ಬೆಂಗಳೂರು:ಹಣದುಬ್ಬರ ತಗ್ಗಿದೆ ಎಂದು ಎಂದು ಹೇಳಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್, 2047ರಲ್ಲಿ ಭಾರತ ಜಗತ್ತಿನ ಟಾಪ್​-3 ರಾಷ್ಟ್ರಗಳಲ್ಲಿ ಒಂದಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್​ ಸಮ್ಮಿಟ್​ನ ಕೊನೆಯ ದಿನವಾದ ಇಂದು ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಟಾರ್ಟಪ್ ಉದ್ಯಮಗಳು ಆರ್ಥಿಕತೆಗೆ ಬೂಸ್ಟರ್ ಡೋಸ್ ಆಗಿ ಕೆಲಸ ಮಾಡುತ್ತಿವೆ. ಜಗತ್ತಿನ ಆರ್ಥಿಕ‌ ಟ್ರೆಂಡ್ ಹೆಚ್ಚಿಸಲು ಸ್ಟಾರ್ಟಪ್‌ಗಳು ನೆರವಾಗಿವೆ. ಮಾತ್ರವಲ್ಲ, ದೇಶದಲ್ಲಿ ಹಣದುಬ್ಬರ ಕಡಿಮೆಯಾಗಿದೆ, ಈ ಹಿಂದೆ ಎರಡಂಕಿಯಲ್ಲಿದ್ದ ಹಣದುಬ್ಬರ ಈಗ ಒಂದಂಕಿಗೆ ಇಳಿದಿದೆ. ಇವತ್ತಿನ‌ ಆರ್ಥಿಕ ಒತ್ತಡದಲ್ಲೂ ಭಾರತದ ಹಣದುಬ್ಬರವನ್ನು ಶೇ. 6.8ಗೆ ತರುವಲ್ಲಿ ನಾವು ಯಶಸ್ವಿ ಆಗಿದ್ದೇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
ಬೆಂಗಳೂರು ಸ್ಟಾರ್ಟಪ್‌ಗಳು ಬೆಳೆಯಲು ಉತ್ತಮ‌ ನಗರ. ಸ್ಟಾರ್ಟಪ್‌ಗಳಿಗೆ ಅವಕಾಶ ಕೊಡುವ ಮೂಲಕ ಭಾರತದ ಆರ್ಥಿಕ ವೃದ್ಧಿಗೆ ಬೆಂಗಳೂರು ಪೂರಕವಾಗಿದೆ. ನಮ್ಮ ಸರ್ಕಾರ ಇ‌-ಕಾಮರ್ಸ್ ಉದ್ಯಮದಲ್ಲಿ ಪ್ರಜಾಪ್ರಭುತ್ವ ನೀತಿಗಳನ್ನು ಜಾರಿ ಮಾಡಿದ್ದು, 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಆರ್ಥಿಕ ದೈತ್ಯ ಶಕ್ತಿಯಾಗಿ ಭಾರತ ಬೆಳೆಯಲಿದೆ. ಮಾತ್ರವಲ್ಲ ಜಗತ್ತಿನ ಟಾಪ್-3 ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
