ನವದೆಹಲಿ:ಭಾರತದ ಜನಸಂಖ್ಯೆ 2036ರ ವೇಳೆಗೆ 152.2 ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಂಕಿ ಸಂಖ್ಯೆ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ (ಎಂಒಎಸ್​ಪಿಐ) ಪ್ರಕಟಿಸಿದ ವರದಿಯೊಂದು ಅಂದಾಜು ಮಾಡಿದೆ. ಸ್ತ್ರೀಯರ ಶೇಕಡವಾರು ಪ್ರಮಾಣ ಸ್ವಲ್ಪ ಸುಧಾರಿಸಿ 2011ರಲ್ಲಿದ್ದ ಶೇ. 48.5ರಿಂದ ಶೇ. 48.8 ಆಗಲಿದೆ ಎಂದು ‘2023ರ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು’ ಶೀರ್ಷಿಕೆಯ ವರದಿ ಹೇಳಿದೆ.
ಹಿಂದಿನ ರಾಷ್ಟ್ರೀಯ ಜನಗಣತಿ ನಡೆದ 2011ರಲ್ಲಿ ದೇಶದ ಜನಸಂಖ್ಯೆ 121,08,54,977 ಆಗಿತ್ತು. ಫಲವಂತಿಕೆ ದರ ಕುಸಿತದ ಕಾರಣದಿಂದ, 15 ವರ್ಷ ಪ್ರಾಯದ ವ್ಯಕ್ತಿಗಳ ಅನುಪಾತ 2011-2036ರ ನಡುವಣ 25 ವರ್ಷಗಳಲ್ಲಿ ಕಡಿಮೆಯಾಗಲಿದೆ ಎಂದೂ ವರದಿ ಲೆಕ್ಕಾಚಾರ ಹಾಕಿದೆ. ಇದೊಂದು ಸಮಗ್ರ ಹಾಗೂ ಒಳನೋಟಗಳನ್ನು ಹೊಂದಿರುವ ಪ್ರಕಟಣೆಯಾಗಿದೆ. ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ಪರಿಸ್ಥಿತಿ ಬಗ್ಗೆ ಸಮಗ್ರ ನೋಟ ಹಾಗೂ ವೈವಿಧ್ಯಮಯ ವಿಷಯಗಳಲ್ಲಿ ವ್ಯಾಪಕ ಅಂಕಿ ಅಂಶಗಳನ್ನು ಅದು ಒದಗಿಸುತ್ತದೆ.
ಲಿಂಗ ಅನುಪಾತ:ಲಿಂಗಾನುಪಾತ ಸುಧಾರಣೆಯಾಗಿ, 1000 ಪುರುಷರಿಗೆ ಈಗಿರುವ ಮಹಿಳಾ ಸಂಖ್ಯೆ 943ರಿಂದ 952ಕ್ಕೆ ಏರಲಿದೆ ಎಂದು ಅಧ್ಯಯನ ವರದಿ ದಾಖಲಿಸಿದೆ. 60 ಮತ್ತು ಅದಕ್ಕಿಂತ ಅಧಿಕ ವಯಸ್ಸಿನವರ ಅನುಪಾತ ಈ 25 ವರ್ಷಗಳಲ್ಲಿ ಏರಿಕೆಯಾಗಲಿದೆ ಎಂದು ಹೇಳಿದೆ. ವಿವಿಧ ವಯೋಗುಂಪಿನ ಪುರುಷರು ಮತ್ತು ಮಹಿಳೆಯಯ ನಡುವೆ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಅರ್ಥ ಮಾಡಿ ಕೊಳ್ಳಲು ವಿಂಗಡಿಸಲಾಗಿರುವ ದತ್ತಾಂಶ ನೆರವಾಗುತ್ತದೆ.
