ನವದೆಹಲಿ:ಭಾರತದ ವಾಯುಸೇನೆ ಮುಂಚೂಣಿಯ ಯುದ್ಧ ವಿಮಾನಗಳಾದ ಸುಖೋಯ್​- 30ಎಂಕೆಐ, ಮಿಗ್​-29 ಚೀನಾದ ಗಡಿಯಲ್ಲಿರುವ ವಾಯುನೆಲೆಯಲ್ಲಿ ನಿರಂತರ ಹಾರಾಟ ನಡೆಸುತ್ತಿವೆ.
ವಾಯುನೆಲೆಯಲ್ಲಿ ಸರಕು ಸಾಗಣೆಯ ದೈತ್ಯ ವಿಮಾನಗಳಾದ ಅಮೆರಿಕದ ಸಿ-17, ಸಿ-130ಜೆ, ರಷ್ಯಾದ ಇಲ್ಯುಷಿನ್​-76 ಹಾಗೂ ಅಂಟೋನೋವ್​ ವಿಮಾನಗಳು ಬೀಡು ಬಿಟ್ಟಿವೆ.
ಭಾರತದ ಗಡಿ ಭಾಗವಾದ ವಾಸ್ತವ ಗಡಿ ರೇಖೆಯಲ್ಲಿ ದೂರ ದೂರದ ಪ್ರದೇಶದಲ್ಲಿ ನಿಯೋಜಿಸಲು ಪಡೆಗಳ ರವಾನೆ ಹಾಗೂ ಈಗಾಗಲೇ ನಿಯೋಜಿಸಲಾಗಿರುವ ಪಡೆಗಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ತೊಡಗಿವೆ.
ಇದನ್ನೂ ಓದಿ;ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್​ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ
ಯುದ್ಧ ಸನ್ನಿವೇಶದಲ್ಲಿ ಮಹತ್ವದ ಪಾತ್ರ ವಹಿಸುವ ಅಪಾಚೆ ಹೆಲಿಕಾಪ್ಟರ್​ಗಳ ನಿಯಮಿತವಾಗಿ ಲಡಾಖ್​ ಗಡಿ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಅಮೆರಿಕ ನಿರ್ಮಿತ ಯುದ್ಧ ಹೆಲಿಕಾಪ್ಟರ್​ಗಳು ಹಾಗೂ ಇವುಗಳಿಗೆ ಚಿನೂಕ್​ ಹೆಲಿಕಾಪ್ಟರ್​ಗಳು ಸಾಥ್​ ನಿಡುತ್ತಿವೆ. ಭಾರತ- ಚೀನಾ ನಡುವೆ ಹಿಂಸಾತ್ಮಕ ಸಂಘರ್ಷ ಏರ್ಪಟ್ಟ ಬಳಿಕ ಇವುಗಳ ಹಾರಾಟವೂ ಹೆಚ್ಚಾಗಿದೆ.
ಇಡೀ ಪ್ರದೇಶದಲ್ಲಿ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುವ ಚಟುವಟಿಕೆಗಳು ಭಾರಿ ಪ್ರಮಾಣದಲ್ಲಿ ಕಮಡು ಬರುತ್ತಿದೆ ಎಂದು ವಾಯುನೆಲೆಗೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ.
ಇದನ್ನೂ ಓದಿ;ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ
ಚೀನಾ ಗಡಿಭಾಗದಲ್ಲಿರುವ ವಾಯನೆಲೆ ವಾಸ್ತವ ಗಡಿ ರೇಖೆಯುದ್ದಕ್ಕೂ ಕಾರ್ಯಚರಣೆಯನ್ನು ನಡೆಸುವಲ್ಲಿ ಬಹುಮುಖ್ಯವಾದ ಪಾತ್ರ ನಿರ್ವಹಿಸಲಿದೆ. ಇಲ್ಲಿ ನಡೆಯುವ ಯುದ್ಧ ಕಾರ್ಯಾಚರಣೆ ಹಾಗೂ ಸಹಾಯಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಕ್ತವಾಗಿಸಲಾಗಿದೆ ಎಂದು ವಾಯುಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿಯಲ್ಲಿ ಯಾವುದೇ ಪರಿಸ್ಥಿತಿ ಸವಾಲು ಬಂದೂ ಅದನ್ನು ಎದುರಿಸಲು ವಾಯುಸೇನೆ ಸಿದ್ಧವಾಗಿದೆ. ಅದಕ್ಕೆ ತಕ್ಕಂತೆ ಕಾಯಾರ್ಚರಣೆಯನ್ನು ಕೈಗೊಳ್ಳುತ್ತಿರುವುದು ಕೂಡ ಇದನ್ನು ಪುಷ್ಠಿಕರಿಸಿದೆ.
ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
