ಅಹಮದಾಬಾದ್​:ತವರಿನ ಏಕದಿನ ವಿಶ್ವಕಪ್​ ಉತ್ಸವದಲ್ಲಿ ಐದು ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ಸೋಲುಣಿಸಿ ಗೆಲುವಿನ ಲಯದಲ್ಲಿರುವ ಆತಿಥೇಯ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧವೂ ಅಜೇಯ ಓಟ ವಿಸ್ತರಿಸಲು ಸಜ್ಜಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣವೆನಿಸಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಭಾರತ-ಪಾಕ್​ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ. ಅತ್ತ ಪಾಕ್​ ಕೂಡ ಸತತ 2 ಗೆಲುವಿನ ವಿಶ್ವಾಸದಲ್ಲಿರುವುದರಿಂದ ರೋಚಕ ಹಣಾಹಣಿ ನಿರೀಕ್ಷಿಸಲಾಗಿದ್ದು, ಟೀಮ್​ ಇಂಡಿಯಾ ಏಕದಿನ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಸತತ 8ನೇ ಗೆಲುವಿನ ತವಕದಲ್ಲಿದೆ.
22 ಯಾರ್ಡ್​ ಪಿಚ್​ ಮೇಲೆ ನಡೆಯುವ ಭಾರತ-ಪಾಕ್​ ನಡುವಿನ ಈ ಕ್ರಿಕೆಟ್​ ಯುದ್ಧ ಈಗಾಗಲೆ ವಿಶ್ವದ ಗಮನಸೆಳೆದಿದೆ. ನಿರೀಕ್ಷೆಗಳು ವ್ಯಾಪಕವಾಗಿ ಹರಡಿರುವ ನಡುವೆ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ತಂಡಕ್ಕೆ ಗೆಲುವು ಒಲಿಯಲಿದೆ. ಆತಿಥೇಯ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಎಲ್ಲ ಆಟಗಾರರು ಭರ್ಜರಿ ಫಾರ್ಮ್​ನಲ್ಲಿರುವ, ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡು ಫಿಟ್​ ಆಗಿರುವ ಕಾರಣ ಮತ್ತು ಇತ್ತೀಚೆಗೆ ಏಷ್ಯಾಕಪ್​ನಲ್ಲೂ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಕಾರಣದಿಂದಾಗಿ ರೋಹಿತ್​ ಶರ್ಮ ಬಳಗವೇ ಈ ಕಾದಾಟದ ಹಾಟ್ ಫೇವರಿಟ್​ ತಂಡವೆನಿಸಿದೆ. ಬಾಬರ್​ ಅಜಮ್​ ಬಳಗದ ಆಟಗಾರರಿಗೆ ಭಾರತದಲ್ಲಿ ಹೈದರಾಬಾದ್​ನಿಂದ ಹೊರಗೆ ಇದು ಮೊದಲ ಪಂದ್ಯವಾಗಿದ್ದು, ಭಾರತದ 11 ಆಟಗಾರರ ಜತೆಗೆ 1.32 ಲಕ್ಷ ಪ್ರೇಕ್ಷಕರ ಸವಾಲನ್ನೂ ಎದುರಿಸಬೇಕಾಗಿದೆ. ಮತ್ತೊಂದೆಡೆ ಭಾರತ ತಂಡಕ್ಕೂ, “ವಿಶ್ವಕಪ್​ ಗೆಲ್ಲದಿದ್ದರೂ ಪರವಾಗಿಲ್ಲ, ಪಾಕ್​ ವಿರುದ್ಧ ಸೋಲಬೇಡಿ’ ಎಂಬ ಕ್ರಿಕೆಟ್​ ಪ್ರೇಮಿಗಳ ಮಾತು ಯಾವಾಗಲೂ ಹೆಚ್ಚುವರಿ ಒತ್ತಡವಾಗಿರುತ್ತದೆ.
