ನವದೆಹಲಿ:ಇಂಡಿಯನ್​ ಏರ್​ಲೈನ್ಸ್​ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸಿಇಒ ಆಗಿ ನೇಮಿಸಿದೆ. ಹರ್ಪ್ರೀತ್​ ಎ ಡಿ ಸಿಂಗ್ ಎಂಬುವರನ್ನು ಕೇಂದ್ರ ಸರ್ಕಾರವು ಏರ್​ ಇಂಡಿಯಾ (ಎಐ)ದ ರಿಜನಲ್​ ಸಬ್ಸಿಡರಿ ಅಲಯನ್ಸ್​ ಏರ್​ನ ಸಿಇಒ ಆಗಿ ನೇಮಿಸಿದೆ.
ಏರ್​ ಇಂಡಿಯಾ ಸಿಎಂಡಿ ರಾಜೀವ್​ ಬನ್ಸಾಲ್​ ಅವರು ಶುಕ್ರವಾರ ಆದೇಶ ಹೊರಡಿಸಿದ್ದು, ಹರ್ಪ್ರೀತ್ ಅವರು ಮುಂದಿನ ಆದೇಶದವರೆಗೆ ಅಲಯನ್ಸ್​ ಏರ್​ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಹರ್ಪ್ರೀತ್, ಪ್ರಸ್ತುತ ಏರ್​ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕಿ (ವಿಮಾನ ಸುರಕ್ಷತೆ) ಆಗಿದ್ದಾರೆ. ಸಿಇಒ ಆಗಿ ಬಡ್ತಿ ಪಡೆದ ಬಳಿಕ ಹರ್ಪ್ರೀತ್ ಸ್ಥಾನಕ್ಕೆ ಪ್ರಸ್ತುತ ಚಾಲನೆಯಲ್ಲಿರುವ ಬೋಯಿಂಗ್​ 787 ಡ್ರೀಮ್​ ಲೈನರ್​ನ ಹಿರಿಯ ಕಮ್ಯಾಂಡರ್​ ಕ್ಯಾಪ್ಟನ್​ ನಿವೇದಿತಾ ಭಸಿನ್​ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ:ಕೊಲೆ ಪ್ರಕರಣ: ಸಿಂಗರ್​ ಅನನ್ಯ ಭಟ್​ ತಂದೆ, ಸ್ನೇಹಿತನಿಗೂ ಇದೆ ಸಿನಿಮಾ ನಂಟು!
ಹರ್ಪ್ರೀತ್​ ಸಿಂಗ್ ಯಾರು?ಹರ್ಪ್ರೀತ್​ ಅವರು 1988ರಲ್ಲಿ ಏರ್​ ಇಂಡಿಯಾಗೆ ಆಯ್ಕೆಯಾದ ಮೊದಲ ಮಹಿಳಾ ಪೈಲಟ್​ ಆಗಿದ್ದಾರೆ. ಆದರೂ ಅನಾರೋಗ್ಯ ಕಾರಣದಿಂದಾಗಿ ಅವರು ಹಾರಾಟ ನಡೆಸಲು ಆಗಲಿಲ್ಲ. ಹೀಗಾಗಿ ವಿಮಾನ ಸುರಕ್ಷತೆಯ ವಿಭಾಗದಲ್ಲಿ ಸಕ್ರೀಯರಾಗಿದ್ದರು. ಇವರ ಮಾರ್ಗದರ್ಶನದಲ್ಲಿ ಅನೇಕರು ಉತ್ತಮ ಪೈಲಟ್​ಗಳಾಗಿ ರೂಪುಗೊಂಡಿದ್ದಾರೆ.(ಏಜೆನ್ಸೀಸ್​)
ಕ್ರಿಶ್ಚಿಯನ್​ ಬಾಲಕಿ ಅಪಹರಿಸಿದ ಪಾಕ್​ ವ್ಯಕ್ತಿ: ಮದ್ವೆಯಾದ ಬಾಲಕಿ ಎರಡೇ ದಿನದಲ್ಲಿ ಯುವತಿಯಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
