ವಾಷಿಂಗ್ಟನ್:ಪಾಕಿಸ್ತಾನ ಪ್ರಚೋದನಾಕಾರಿ ವರ್ತನೆಯನ್ನು ಬಿಡದಿದ್ದರೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಸೇನಾ ಕಾರ್ಯಾಚರಣೆ ಮೂಲಕ ಉತ್ತರ ನೀಡಲು ಹಿಂಜರಿಯುವುದಿಲ್ಲ ಎಂದು ಅಮೆರಿಕದ ಬೇಹುಗಾರಿಕಾ ಸಮೂಹ ಅಭಿಪ್ರಾಯಪಟ್ಟಿದೆ. ಭಾರತ ಮತ್ತು ಚೀನಾ ನಡುವೆ ಹೆಚ್ಚಿನ ಉದ್ವಿಗ್ನತೆ ಗೋಚರಿಸುತ್ತಿರುವುದಾಗಿಯೂ ಅದು ಹೇಳಿದೆ.
ಈ ದಶಕದಲ್ಲಿ ಅತ್ಯಂತ ಗಂಭೀರ ಕದನವೆಂದು ಪರಿಗಣಿಸಲ್ಪಟ್ಟ ಗಲ್ವಾನ್ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಮಧ್ಯೆ ಪರಿಸ್ಥಿತಿ ವಿಷಮಿಸಿದ್ದರೂ, ಗಡಿಯಲ್ಲಿ ಶಾಂತಿ ಕಾಪಾಡುವ ದ್ವಿಪಕ್ಷೀಯ ಮಾತುಕತೆ ಸೇನಾ ಕಮಾಂಡರ್​ಗಳ ಹಂತದಲ್ಲಿ ಜಾರಿಯಲ್ಲಿದೆ. ಜತೆಗೆ ರಾಜತಾಂತ್ರಿಕವಾಗಿಯೂ ಎರಡೂ ದೇಶಗಳ ಅಧಿಕಾರಿ ಗಳು ಚರ್ಚೆ ನಡೆಸುತ್ತಿದ್ದಾರೆ. ಇದರಿಂದ ಬಹುತೇಕ ಸೂಕ್ಷ್ಮ ಸ್ಥಳಗಳಲ್ಲಿ ಸೇನೆ ಹಿಂಪಡೆಯುವ ಕಾರ್ಯ ಎರಡೂ ಕಡೆ ಆಗಿದೆ. ಆದರೆ ಗಲ್ವಾನ್ ಘರ್ಷಣೆಗೂ ಮೊದಲು ಇದ್ದಷ್ಟು ವಿಶ್ವಾಸ ಉಭಯ ದೇಶಗಳ ಮಧ್ಯೆ ಈಗಿಲ್ಲ. ಹೀಗಾಗಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತೆ ಇದೆ ಎಂದು ಅಮೆರಿಕದ ಕಾಂಗ್ರೆಸ್​ನಲ್ಲಿ (ಸಂಸತ್) ಬುಧವಾರ ಮಂಡನೆಯಾದ ರಾಷ್ಟ್ರೀಯ ಬೇಹುಗಾರಿಕಾ ವಾರ್ಷಿಕ ವರದಿ ತಿಳಿಸಿದೆ.
ಇದನ್ನೂ ಓದಿ:ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…
2019ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ಭಯೋ ತ್ಪಾದಕ ದಾಳಿ, ಅದಕ್ಕೆ ಭಾರತ ಏರ್​ಸ್ಟ್ರೈಕ್ ಮೂಲಕ ನೀಡಿದ ತೀಕ್ಷ್ಣ ಪ್ರತಿಕ್ರಿಯೆಯಿಂದ ಅಣ್ವಸ್ತ್ರ ಸಜ್ಜಿತ ದೇಶಗಳ ಮಧ್ಯೆಯ ರಾಜತಾಂತ್ರಿಕ ಸಂಬಂಧ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಗಡಿ ನಿಯಂತ್ರಣ ರೇಖೆ (ಎಲ್​ಒಸಿ)ಯಲ್ಲಿ ಕದನವಿರಾಮವನ್ನು ಉಭಯ ದೇಶಗಳು ನವೀಕರಿಸಿವೆ. ಇದು ಶಾಂತಿಯನ್ನು ಬಲಪಡಿಸುವ ಹೆಜ್ಜೆಯಾದರೂ, ಪಾಕ್ ಇತಿಹಾಸವನ್ನು ಗಮನಿಸಿದರೆ ಕದನವಿರಾಮದ ಉಲ್ಲಂಘನೆಯ ಅನೇಕ ನಿದರ್ಶನಗಳು ಸಿಗುತ್ತವೆ. ಇಂಥ ಒಂದು ದುರ್ಘಳಿಗೆಯಲ್ಲಿ ಗಡಿಯಲ್ಲಿ ಒಂದು ಕಿಡಿ ಹೊತ್ತಿಕೊಂಡರೂ ಅದು ದೊಡ್ಡ ಸಂಘರ್ಷಕ್ಕೆ ಕಾರಣ ವಾಗುವ ಸಾಧ್ಯತೆ ಇದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ತೆರಿಗೆ ಹೆಚ್ಚಿಸಿದ ಪಾಕಿಸ್ತಾನಐಷಾರಾಮಿ ವಸ್ತುಗಳ ಮೇಲಿದ್ದ ಶೇ. 17ರ ಮಾರಾಟ ತೆರಿಗೆಯನ್ನು ಪಾಕ್ ಸರ್ಕಾರ ಶೇ. 25ಕ್ಕೆ ಹೆಚ್ಚಿಸಿದೆ. ಅತ್ಯಾಧುನಿಕ ಮೊಬೈಲ್ ಫೋನ್, ಆಮದು ಮಾಡಿ ಕೊಂಡ ಆಹಾರ, ಅಲಂಕಾರಿಕಾ ಸಾಮಗ್ರಿಗಳು ಸೇರಿ 33 ರೀತಿಯ ವಿವಿಧ ಐಷಾರಾಮಿ ವಸ್ತುಗಳಿಗೆ ಈ ತೆರಿಗೆ ಅನ್ವಯ ಆಗಲಿದೆ. ಸ್ಥಳೀಯವಾಗಿ ತಯಾರಿಸಲಾದ ಎಸ್​ಯುುವಿ, ಸಿಯುವಿ ಮತ್ತು 1,400ಸಿಸಿ ಸಾಮರ್ಥ್ಯದ ಕಾರುಗಳ ಮೇಲಿನ ತೆರಿಗೆಯನ್ನೂ ಶೇ. 25 ಹೆಚ್ಚಳ ಮಾಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕ್​ಗೆ 7 ಶತಕೋಟಿ ಡಾಲರ್ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅನೇಕ ಷರತ್ತುಗಳನ್ನು ಹಾಕಿದ್ದು, ಇದರಲ್ಲಿ ಮೊದಲ ಹಂತದಲ್ಲಿ 1.10 ಶತಕೋಟಿ ಡಾಲರ್ ಬಿಡುಗಡೆಗೆ ಮುನ್ನ ಕೆಲವು ಷರತ್ತುಗಳು ಪಾಲನೆಗೆ ಬಂದಿರಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾರಾಟ ತೆರಿಗೆ ಹೆಚ್ಚಿಸಿದೆ. ಐಎಂಎಫ್ ಷರತ್ತುಗಳನ್ನು ಪೂರೈಸಲು ಈಗಾಗಲೇ, ಇಂಧನ ತೆರಿಗೆ ಹೆಚ್ಚಳ ವಿದ್ಯುತ್ ಶುಲ್ಕದಲ್ಲಿ ಏರಿಕೆ, ರಫ್ತಿನ ಮೇಲಿದ್ದ ಸಬ್ಸಿಡಿಯನ್ನು ತೆಗೆದಿದೆ.
ಅಮೆರಿಕ ಮಾತುಕತೆಅಮೆರಿಕ ಮತ್ತು ಪಾಕ್ ಮಧ್ಯೆ ಉಗ್ರವಾದ ನಿಗ್ರಹದ ಮಾತುಕತೆಯು ಹಲವು ಸುತ್ತುಗಳಲ್ಲಿ ನಡೆಯುತ್ತಿದೆ. ಭಯೋತ್ಪಾದನೆಯ ಬೆದರಿಕೆಯು ಪ್ರಾದೇಶಿಕ ವಲಯ ಮತ್ತು ಜಾಗತಿಕ ವಾಗಿ ಕೊನೆಯಾಗಿ ಶಾಂತಿ, ಸ್ಥಿರತೆ ನೆಲಸಬೇಕೆಂಬ ಉದ್ದೇಶದಿಂದಲೇ ಅಮೆರಿಕ ಈ ಮಾತುಕತೆ ನಡೆಸುತ್ತಿದೆ ಹೊರತು ಇದನ್ನು ದ್ವಿಪಕ್ಷೀಯ ಮಟ್ಟಕ್ಕೆ ಸೀಮಿತ ಮಾಡಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೖೆಸ್ ಹೇಳಿದ್ದಾರೆ.