ಪಾಕ್​ ವೇಗಿಗಳಾದ ಶಹೀನ್​ ಷಾ ಅಫ್ರಿದಿ ಮತ್ತು ಹ್ಯಾರಿಸ್​ ರೌಫ್​ ಭಾರತದ ಬ್ಯಾಟರ್​ಗಳಿಗೆ ಸವಾಲೊಡ್ಡ ಬಲ್ಲವರಾದರೂ, ಉಪನಾಯಕ ಹಾಗೂ ಸ್ಪಿನ್ನರ್​ ಶಾದಾಬ್​ ಖಾನ್​ ಮತ್ತು ವೇಗಿ ಹಸನ್​ ಅಲಿ ಸದ್ಯ ಲಯದಲ್ಲಿರದೆ ಇರುವುದು ಭಾರತಕ್ಕೆ ಲಾಭ ತರಬಹುದು. ಸಮರ್ಥ 2ನೇ ಸ್ಪಿನ್ನರ್​ ಇರದಿರುವುದು ಪಾಕ್​ ತಂಡದ ಪ್ರಮುಖ ದೌರ್ಬಲ್ಯವಾಗಿದೆ. ಯುವವೇಗಿ ನಸೀಮ್​ ಷಾ ಗಾಯದಿಂದಾಗಿ ಅಲಭ್ಯರಾಗಿರುವುದೂ ಪಾಕ್​ ಹಿನ್ನಡೆಯಾಗಿದೆ. ಇನ್ನು ಪಾಕ್​ ಪ್ರಮುಖ ಬ್ಯಾಟರ್​ಗಳಾದ ಬಾಬರ್​ ಅಜಮ್​, ಮೊಹಮದ್​ ರಿಜ್ವಾನ್​, ಇಮಾಮ್​ ಉಲ್​ ಹಕ್​, ಅಬ್ದುಲ್ಲಾ ಶಫೀಕ್​ಗೆ ವೇಗಿ ಜಸ್​ಪ್ರೀತ್​ ಬುಮ್ರಾ, ಎಡಗೈ ಸ್ಪಿನ್ನರ್​ ಕುಲದೀಪ್​ ಯಾದವ್​ ಕಠಿಣ ಸವಾಲಾಗಲಿದ್ದಾರೆ. ಇತ್ತೀಚೆಗೆ ಏಷ್ಯಾಕಪ್​ನಲ್ಲಿ ಕೊಲಂಬೊದಲ್ಲೂ ಪಾಕ್​ ಬ್ಯಾಟರ್​ಗಳು ಕುಲದೀಪ್​ ಎದುರು ಚಡಪಡಿಸಿದ್ದರು.
ಗಿಲ್​ ಬಗ್ಗೆ ಇನ್ನೂ ಗೊಂದಲಡೆಂ ಜ್ವರದಿಂದ ಚೇತರಿಸಿಕೊಂಡಿರುವ ಯುವ ಆರಂಭಿಕ ಶುಭಮಾನ್​ ಗಿಲ್​ ಗುರುವಾರವೇ ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಅವರು ಪಾಕ್​ ಎದುರು ಆಡುವರೇ ಎಂಬುದು ಸ್ಪಷ್ಟವಾಗಿಲ್ಲ. ಗಿಲ್​ ಪಂದ್ಯಕ್ಕೆ ಶೇ. 99 ಫಿಟ್​ ಆಗಿದ್ದಾರೆ ಎಂದು ನಾಯಕ ರೋಹಿತ್​ ಶರ್ಮ ಪಂದ್ಯಕ್ಕೆ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರೂ, ಆಡುವರೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಲ್ಲ. ಗಿಲ್​ ಈಗಾಗಲೆ ಮೊದಲೆರಡು ಪಂದ್ಯ ತಪ್ಪಿಸಿಕೊಂಡಿದ್ದಾರೆ.
ಟೀಮ್​ ನ್ಯೂಸ್​:ಭಾರತ:ಶುಭಮಾನ್​ ಗಿಲ್​ ಡೆಂಯಿಂದ ಚೇತರಿಸಿ ಅಭ್ಯಾಸ ಆರಂಭಿಸಿದ್ದರೂ, ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ. 8ನೇ ಕ್ರಮಾಂಕಕ್ಕೆ ಶಾರ್ದೂಲ್​ ಠಾಕೂರ್​ಗೆ ಅಶ್ವಿನ್​ ಪೈಪೋಟಿ ಒಡ್ಡುತ್ತಿದ್ದಾರೆ. ಇನ್ನು ಪಾಕ್​ ವಿರುದ್ಧದ ಉತ್ತಮ ದಾಖಲೆ ಗಮನಿಸಿ ಅನುಭವಿ ವೇಗಿ ಮೊಹಮದ್​ ಶಮಿ ಅವರನ್ನು ಸಿರಾಜ್​ ಬದಲಿಗೆ ಆಡಿಸಿದರೂ ಅಚ್ಚರಿ ಇಲ್ಲ.ಪಾಕಿಸ್ತಾನ:ಸತತ 2 ಗೆಲುವಿನ ನಡುವೆ ಪಾಕ್​ ತಂಡದಲ್ಲಿನ ಕೆಲ ದೌರ್ಬಲ್ಯಗಳು ಬೆಳಕಿಗೆ ಬಂದಿದ್ದರೂ, ಭಾರತ ವಿರುದ್ಧ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯ ನಿರೀೆ ಇಲ್ಲ. 2 ಪಂದ್ಯಗಳಲ್ಲಿ 16 ಓವರ್​ಗಳಲ್ಲಿ 100 ರನ್​ ಬಿಟ್ಟುಕೊಟ್ಟಿದ್ದರೂ, ಶಾದಾಬ್​ ಸ್ಥಾನ ತುಂಬಬಲ್ಲ ಬೇರೆ ಸ್ಪಿನ್ನರ್​ ತಂಡದಲ್ಲಿಲ್ಲ. 3ನೇ ವೇಗಿ ಹಸನ್​ ಅಲಿ ಕೂಡ ಇನ್ನೊಂದು ಅವಕಾಶ ಪಡೆಯಬಹುದು.
ಏಕದಿನ ಮುಖಾಮುಖಿ: 134ಭಾರತ: 56ಪಾಕಿಸ್ತಾನ: 73ರದ್ದು: 5ವಿಶ್ವಕಪ್​ ಮುಖಾಮುಖಿ: 7ಭಾರತ: 7ಪಾಕಿಸ್ತಾನ: 0
ಆರಂಭ: ಮಧ್ಯಾಹ್ನ 2.00ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ
https://twitter.com/ICC/status/1712856038033039444
ಪಾಕ್​ ಎದುರು ಅಜೇಯ ದಾಖಲೆಭಾರತ ತಂಡ ಈ ಬಾರಿ 2011ರ ಸಾಧನೆ ಪುನರಾವರ್ತಿಸುವ ಮೂಲಕ 12 ವರ್ಷಗಳ ಬಳಿಕ 3ನೇ ಬಾರಿಗೆ ಏಕದಿನ ವಿಶ್ವಕಪ್​ ಗೆಲುವು, 13 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಬೇಕಾದಷ್ಟೇ ಮಹತ್ವದ ಅಂಶವೆಂದರೆ, ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್​ ಟೂರ್ನಿಯ ಅಜೇಯ ದಾಖಲೆಕಾಯ್ದುಕೊಳ್ಳುವುದು. ಪಾಕ್​ ವಿರುದ್ಧ ಏಕದಿನ ವಿಶ್ವಕಪ್​ನಲ್ಲಿ ಈ ಮುನ್ನ ಆಡಿದ ಏಳು ಪಂದ್ಯಗಳಲ್ಲೂ (1992, 1996, 1999, 2003, 2011, 2015, 2019) ಗೆದ್ದ ಸಾಧನೆ ಭಾರತ ತಂಡದ್ದಾಗಿದೆ.
ಪಂದ್ಯಕ್ಕೆ ಮುನ್ನ ಸಂಗೀತ ಸುಧೆ!ಮೋದಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಮುನ್ನ ಮಧ್ಯಾಹ್ನ 12.30ರಿಂದ ವಿಶೇಷ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲಿವುಡ್​ ಗಾಯಕರಾದ ಶಂಕರ್​ ಮಹಾದೇವನ್​, ಸುಖ್ವಿಂದರ್​ ಸಿಂಗ್​, ಅರ್ಜಿತ್​ ಸಿಂಗ್​ ಸಂಗೀತ ಸುಧೆ ಹರಿಸಲಿದ್ದಾರೆ.