ಫಲವಂತಿಕೆ ದರ:2016ರಿಂದ 2020ರ ವರೆಗೆ 20-24 ಮತ್ತು 25-29 ವಯೋಗುಂಪಿನವರಲ್ಲಿ ನಿರ್ದಿಷ್ಟ-ವಯಸ್ಸಿನ ಫಲವಂತಿಕೆ ದರ (ಎಎಸ್​ಎಫ್​ಆರ್) 135.4 ಹಾಗೂ 166.0ಯಿಂದ ಅನುಕ್ರಮವಾಗಿ 113.6 ಮತ್ತು 139.6ಕ್ಕೆ ಇಳಿದಿದೆ. ಈ ಅವಧಿಯಲ್ಲಿ, 35-39 ವಯೋ ಗುಂಪಿನವರಲ್ಲಿ ಎಎಸ್​ಎಫ್​ಆರ್ 32.7ರಿಂದ 35.6ಕ್ಕೆ ಏರಿಕೆಯಾಗಿದೆ. ಜೀವನದಲ್ಲಿ ನೆಲೆಗೊಂಡ ನಂತರ ಕುಟುಂಬವನ್ನು ವಿಸ್ತರಿಸುವ ಬಗ್ಗೆ ಮಹಿಳೆಯರು ಚಿಂತಿಸು ತ್ತಾರೆ ಎನ್ನುವುದನ್ನು ಅದು ತೋರಿಸುತ್ತದೆ. 2020ರಲ್ಲಿ, ಅಕ್ಷರಸ್ಥರಲ್ಲಿ ಹದಿವಯಸ್ಕರ ಫಲವಂತಿಕೆ ದರ 33.9 ಹಾಗೂ ಅನಕ್ಷರಸ್ಥರಲ್ಲಿ 11.0 ಆಗಿತ್ತೆಂದು ವರದಿ ತಿಳಿಸಿದೆ.
ವಿಶ್ವಸಂಸ್ಥೆ ಭವಿಷ್ಯ: ‘ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ದೀರ್ಘ ಕಾಲದಿಂದ ಹೊಂದಿದ್ದ ಸ್ಥಾನವನ್ನು ಚೀನಾ ಶೀಘ್ರವೇ ಕಳೆದುಕೊಳ್ಳಲಿದೆ’ ಎಂದು ಕಳೆದ ವರ್ಷ ಏಪ್ರಿಲ್​ನಲ್ಲಿ ವಿಶ್ವ ಸಂಸ್ಥೆ ಹೇಳಿತ್ತು. ‘ಈ ಮಾಸಾಂತ್ಯದೊಳಗೆ ಭಾರತದ ಜನಸಂಖ್ಯೆ 142,57,75,850 ಆಗಿ, ಚೀನಾ ಮುಖ್ಯಭೂಮಿಯ ಜನಸಂಖ್ಯೆಯನ್ನು ದಾಟಲಿದೆ’ ಎಂದಿತ್ತು. 2060ರ ವೇಳೆಗೆ ಭಾರತದ ಜನಸಂಖ್ಯೆ ಉತ್ತುಂಗಕ್ಕೇರಿ 1.7 ಬಿಲಿಯ (170 ಕೋಟಿ) ಆಗಲಿದೆ ಎಂದು ಕಳೆದ ವರ್ಷ ಪ್ರಕಟಿಸಿದ ‘ವಿಶ್ವ ಜನಸಂಖ್ಯೆ ಮುನ್ನೋಟ 2024’ ವರದಿಯಲ್ಲಿ ವಿಶ್ವ ಸಂಸ್ಥೆ ಹೇಳಿತ್ತು. ನಂತರ, ಶೇಕಡ 12ರಷ್ಟು ಕುಸಿತವಾಗಿ ಶತಮಾನದಾದ್ಯಂತ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರವಾಗಿ ಉಳಿಯಲಿದೆ ಎಂದು ವಿಶ್ಲೇಷಿಸಿತ್ತು.
ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಆಯ್ಕೆ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 + nine =
Remember me
