ನವದೆಹಲಿ:ಭಾರತವು 2026 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಡಾಲರ್‌ ಲೆಕ್ಕದಲ್ಲಿ 2026ಕ್ಕೆ ಜಿಡಿಪಿ 5 ಟ್ರಿಲಿಯನ್ ಅಮೆರಿಕನ್​ ಡಾಲರ್​ಗೆ(ಯುಎಸ್​ಡಿ) ತಲುಪಲಿದೆ. ಅದೇ ರೀತಿ 2027 ರಲ್ಲಿ 5.5 ಟ್ರಿಲಿಯನ್‌ ಯುಎಸ್​ಡಿಗೆ ಏರಲಿದೆ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಹೇಳಿದ್ದಾರೆ.
ಇದನ್ನೂ ಓದಿ:ಯುಪಿಯಲ್ಲಿ ಆಲೂಗಡ್ಡೆ ಇಳುವರಿ ಬಂಪರ್: ಗ್ರಾಹಕರಿಗೆ ಸಿಹಿ – ರೈತರೇ ಎಚ್ಚರ..ಎಚ್ಚರ!18ನೇ ಸಿ.ಡಿ ದೇಶ್‌ಮುಖ್ ಸ್ಮಾರಕ ಉಪನ್ಯಾಸದಲ್ಲಿ ‘ಇಂಡಿಯಾ ಅಟ್ 125: ರಿಕ್ಲೇಮಿಂಗ್ ದ ಲಾಸ್ಟ್ ಗ್ಲೋರಿ ಅಂಡ್​ರಿಟರ್ನಿಂಗ್ ದ ಗ್ಲೋಬಲ್ ಎಕಾನಮಿ ದ ಓಲ್ಡ್ ನಾರ್ಮಲ್’ ಕುರಿತು ಮಾತನಾಡಿ, ಪ್ರಸ್ತುತ ಡಾಲರ್‌ನಲ್ಲಿ ಜರ್ಮನಿ ಅಥವಾ ಜಪಾನ್‌ನ ಜಿಡಿಪಿ 5 ಟ್ರಿಲಿಯನ್ ಡಾಲರ್ ದಾಟುವ ಸಾಧ್ಯತೆ ಇಲ್ಲ ಎಂದು ಹೇಳಿದರು.
ಇನ್ನು ಮುಂದಿನ ಮೂರು ವರ್ಷಗಳಲ್ಲಿ ಜಪಾನ್ ತನ್ನ 2022 ರ ಯುಎಸ್​ಡಿ ಮಟ್ಟ 4.2 ಟ್ರಿಲಿಯನ್‌ನಿಂದ 2027 ರಲ್ಲಿ ಯುಎಸ್​ಡಿ 5.03 ಟ್ರಿಲಿಯನ್ ತಲುಪಲು ಪ್ರಸ್ತುತ ಡಾಲರ್ ಲೆಕ್ಕದಲ್ಲಿ 3.5 ಶೇಕಡಾ ಬೆಳವಣಿಗೆ ದರವನ್ನು ಉಳಿಸಿಕೊಂಡು ಮುಂದುವರಿಯಬೇಕಾಗುತ್ತದೆ ಎಂದು ಹೇಳಿದರು.ಪ್ರತಿಶತ 4 ವಾರ್ಷಿಕ ಬೆಳವಣಿಗೆಯ ದರದಲ್ಲಿ ಜರ್ಮನಿಯ ಜಿಡಿಪಿ 2023 ರಲ್ಲಿ 4.4 ಟ್ರಿಲಿಯನ್‌ನಿಂದ 2026 ರಲ್ಲಿ 4.9 ಟ್ರಿಲಿಯನ್ ಮತ್ತು 2027 ರಲ್ಲಿ 5.1 ಟ್ರಿಲಿಯನ್‌ ಯುಎಸ್​ಡಿಗೆ ಏರುತ್ತದೆ. ಇದನ್ನು ನೋಡಿದರೆ, ಭಾರತೀಯ ಜಿಡಿಪಿ ಈ ಎರಡು ದೇಶಗಳ ಜಿಡಿಪಿಯನ್ನು ಎಷ್ಟು ಬೇಗ ದಾಟಬಹುದು? ಎಂಬುದು ಪ್ರಶ್ನೆಯಾಗಿದೆ ಎಂದು ಪನಗಾರಿಯಾ ಹೇಳಿದರು.
ಪ್ರಸ್ತುತ ಡಾಲರ್ ಲೆಕ್ಕದಲ್ಲಿ ಭಾರತವು ವಾರ್ಷಿಕ ಸರಾಸರಿ 10.22 ಶೇಕಡಾ ದರದಲ್ಲಿ ಬೆಳೆದಿದೆ. ಇದೇ ರೀತಿ ಮುಂದುವರಿದರೆ 2026ರಲ್ಲಿ 5 ಟ್ರಿಲಿಯನ್ ಮತ್ತು 2027 ರಲ್ಲಿ5.5 ಟ್ರಿಲಿಯನ್ ಯುಎಸ್​ಡಿ ತಲುಪುತ್ತದೆ. ಇದರರ್ಥ 2026 ರ ಅಂತ್ಯದ ವೇಳೆಗೆ ಭಾರತವು ಪ್ರಪಂಚದ ಮೂರನೇ ಆರ್ಥಿಕತೆಯಾಗುವ ಉತ್ತಮ ನಿರೀಕ್ಷೆಗಳಿವೆ ಎಂದು ಪನಗಾರಿಯಾ ವಿವರಿಸಿದರು.
ಅಮೆರಿಕಾ ಬಾಕ್ಸ್​ ಆಫೀಸ್​ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ನಾನಿ ಸಿನಿಮಾ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 + 9 =
Remember me
