ಅರುಣಾಚಲ ಪ್ರದೇಶ:ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ (ಡಿ.9) ಚೀನಾದ ಸುಮಾರು 300 ಸೈನಿಕರು ಗಡಿ ಒಳಕ್ಕೆ ನುಗ್ಗುವುದಕ್ಕೆ ಭಾರಿ ತಯಾರಿ ನಡೆಸಿದ್ದರು. ಆದರೆ ಭಾರತೀಯ ಯೋಧರೂ ಉತ್ತಮವಾಗಿ ಸಿದ್ಧರಾಗುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಮುಖಾಮುಖಿಯಲ್ಲಿ ಎರಡೂ ಕಡೆಯ ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ಹೊರ ಬಂದಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ ನಡೆದ ಮುಖಾಮುಖಿಯಲಗಲಿ ಭಾರತೀಯ ಸೈನಿಕರು ಚೀನೀ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಈಗ ಬಂದಿರುವ ವರದಿಗಳ ಪ್ರಕಾರ ಭಾರತೀಯ ಯೋಧರಿಗಿಂತ ಚೀನಾದ ಸೈನಿಕರಲ್ಲಿ ಹೆಚ್ಚು ಗಾಯಗಳಾಗಿವೆ.
ಘಟನೆಯ ನಂತರ, ತವಾಂಗ್​ ಪ್ರದೇಶದಲ್ಲಿ ಭಾರತದ ಕಮಾಂಡರ್ ಪುನಃ ಶಾಂತಿಯನ್ನು ಸ್ಥಾಪಿಸಲು ಪೂರ್ವಯೋಜಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಚರ್ಚಿಸಲು ಚೀನಾದ ಸೈನಿಕರೊಂದಿಗೆ ಸಭೆಯನ್ನು ನಡೆಸಿದರು.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಎಲ್‌ಎಸಿಯ ಉದ್ದಕ್ಕೂ ಕೆಲವು ಪ್ರದೇಶಗಳಲ್ಲಿ ಗಡಿ ಸಮಸ್ಯೆಗಳಿವೆ. ಇಲ್ಲಿ ಎರಡೂ ಕಡೆಯವರು ಗಸ್ತು ತಿರುಗುತ್ತಾರೆ. ಈ ಗಡಿ ಸಮಸ್ಯೆ ಎದ್ದಿರುವುದು 2006 ರಿಂದ ಎನ್ನುವುದು ವಿಚಿತ್ರ ಸಂಗತಿ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + five =
Remember me