11 ಸಾವಿರ ಭದ್ರತಾ ಸಿಬ್ಬಂದಿಪಂದ್ಯಕ್ಕೆ ಗುಜರಾತ್​ ಪೊಲೀಸ್​, ಎನ್​ಎಸ್​ಜಿ, ಆರ್​ಎಎ್​, ಗೃಹರಕ್ಷಣಾ ಪಡೆ ಸಹಿತ ಕ್ರೀಡಾಂಗಣದ ಸುತ್ತ ವಿವಿಧ ಭದ್ರತಾ ಏಜೆನ್ಸಿಗಳಿಂದ ಒಟ್ಟು 11 ಸಾವಿರ ರಕ್ಷಣಾ ಸಿಬ್ಬಂದಿಯನ್ನು ಬಿಗಿಭದ್ರತೆಗಾಗಿ ನಿಯೋಜಿಸಲಾಗಿದೆ.
ಟಿಕೆಟ್​ ಸೋಲ್ಡ್​ಔಟ್​ವಿಶ್ವಕಪ್​ ಪಂದ್ಯಗಳ ಟಿಕೆಟ್​ ಸೋಲ್ಡ್​ಔಟ್​ ಎಂದು “ಬುಕ್​ಮೈಶೋ’ ಹೇಳುತ್ತ ಬಂದಿದ್ದರೂ, ಆತಿಥೇಯ ಭಾರತದ 2 ಪಂದ್ಯ ಸೇರಿದಂತೆ ಇದುವರೆಗೆ 11 ಪಂದ್ಯಗಳಿಗೂ ಕ್ರೀಡಾಂಗಣ ಕಿಕ್ಕಿರಿದು ತುಂಬಿದಂತೆ ಕಾಣಿಸಿಲ್ಲ. ಚೆನ್ನೈ, ನವದೆಹಲಿಯಲ್ಲಿ ನಡೆದ ಭಾರತದ ಪಂದ್ಯಗಳ ಕೆಲ ಟಿಕೆಟ್​ಗಳನ್ನೂ ಕೊನೇಕ್ಷಣದಲ್ಲಿ ಮಾರಾಟಕ್ಕಿಟ್ಟು ಬಿಸಿಸಿಐ ಗೊಂದಲ ಎಬ್ಬಿಸಿತ್ತು. ಇದರಿಂದಾಗಿ ಪಂದ್ಯಗಳ ಸಮಯದಲ್ಲಿ ಕೆಲ ಸೀಟುಗಳು ಖಾಲಿಖಾಲಿಯಾಗಿಯೇ ಕಂಡಿದ್ದವು. ಆದರೆ ಭಾರತ&ಪಾಕ್​ ಪಂದ್ಯದ ವೇಳೆ ಮೋದಿ ಸ್ಟೇಡಿಯಂನ 1.32 ಲಕ್ಷ ಸೀಟುಗಳೂ ತುಂಬುವ ನಿರೀೆ ಇದೆ. ಬಿಸಿಸಿಐ ಇತ್ತೀಚೆಗೆ ಕೊನೇ ಹಂತವಾಗಿ ಪಂದ್ಯದ 14 ಸಾವಿರ ಟಿಕೆಟ್​ಗಳನ್ನು ಮಾರಾಟಕ್ಕಿಟ್ಟಿತ್ತು ಮತ್ತು ಅವೆಲ್ಲವೂ ಅರ್ಧ ಗಂಟೆಯಲ್ಲೇ ಖಾಲಿಯಾಗಿದ್ದವು. ಪಂದ್ಯದ ಟಿಕೆಟ್​ಗಳು ಕಾಳಸಂತೆಯಲ್ಲಿ ಕನಿಷ್ಠ 25 ಸಾವಿರ ರೂ. ಮೊತ್ತಕ್ಕೆ ಮಾರಾಟವಾಗುತ್ತಿದ್ದರೆ, ಅಹಮದಾಬಾದ್​ನಲ್ಲಿ ಹೋಟೆಲ್​ ರೂಮ್​ ಮತ್ತು ಅಲ್ಲಿಗೆ ತೆರಳುವ ವಿಮಾನ ಟಿಕೆಟ್​ ಬೆಲೆಗಳೂ ಹಲವು ಪಟ್ಟು ಏರಿಕೆ ಕಂಡಿವೆ.
