದು, ಇಂಧನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉಭಯ ದೇಶಗಳ ನಡುವೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ (ಎಡಿಎನ್​ಒಸಿ) ಮತ್ತು ಭಾರತೀಯ ತೈಲ ನಿಗಮ ಮಧ್ಯೆ ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಗಾಗಿ ದೀರ್ಘಾವಧಿ ಒಪ್ಪಂದ ಏರ್ಪಟ್ಟಿದೆ. ಎಡಿಎನ್​ಒಸಿ ಮತ್ತು ಇಂಡಿಯಾ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ ನಡುವೆ ಇನ್ನೊಂದು ಒಪ್ಪಂದ ಏರ್ಪಟ್ಟಿದೆ. ಬಾರಾಕಾಶ್ ಅಣು ವಿದ್ಯುತ್ ಘಟಕದ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎಮಿರೇಟ್ಸ್ ನ್ಯೂಕ್ಲಿಯರ್ ಎನರ್ಜಿ ಕಂಪನಿ ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೆರೇಷನ್ ಆಫ್ ಇಂಡಿಯಾ ನಡುವೆ ಒಪ್ಪಂದವಾಗಿದೆ. ಭಾರತದಲ್ಲಿ ಫುಡ್ ಪಾರ್ಕ್​ಗಳನ್ನು ಸ್ಥಾಪಿಸುವ ಸಂಬಂಧ ಗುಜರಾತ್ ಸರ್ಕಾರ ಮತ್ತು ಅಬುಧಾಬಿ ಮಧ್ಯೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಗಾಜಾ ಪ್ರಸ್ತಾಪ: ಪ್ರಸ್ತುತ ಗಾಜಾ ಪಟ್ಟಿಯಲ್ಲಿನ ಪರಿಸ್ಥಿತಿ ಸೇರಿದಂತೆ ಹಲವು ಜಾಗತಿಕ ವಿದ್ಯಮಾನಗಳ ಕುರಿತು ಮೋದಿ ಮತ್ತು ಅಲ್​ನಹ್ಯಾನ್ ಮಾತುಕತೆ ನಡೆಸಿದರು.
ಜೈಶಂಕರ್ ಮಾತುಕತೆ
ಸೌದಿ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ರಿಯಾಧ್​ನಲ್ಲಿ ಕೊಲ್ಲಿ ರಾಷ್ಟ್ರಗಳ ಸಚಿವರ ಜತೆ ಹಲವು ಸಭೆಗಳನ್ನು ನಡೆಸಿದ್ದಾರೆ. ಭಾರತ- ಗಲ್ಪ್ ಸಹಕಾರ ಪರಿಷತ್ (ಜಿಸಿಸಿ) ವಿದೇಶಾಂಗ ಸಚಿವರ ಮೊದಲ ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ರಿಯಾಧ್ ತಲುಪಿದ್ದಾರೆ. ಕತಾರ್ ಪ್ರಧಾನಿ ಮೊಹಮದ್ ಬಿನ್ ಅಬ್ದುಲ್​ರಹಮಾನ್ ಬಿನ್ ಜಸ್ಸಿಮ್ ಅಲ್ ಥಾನಿ, ಸೌದಿ ಅರೇಬಿಯಾ, ಬಹ್ರೇನ್, ಒಮಾನ್, ಕುವೈತ್​ನ ವಿದೇಶಾಂಗ ಸಚಿವರ ಜತೆ ಸೋಮವಾರ ಜೈಶಂಕರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven − seven =
Remember me
