ಟೋಕಿಯೋ:ವಿಶ್ವದ ಮುಂಚೂಣಿ ಪ್ಯಾರಾ ಶಟ್ಲರ್​, ಭಾರತದ ಪ್ರಮೋದ್​ ಭಗತ್​ ಇಂದು ಟೋಕಿಯೋದ ಪ್ಯಾರಾಲಿಂಪಿಕ್ಸ್​ನ ಪುರುಷರ ಸಿಂಗಲ್ಸ್​ ಬ್ಯಾಡ್ಮಿಂಟನ್ ಅಂತಿಮ ಪಂದ್ಯದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ತನ್ಮೂಲಕ ಪ್ಯಾರಾಗೇಮ್ಸ್​ನಲ್ಲಿ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಕ್ರೀಡಾಪಟುವೆಂಬ ಮನ್ನಣೆ ಗಳಿಸಿದ್ದಾರೆ.
ಪುರುಷರ ಸಿಂಗಲ್ಸ್​​ ಬ್ಯಾಡ್ಮಿಂಟನ್​ ಎಸ್​ಎಲ್​3 ಕ್ಯಾಟಗರಿಯ ಅಂತಿಮ ಪಂದ್ಯದಲ್ಲಿ ಭಗತ್​​, ಗ್ರೇಟ್​ ಬ್ರಿಟೇನ್​ನ ಡೇನಿಯಲ್​ ಬೆಥೆಲ್​ ಅವರನ್ನು ಪರಾಜಯಗೊಳಿಸಿದರು. 21-14, 21-17 ಸ್ಕೋರ್​​ನ ಎರಡು ನೇರ ಸೆಟ್​ಗಳ ಮೂಲಕ ಅವರು ಈ ಸಾಧನೆ ಮೆರೆದರು. ಪ್ರಮೋದ್​ ಭಗತ್​ ಗೆದ್ದಿರುವ ಈ ಚಿನ್ನದ ಪದಕ ಟೋಕಿಯೋ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಭಾರತದ ನಾಲ್ಕನೇ ಚಿನ್ನದ ಪದಕವಾಗಿದೆ.
ಇದನ್ನೂ ಓದಿ:ಶೂಟಿಂಗ್​ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖಾರ!
ಎಸ್​​ಎಲ್​3 ಕ್ಯಾಟಗರಿಯಲ್ಲೇ ನಡೆದ ಮತ್ತೊಂದು ಬ್ಯಾಡ್ಮಿಂಟನ್​ ಪಂದ್ಯದಲ್ಲಿ ಭಾರತದ ಮನೋಜ್​ ಸರ್ಕಾರ್​ ಅವರು, ಜಪಾನಿನ ಡೈಸುಕೆ ಫ್ಯೂಜಿಹರ ಅವರನ್ನು ಪರಾಭವಗೊಳಿಸಿ ಕಂಚಿನ ಪದಕ ಗೆದ್ದಿದ್ದಾರೆ. ತನ್ಮೂಲಕ ಒಂದೇ ಈವೆಂಟ್​ನ ಎರಡು ಪದಕಗಳು ಭಾರತದ ಮಡಿಲಿಗೆ ಬಿದ್ದಿವೆ. ಸರ್ಕಾರ್​, 22-20 ಮತ್ತು 21-13 ಸ್ಕೋರಿನ ಎರಡು ನೇರ ಸೆಟ್​ಗಳೊಂದಿಗೆ ವಿಜೇತರಾದರು.
ಇಂದಿನ ಸ್ಪರ್ಧೆಗಳ ಕೊನೆಗೆ, ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಈವರೆಗೆ 17 ಪದಕಗಳು ಸಂದಿವೆ.(ಏಜೆನ್ಸೀಸ್)
ತಮಿಳು ಚಿತ್ರದ ಮಾದರಿಯಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಖದೀಮ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 18 =
Remember me
