ನವದೆಹಲಿ:ಭಾರತವು ಬಡ ರಾಷ್ಟ್ರವಾಗಿ ಸ್ವಾತಂತ್ರ್ಯ ಗಳಿಸಿದ್ದರೆ, 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ 100ನೇ ಸ್ವಾತಂತ್ರ್ಯವನ್ನು ಆಚರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಜುಲೈ 30) ಹೇಳಿದ್ದಾರೆ.
ಇದನ್ನು ಓದಿ:ಪ್ಯಾರಿಸ್​ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದ ಮನು-ಸರಬ್ಜೋತ್ ಸಿಂಗ್​ಗೆ ‘ನಮೋ‘ ಅಭಿನಂದನೆ
ನವದೆಹಲಿಯ ವಿಜ್ಞಾನ ಭವನದಲ್ಲಿ ವಿಕಸಿತ ಭಾರತ: ಎ ಪೋಸ್ಟ್ ಯೂನಿಯನ್ ಬಜೆಟ್ 2024-25 ಕಾನ್ಫರೆನ್ಸ್‌ನ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ನಾವು ಬಡ ರಾಷ್ಟ್ರವಾಗಿ ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಆದರೆ 100 ವರ್ಷಗಳಲ್ಲಿ ಹಲವಾರು ಸವಾಲುಗಳನ್ನು ಜಯಿಸಿ ಮತ್ತು ಗುರಿಗಳನ್ನು ಪೂರೈಸಿದ ನಂತರ ಭಾರತವು 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ತನ್ನ 100ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸಲಿದೆ ಎಂದು ಹೇಳಿದರು.
ಮುಂದಿನ ಪೀಳಿಗೆಯು ವಿಕಸಿತ ಭಾರತದಲ್ಲಿ (ಅಭಿವೃದ್ಧಿ ಹೊಂದಿದ ಭಾರತ) ಹೆಮ್ಮೆಯಿಂದ ಬದುಕುತ್ತದೆ ಎಂಬ ದೂರದೃಷ್ಟಿಯೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕೆಲಸ ಮಾಡುತ್ತಿದೆ. ಅದರ ನೀತಿಗಳು, ಬದ್ಧತೆ, ನಿರ್ಣಯ, ನಿರ್ಧಾರಗಳು ಮತ್ತು ಹೂಡಿಕೆಗಳು ಜಾಗತಿಕ ಪ್ರಗತಿಗೆ ಅಡಿಪಾಯವಾಗುತ್ತಿರುವ ಕಾರಣ ಜಗತ್ತು ಭಾರತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಹೂಡಿಕೆ ಮಾಡಲು ವಿಶ್ವದಾದ್ಯಂತದ ಹೂಡಿಕೆದಾರರು ಉತ್ಸುಕರಾಗಿದ್ದಾರೆ. ಜತೆಗೆ ವಿಶ್ವ ನಾಯಕರು ಸಹ ಭಾರತದ ಬಗ್ಗೆ ಆಶಾವಾದಿಗಳಾಗಿದ್ದಾರೆ. ಇದು ನಮ್ಮ ಕೈಗಾರಿಕೆಗಳಿಗೆ ಮಹತ್ವದ ಅವಕಾಶವನ್ನು ನೀಡುತ್ತದೆ. ಅದನ್ನು ನಾವು ತಪ್ಪಿಸಿಕೊಳ್ಳಬಾರದು. ಆದ್ದರಿಂದಲೇ ನೀತಿ ಆಯೋಗದ ಸಭೆಯಲ್ಲಿ ಹೂಡಿಕೆದಾರ ಸ್ನೇಹಿ ಚಾರ್ಟರ್​ ಸಿದ್ಧಪಡಿಸುವಂತೆ ಪ್ರತಿ ರಾಜ್ಯಕ್ಕೂ ಹೇಳಿದ್ದೇನೆ ಎಂದು ತಿಳಿಸಿದರು.
ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಹೆಚ್ಚು ಸಮಯ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.(ಏಜೆನ್ಸೀಸ್​​)
‘ರಾಯನ್​’​ನಲ್ಲಿ ಧನುಷ್​ ಅಭಿನಯಕ್ಕೆ ಪ್ರಿನ್ಸ್​ ಫಿದಾ; ಸೂಪರ್​ಸ್ಟಾರ್ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
