ನವದೆಹಲಿ:ಅಮರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರ ಭಾರತ ಭೇಟಿಗಾಗಿ ಭಾರತ ಮತ್ತು ಯುಎಸ್​ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.
ಕಳೆದ ವರ್ಷದ ಜನವರಿ 26 ಗಣ ರಾಜ್ಯೋತ್ಸವಕ್ಕೆ ಟ್ರಂಪ್​ ಅವರನ್ನು ಭಾರತ ಆಹ್ವಾನಿಸಿತ್ತು. ಆದರೆ ಅವರಿಗೆ ಸಮಯಾವಕಾಶ ಒದಗಿರಲಿಲ್ಲ. ಕಳೆದ ಜನವರಿ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್​ ಅವರಿಗೆ ಕರೆಮಾಡಿ ಮಾತನಾಡಿದ್ದಾರೆ.
ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡ ಇಬ್ಬರು, ಭಾರತ ಮತ್ತು ಅಮೆರಿಕ ಸಂಬಂಧ, ಮತ್ತು ಟ್ರಂಪ್​ ಅವರ ಭಾರತದ ಭೇಟಿ ಬಗ್ಗೆ ಮಾತನಾಡಿದರು.
ಅಮೆರಿಕದಲ್ಲಿ ನವೆಂಬರ್​ನಲ್ಲಿ ಚುನಾವಣೆ ನಡೆಯಲಿದ್ದು ಅದಕ್ಕೂ ಮುನ್ನ ಟ್ರಂಪ್​ ಅವರು ಭಾರತಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಆಹ್ವಾನದ ಬಗ್ಗೆ ಟ್ರಂಪ್​ ಮಾಹಿತಿ ನೀಡಿದ್ದು, ಅವರು ಭಾರತಕ್ಕೆ ಆಹ್ವಾನಿಸಿದ್ದಾರೆ. ಸಮಯ ಸಿಕ್ಕಾಗ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಟ್ರಂಪ್​ ಅವರ ಭಾರತದ ಭೇಟಿಯಿಂದ ವ್ಯವಹಾರಗಳ ಸಂಬಂಧ ಸುಧಾರಿಸಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಮತ್ತು ಕಾಶ್ಮೀರದ 370ನೇ ವಿಧಿ ರದ್ಧತಿಯಾದ ಈ ಸಂದರ್ಭದಲ್ಲಿ ಟ್ರಂಪ್​ ಅವರ ಭೇಟಿ ವಿಶೇಷ ಎನಿಸಲಿದೆ. ಈ ಮೊದಲು 370ನೇ ವಿಧಿ ರದ್ಧತಿ ಬಗ್ಗೆ ಟ್ರಂಪ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 16 =
Remember me