ಇದನ್ನೂ ಓದಿ:ದೈಹಿಕ ಸಂಬಂಧ ಬೆಳೆಸುವುದಾಗಿ ಮನೆಗೆ ಕರೆದು ಹಣ ಸುಲಿಗೆ: ಇಬ್ಬರು ಮಹಿಳೆಯರು ಸೇರಿ 6 ಮಂದಿ ಸೆರೆ
ಉಗ್ರರಿಗೆ ಪಾಕ್ ಬೆಂಬಲಭಾರತ ವಿರೋಧಿ ಉಗ್ರರ ಗುಂಪುಗಳಿಗೆ ಪಾಕ್ ಬೆಂಬಲ ನಿಲ್ಲುವವರೆಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಪಾಕಿಸ್ತಾನವನ್ನು ಗುಮಾನಿಯಿಂದಲೇ ನೋಡುತ್ತಿರುತ್ತದೆ. ಸಂಭಾವ್ಯ ಉಗ್ರದಾಳಿಯು ಉಭಯ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಮತ್ತು ಸಂಘರ್ಷದ ಅಪಾಯವನ್ನು ಹೆಚ್ಚಿಸಿದೆ. ಪಾಕ್ ಪ್ರಚೋದನೆಗೆ ಸೇನೆಯೇ ಮದ್ದು ಎಂಬ ಧೋರಣೆಯನ್ನು ಮೋದಿ ಹೊಂದಿರು ವಂತೆ ಗ್ರಾಹ್ಯವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಭಯ ದೇಶಗಳ ಮಧ್ಯೆ ದಶಕಗಳಿಂದ ಕಗ್ಗಂಟಾಗಿರುವ ಕಾಶ್ಮೀರದ ವಿವಾದ ಮತ್ತು ಗಡಿಯಾಚೆಯ ಭಯೋತ್ಪಾದನೆಗಳು ದ್ವೇಷಮಯ ವಾತಾವರಣವನ್ನು ಸದಾ ಜೀವಂತ ಇರಿಸಿದೆ. ಉಗ್ರವಾದ ಮತ್ತು ಮಾತುಕತೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಭಾರತ ಪದೆ ಪದೇ ಹೇಳುತ್ತಿದೆ. ಆದರೆ, ಚುನಾಯಿತ ಸರ್ಕಾರಕ್ಕಿಂತ ಸೇನೆಯೇ ಪ್ರಬಲವಾಗಿರುವ ಪಾಕ್​ನಲ್ಲಿ ಉಗ್ರವಾದವನ್ನು ಸಂಪೂರ್ಣವಾಗಿ ತೊಡೆದುಹಾಕುವಂತಹ ಸಂಕಲ್ಪಶಕ್ತಿ ಕಾಣುತ್ತಿಲ್ಲ. ಇತ್ತೀಚೆಗಂತೂ ಪಾಕ್​ನ ಆರ್ಥಿಕತೆ ದೈನೇಸಿ ಸ್ಥಿತಿಗೆ ಇಳಿದಿದೆ. ಇವೆಲ್ಲವೂ ಉಭಯ ದೇಶಗಳ ಮಧ್ಯೆಯ ಶಾಂತಿ ಮಾತುಕತೆಗೆ ಬಹುದೊಡ್ಡ ಅಡಚಣೆ ಆಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಇಮ್ರಾನ್ ಖಾನ್ ವಿರುದ್ಧ ಕೊಲೆ, ಭಯೋತ್ಪಾದನೆ ಕೇಸ್ಲಾಹೋರ್: ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರ 400 ಮಂದಿ ವಿರುದ್ಧ ಕೊಲೆ ಮತ್ತು ಭಯೋತ್ಪಾದನೆ ಪ್ರಕರಣ ದಾಖಲಾಗಿದೆ. ಲಾಹೋರ್​ನಲ್ಲಿ ಗುರುವಾರ ನಡೆದ ಪಕ್ಷದ ರ‍್ಯಾಲಿ ವೇಳೆ ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆದಾಗ ಒಬ್ಬ ಕಾರ್ಯಕರ್ತ ಮೃತಪಟ್ಟು, ನೂರಾರು ಜನರು ಗಾಯಗೊಂಡರು. ಈ ಘಟನೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪಾಕಿಸ್ತಾನದ ಪಿಎಂಎಲ್-ಎನ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ 11 ತಿಂಗಳಲ್ಲಿ ಇಮ್ರಾನ್ ಖಾನ್ ವಿರುದ್ಧ ದಾಖಲಾದ 80ನೇ ಪ್ರಕರಣ ಇದಾಗಿದೆ. ಪಿಟಿಐ ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆಯಲ್ಲಿ 11 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಹೇಳಲಾಗಿದೆ. ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪೊಲೀಸರ ಜತೆ ನಡೆದ ಘರ್ಷಣೆಯಲ್ಲಿ ಪಿಟಿಐ ಕಾರ್ಯಕರ್ತ ಅಲಿ ಬಿಲಾಲ್ ಮೃತಪಟ್ಟಿದ್ದ. ಇದರ ವಿರುದ್ಧ ಇಮ್ರಾನ್ ಖಾನ್ ನಿವಾಸದ ಹೊರಗೆ ಪ್ರತಿಭಟನೆ ನಡೆದಿತ್ತು. ಆಗ ಪೊಲೀಸರ ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡರು. ಪಿಟಿಐ ಕಾರ್ಯಕರ್ತನ ಕುಟುಂಬ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಹೆಸರು ಕೈಬಿಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ

ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
