ನವದೆಹಲಿ:ಭಾರತ ಮತ್ತು ಚೀನಾ ನಡುವಿನ ಪೈಪೋಟಿ ಬಾಹ್ಯಾಕಾಶಕ್ಕೆ ವಿಸ್ತರಿಸಿದೆ. ಕಳೆದ ತಿಂಗಳು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವುದರೊಂದಿಗೆ, ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇರಿಸಿದ ಮೊದಲ ದೇಶವಾಗಿದೆ. ಆದರೆ ಚೀನಾ ಚಂದ್ರಯಾನ-3 ಇಳಿದ ಸ್ಥಳ ಚಂದ್ರನ ದಕ್ಷಿಣ ಧ್ರುವ ಅಲ್ಲ ಎಂದು ಹೇಳುವ ಮೂಲಕವಾಗಿ ಚೀನಾ ಮತ್ತೆ ಕ್ಯಾತೆ ತೆಗೆದಿದೆ.
ಆ. 23ರಂದು ನಾಸಾದ ಮುಖ್ಯಸ್ಥ ಬಿಲ್ ನೆಲ್ಸನ್ ಅವರು ಎಕ್ಸ್ ವೇದಿಕೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಇಳಿದಿದೆ ಎಂದು ಬರೆದುಕೊಂಡಿತ್ತು.
ಚೀನಾದ ವಿಜ್ಞಾನ ಅಕಾಡೆಮಿಯ ಸದಸ್ಯರಾಗಿರುವ ಒಯಾಂಗ್ ಸಂದರ್ಶನವೊಂದರಲ್ಲಿ ಮಾತನಾಡಿ, ‘ಚಂದ್ರಯಾನ-3 ಇಳಿದ ಸ್ಥಳ ಚಂದ್ರನ ದಕ್ಷಿಣ ಧ್ರುವ ಅಲ್ಲ. ಬದಲಿಗೆ ಅಂಟಾರ್ಟಿಕ್ ಪೊಲಾರ್‌ ಪ್ರದೇಶ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ. ‘ಚಂದ್ರನ ದಕ್ಷಿಣ ಭಾಗದ 69 ಡಿಗ್ರಿ ಅಕ್ಷಾಂಶದಲ್ಲಿ ಲ್ಯಾಂಡರ್ ಇಳಿದಿದೆ. ಇದು ಚಂದ್ರನ ದಕ್ಷಿಣದ ಒಂದು ಭಾಗವಾಗಿದೆಯೇ ಹೊರತು, ದಕ್ಷಿಣ ಧ್ರುವವಲ್ಲ. ದಕ್ಷಿಣ ಧ್ರುವವು 88.5 ರಿಂದ 90 ಡಿಗ್ರಿ ಅಕ್ಷಾಂಶದಲ್ಲಿದೆ. ಭೂಮಿ ತಿರುಗುವ ಅಕ್ಷವು ಸೂರ್ಯನೆಡೆಗೆ 23.5 ಡಿಗ್ರಿ ವಾಲಿದೆ. ಹೀಗಾಗಿ ದಕ್ಷಿಣ ಧ್ರುವವು 66.5 ರಿಂದ 90 ಡಿಗ್ರಿವರೆಗು ಇದೆ. ಆದರೆ ಚಂದ್ರ ಕೇವಲ 1.5 ಡಿಗ್ರಿಯಷ್ಟೇ ವಾಲಿರುವುದರಿಂದ ದಕ್ಷಿಣ ಧ್ರುವದ ಪ್ರದೇಶ ಕಿರಿದಾಗಿದೆ. ಅಮೆರಿಕದ ನಾಸಾ ಪ್ರಕಾರ ದಕ್ಷಿಣ ಧ್ರುವವು 80ರಿಂದ 90 ಡಿಗ್ರಿ ದಕ್ಷಿಣದಲ್ಲಿದೆ. ಚೀನಾವು ಉತ್ತಮ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಹಾಂಕಾಂಗ್‌ ವಿಶ್ವವಿದ್ಯಾಲಯದ ವಿಜ್ಞಾನಿ ಲೀ ಮಾನ್ ಹೊಯ್ ಅವರ ಪ್ರಕಾರ, ‘ಚಂದ್ರಯಾನ-3 ಯೋಜನೆಯು ಚಂದ್ರನ ದಕ್ಷಿಣ ತುದಿಯಿಂದ ಸಾಕಷ್ಟು ಮೇಲೆ ಇಳಿದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೂ ಸಹ ಉನ್ನತ ಅಕ್ಷಾಂಶ ಸ್ಥಳ. ತಾಂತ್ರಿಕ ಸಾಮರ್ಥ್ಯ ಇರುವ ಯಾರೇ ಆದರೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬಹುದು. ಈ ಭಾಗದ ಹತ್ತಿರ ಭಾರತ ಹೋಗಿದೆ. ಆದರೆ ಚೀನಾದ ಮುಂದಿನ ಯೋಜನೆ ದಕ್ಷಿಣ ಧ್ರುವದ ಅತ್ಯಂತ ಸಮೀಪ ಹೋಗಲಿದೆ. ಈ ಪ್ರಯತ್ನಗಳು ಮನುಷ್ಯನ ವಿಜ್ಞಾನ ಮತ್ತು ಸಾಧನೆಯನ್ನು ಸಂಭ್ರಮಿಸುವ ಕ್ಷಣಗಳಾಗಿವೆ’ ಎಂದು ಹೇಳಿದ್ದಾರೆ.
2026ರಲ್ಲಿ ಚೀನಾದ ಚಾಂಗ್ ಎ-7 ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಯೋಜನೆಯನ್ನು ಅಲ್ಲಿನ ಬಾಹ್ಯಾಕಾಶ ಸಂಸ್ಥೆ ಹಮ್ಮಿಕೊಂಡಿದೆ. ನೌಕೆ ಇಳಿಯುವ ಸ್ಥಳವು ಚಂದ್ರನ ದಕ್ಷಿಣದಿಂದ 88.8 ಡಿಗ್ರಿಯಲ್ಲಿದೆ ಎನ್ನಲಾಗಿದೆ.
ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಶುಕ್ರಕ್ಕೆ ಭಾರತದ ವೀನಸ್ ಆರ್ಬಿಟರ್ ಮಿಷನ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಎಸ್.ಸೋಮನಾಥ್ ಮಂಗಳವಾರ ಘೋಷಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × four =
Remember me
