ನವದೆಹಲಿ:ಫೆ. 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಆಗಮನಕ್ಕೆ ಅತ್ಯಂತ ಸಂತೋಷದಿಂದ ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.​
ನಮ್ಮ ಗೌರವಾನ್ವಿತ ಅತಿಥಿಯ ಸ್ಮರಣೀಯ ಸ್ವಾಗತಕ್ಕೆ ಭಾರತ ಸಾಕ್ಷಿಯಾಗಲಿದೆ. ಈ ಭೇಟಿ ತುಂಬಾ ವಿಶೇತೆಗಳಲ್ಲಿ ಒಂದಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:ನಿಮಗೆಲ್ಲ ಗೊತ್ತಾ ವಿಶ್ವದಲ್ಲೇ ಬಹುದೊಡ್ಡ ಕ್ರೀಡಾಂಗಣವನ್ನು ಮೋದಿ ನಿರ್ಮಾಣ ಮಾಡುತ್ತಿದ್ದಾರೆ: ಭಾರತ ಪ್ರವಾಸ ಕುರಿತು ಟ್ರಂಪ್​ ಮಾತು
ಭಾರತ ಮತ್ತು ಅಮೆರಿಕವು ಪ್ರಜಾಪ್ರಭುತ್ವದೊಂದಿಗೆ ಸಾಮಾನ್ಯ ಬದ್ಧತೆ ಮತ್ತು ಬಹುತ್ವವನ್ನು ಹಂಚಿಕೊಳ್ಳುತ್ತದೆ. ಜಟಿಲ ಸಮಸ್ಯೆಗಳು ಎದುರಾದಂತಹ ಸಂದರ್ಭಗಳಲ್ಲಿ ಉಭಯ ರಾಷ್ಟ್ರಗಳು ದೊಡ್ಡಮಟ್ಟದ ಸಹಕಾರಗಳನ್ನು ನೀಡುತ್ತವೆ. ನಮ್ಮ ರಾಷ್ಟ್ರಗಳ ನಡುವಿನ ಬಲಿಷ್ಠ ಸ್ನೇಹ ನಮ್ಮ ನಾಗರಿಕರಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಒಳ್ಳೆಯದನ್ನು ಬಯಸುತ್ತದೆ ಎಂದು ಪ್ರಧಾನಿ ಟ್ವೀಟ್​ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.
ಭಾರತ ಪ್ರವಾಸಕ್ಕೆ ಎದರು ನೋಡುತ್ತಿದ್ದೇನೆ ಎಂದು ಟ್ರಂಪ್​ ಸುದ್ದಿಗಾರರೊಂದಿಗೆ ಹೇಳಿದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಟ್ವೀಟ್​ ಮಾಡಿ ಸ್ಮರಣೀಯ ಸ್ವಾಗತ ನೀಡಲು ಭಾರತ ಕಾಯುತ್ತಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಭೇಟಿ ವೇಳೆ ಟ್ರಂಪ್​ ಮತ್ತು ಪ್ರಧಾನಿ ಮೋದಿ ಗುಜರಾತಿನ ಅಹಮದಾಬಾದ್​ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.(ಏಜೆನ್ಸೀಸ್​)
Extremely delighted that@POTUS@realDonaldTrumpand@FLOTUSwill visit India on 24th and 25th February. India will accord a memorable welcome to our esteemed guests.
This visit is a very special one and it will go a long way in further cementing India-USA friendship.
— Narendra Modi (@narendramodi)February 12, 2020

India and USA share a common commitment to democracy and pluralism. Our nations are cooperating extensively on a wide range of issues. Robust friendship between our nations augurs well not only for our citizens but also for the entire world.
— Narendra Modi (@narendramodi)February 12, 2020

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − fifteen =
Remember me
