ನವದೆಹಲಿ:ಎರಡು ದಿನಗಳ ಭಾರತ ಭೇಟಿ ಅದ್ಭುತವಾಗಿತ್ತು ಮತ್ತು ಫಲಪ್ರದವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಭಾರತ ಪ್ರವಾಸ ಮುಗಿಸಿ ಅಮೆರಿಕಕ್ಕೆ ಹಿಂದಿರುಗಿರುವ ಟ್ರಂಪ್ ಭೇಟಿ ಕುರಿತು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಕೂಡ ಪ್ರಕಟಣೆ ಹೊರಡಿಸಿದ್ದು, ಈ ಭೇಟಿ ಅಮೆರಿಕ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಿಸಿದೆ ಎಂದು ಹೇಳಿದೆ. ಎರಡೂ ದೇಶಗಳಲ್ಲಿ ಸಮೃದ್ಧಿ, ಹೂಡಿಕೆ ಮತ್ತು ಉದ್ಯೋಗಗಳು ಸೃಷ್ಟಿಗೆ ಕಾರಣವಾಗುವ ಬಲವಾದ ಆರ್ಥಿಕ ಸಂಬಂಧಗಳಿಂದ ಅಮೆರಿಕ ಮತ್ತು ಭಾರತ ಲಾಭ ಪಡೆಯಲಿವೆ. ಭಾರತಕ್ಕೆ ಇಂಧನ ರಫ್ತು ಗಣನೀಯವಾಗಿ ಹೆಚ್ಚಿದೆ ಎಂದು ತಿಳಿಸಿದೆ.
ಭಾರತ ಖಾದ್ಯ ಇಷ್ಟಪಟ್ಟ ಟ್ರಂಪ್ ಕುಟುಂಬ: ಭಾರತ ಭೇಟಿ ವೇಳೆ ಟ್ರಂಪ್ ಕುಟುಂಬ ಊಟದಲ್ಲಿ ಅತಿ ಹೆಚ್ಚು ನಾನ್ ಮತ್ತು ಸಿಕಂದರಿ ರಾನ್ ಅನ್ನು ಇಷ್ಟಪಟ್ಟಿತು ಎಂದು ಅವರು ಉಳಿದುಕೊಂಡಿದ್ದ ದೆಹಲಿಯ ಐಟಿಸಿ ಮೌರ್ಯ ಹೋಟೆಲ್​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ ರೋಸ್ಟೆಡ್ ಮಟನ್ ಲೆಗ್​ನ್ನು ಟ್ರಂಪ್ ದಂಪತಿ ಹೆಚ್ಚು ಇಷ್ಟಪಟ್ಟರು ಎಂದು ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + thirteen =
Remember me