ವಿಶೇಷ ಮಹತ್ವಕ್ಕೆ ಆಕ್ರೋಶಪಾಕ್​ ವಿರುದ್ಧದ ಪಂದ್ಯ ನಮಗೆ ಇನ್ನೊಂದು ಪಂದ್ಯವಷ್ಟೇ ಎಂದು ಕ್ರಿಕೆಟಿಗರು ಹೇಳುತ್ತ ಬರುತ್ತಿದ್ದರೂ, ಬಿಸಿಸಿಐ ಮತ್ತು ಐಸಿಸಿ ಹಾಗೆ ಭಾವಿಸಿದಂತಿಲ್ಲ. ವಿಶ್ವಕಪ್​ ಉದ್ಘಾಟನಾ ಸಮಾರಂಭವನ್ನೇ ರದ್ದುಗೊಳಿಸಿದ್ದ ಬಿಸಿಸಿಐ, ಇದೀಗ ಪಾಕ್​ ವಿರುದ್ಧ ಪಂದ್ಯಕ್ಕೆ ಮುನ್ನ ಸಾಂಸತಿಕ ಕಾರ್ಯಕ್ರಮ ಏರ್ಪಡಿಸಿರುವುದು ಕ್ರಿಕೆಟ್​ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಭಯೋತ್ಪಾದನೆಯನ್ನು ಪೋಷಿಸುವ ಪಾಕ್​ ವಿರುದ್ಧದ ಪಂದ್ಯಕ್ಕೆ ಯಾಕೆ ವಿಶೇಷ ಮಹತ್ವ ನೀಡಲಾಗುತ್ತಿದೆ? ಅತಿಥಿ ದೇವೋಭವ ನಮ್ಮ ನಂಬಿಕೆ ಆಗಿದ್ದರೂ, ಅದು ಅತಿಯಾಗಬಾರದು. ಯೋಧರ ಬಲಿದಾನಗಳಿಗೆ ಅವಮಾನ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.
ಮಳೆ ಸಾಧ್ಯತೆ ವಿರಳಕಳೆದ ಏಷ್ಯಾಕಪ್​ನಲ್ಲಿ ನಡೆದ ಭಾರತ&ಪಾಕ್​ ನಡುವಿನ ಎರಡೂ ಪಂದ್ಯಗಳು ಮಳೆಯಿಂದ ಅಡಚಣೆ ಎದುರಿಸಿದ್ದವು. ಈ ಪೈಕಿ ಒಂದು ಪಂದ್ಯ ರದ್ದುಗೊಂಡಿದ್ದರೆ, ಇನ್ನೊಂದು ಪಂದ್ಯ ಮರುದಿನಕ್ಕೆ ವಿಸ್ತರಿಸಲ್ಪಟ್ಟಿತ್ತು. ವಿಶ್ವಕಪ್​ನಲ್ಲೂ ಭಾರತ-ಪಾಕ್​ ಪಂದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಮಳೆ ಮುನ್ಸೂಚನೆ ಇದ್ದರೂ, ಮಳೆಯಿಂದಾಗಿ ಪಂದ್ಯ ತೊಂದರೆ ಎದುರಿಸುವ ಸಾಧ್ಯತೆ (ಶೇ. 14) ವಿರಳ ಎನ್ನಲಾಗುತ್ತಿದೆ. ಆದರೆ, ಮಳೆ ಕಾಡಿದರೆ ಈ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ವಿಶ್ವಕಪ್​ನಲ್ಲಿ ನಾಕೌಟ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನವಿದೆ.
ಪಿಚ್​ ರಿಪೋರ್ಟ್​ನ್ಯೂಜಿಲೆಂಡ್​-ಇಂಗ್ಲೆಂಡ್​ ನಡುವಿನ ಉದ್ಘಾಟನಾ ಪಂದ್ಯದ ಬಳಿಕ ಅಹಮದಾಬಾದ್​ನಲ್ಲಿ ಹಾಲಿ ವಿಶ್ವಕಪ್​ನ 2ನೇ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು ಗಮನಿಸಿದರೆ ಇಲ್ಲಿನ ಪಿಚ್​ ಬ್ಯಾಟಿಂಗ್​-ಸ್ನೇಹಿಯಂತಿದೆ. ಆದರೆ ಬ್ಯಾಟರ್​ಗಳು ಕ್ರೀಸ್​ಗೆ ಇಳಿದ ಆರಂಭದಲ್ಲಿ ಎಚ್ಚರಿಕೆಯ ಆಟವಾಡುವುದು ಅಗತ್ಯ. ಬಳಿಕ ಬಿರುಸಿನ ಆಟಕ್ಕಿಳಿದರೆ ಬೃಹತ್​ ಮೊತ್ತ ನಿರೀಕ್ಷಿಸಬಹುದು. ಇಬ್ಬನಿ ಕಾಡುವ ಸಾಧ್ಯತೆ ಇದ್ದು, ಆಗ ಚೇಸಿಂಗ್​ ತಂಡಕ್ಕೆ ಅನುಕೂಲವಾಗಲಿದೆ.
Pitch for the India vs Pakistan match. [ICC]pic.twitter.com/97H36Vig0s
— Johns. (@CricCrazyJohns)October 13, 2023

ಸ್ಟಾರ್​ ಆಗುವ ಅವಕಾಶಸಾಮಾನ್ಯ ಕ್ರಿಕೆಟ್​ ಪಂದ್ಯಕ್ಕಿಂತ ಭಾರತ&ಪಾಕ್​ ನಡುವಿನ ಪಂದ್ಯದಲ್ಲಿ ಮಿಂಚುವ ಆಟಗಾರರಿಗೆ ಕ್ರಿಕೆಟ್​ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುವ ಅವಕಾಶ ಹೆಚ್ಚಿರುತ್ತದೆ. ಚೇತನ್​ ಶರ್ಮ, ಅಜಯ್​ ಜಡೇಜಾ, ವೆಂಕಟೇಶ್​ ಪ್ರಸಾದ್​, ಹೃಷಿಕೇಶ್​ ಕಾನಿಟ್ಕರ್​, ಎಲ್​. ಬಾಲಾಜಿ, ಶಿಖರ್​ ಧವನ್​, ಇಾರ್ನ್​ ಪಠಾಣ್​, ಜೋಗಿಂದರ್​ ಶರ್ಮರಂಥ ಆಟಗಾರರನ್ನು ಕ್ರಿಕೆಟ್​ ಪ್ರೇಮಿಗಳು ಇನ್ನೂ ನೆನಪಿಟ್ಟುಕೊಂಡಿರುವುದೇ ಇದಕ್ಕೆ ಸಾಕ್ಷಿ. ಇನ್ನು ದಿಗ್ಗಜ ಆಟಗಾರರಿಗೂ ತಮ್ಮ ಹಿರಿಮೆ ತೋರಿಸಲು ಇದು ಸದಾವಕಾಶ. ಸಚಿನ್​ ತೆಂಡುಲ್ಕರ್​, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಎಂಎಸ್​ ಧೋನಿ, ಯುವರಾಜ್​ ಸಿಂಗ್​, ವೀರೇಂದ್ರ ಸೆಹ್ವಾಗ್​, ಅನಿಲ್​ ಕುಂಬ್ಳೆ ಈ ಪಂದ್ಯಗಳಲ್ಲೇ ಮಿಂಚಿ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ.
ವಿಶ್ವಕಪ್​ ಮುಖಾಮುಖಿ:*1992: ಭಾರತಕ್ಕೆ 43 ರನ್​ ಜಯ.*1996: ಭಾರತಕ್ಕೆ 39 ರನ್​ ಜಯ.*1999: ಭಾರತಕ್ಕೆ 47 ರನ್​ ಜಯ.*2003: ಭಾರತಕ್ಕೆ 6 ವಿಕೆಟ್​ ಜಯ.*2011: ಭಾರತಕ್ಕೆ 29 ರನ್​ ಗೆಲುವು.*2015: ಭಾರತಕ್ಕೆ 76 ರನ್​ ಜಯ.*2019: ಭಾರತಕ್ಕೆ 89 ರನ್​ ಜಯ.
ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
