ನವದೆಹಲಿ:ಎಲೆಕ್ಟ್ರಾನಿಕ್ ಉದ್ಯಮವನ್ನು ಮುನ್ನಡೆಸುವಲ್ಲಿ ಮತ್ತು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (ಎಐ) ಸಾಮರ್ಥ್ಯಗಳನ್ನು ಸುಧಾರಿಸುವಲ್ಲಿ ತೋರಿಸಿರುವ ಸಾಧನೆಗಾಗಿ ಭಾರತೀಯ ಮೂಲದ ಅಮೆರಿಕನ್​ ಸಂಶೋಧಕ ರಾಜೀವ್ ಜೋಶಿ ಅವರು ಅವರು ವರ್ಷದ ಪ್ರತಿಷ್ಠಿತ ವರ್ಷದ ಇನ್ವೆಂಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ನ್ಯೂಯಾರ್ಕ್ ಬೌದ್ಧಿಕ ಆಸ್ತಿ ಕಾನೂನು ಸಂಘವು ಈ ತಿಂಗಳ ಆರಂಭದಲ್ಲಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಯಿತು.
ಇದನ್ನೂ ಓದಿ:ಸುಂದರಿ ಸಿಕ್ಕಳೆಂದು ಜತೆಗಿದ್ದವಳ ದೇಹ ತುಂಡರಿಸಿ ಸೂಟ್​ಕೇಸ್​ನಲ್ಲಿ ತುಂಬಿದ!
ಅಮೆರಿಕದಲ್ಲಿ 250ಕ್ಕೂ ಹೆಚ್ಚು ಆವಿಷ್ಕಾರಗಳನ್ನು ಮಾಡುವ ಮೂಲಕ ಅವುಗಳ ಪೇಟೆಂಟ್​ ಹೊಂದಿರುವ ಖ್ಯಾತಿ ಪಡೆದಿದ್ದಾರೆ. ಸದ್ಯ ಇವರು ನ್ಯೂಯಾರ್ಕ್​ನ ಐಬಿಎಂ ಥಾಮಸ್​ ವಾಟ್ಸ್​ಸನ್​ ರೀಸರ್ಚ್​ ಸೆಂಟರ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜೋಶಿಯವರು ಐಐಟಿ ಮುಂಬೈ ಹಳೆಯ ವಿದ್ಯಾರ್ಥಿ, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (ಎಂಐಟಿ) ಎಂಎಸ್ ಪದವಿ ಮತ್ತು ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿಯನ್ನು ಇವರು ಪಡೆದಿದ್ದಾರೆ.
ಇದನ್ನೂ ಓದಿ:ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!
ಸೂಪರ್​ ಕಂಪ್ಯೂಟರ್​, ಲ್ಯಾಪ್​ಟಾಪ್​, ಸ್ಮಾರ್ಟ್​ಫೋನ್​ ಸೇರಿದಂತೆ ಹಲವಾರು ಗ್ಯಾಜೆಟ್​ಗಳಲ್ಲಿ ಇವರು ನಡೆಸಿರುವ ಸಂಶೋಧನೆಗಳು ಅತ್ಯದ್ಭುತವಾಗಿದ್ದು, ತಂತ್ರಜ್ಞಾನದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ.
ಮೇಡಂ ಕ್ಯೂರಿ, ರೈಟ್​ ಬ್ರದರ್ಸ್​, ಜೇಮ್ಸ್​ ವ್ಯಾಟ್​, ಥಾಮಸ್​ ಎಡಿಸನ್​, ಅಲೆಕ್ಸಾಂಡರ್​ ಬೆಲ್​ ಸೇರಿದಂತೆ ಮಹಾನ್​ ತಂತ್ರಜ್ಞರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಜೋಶಿ ಅವರು, ಇಂಥವರ ಯಶಸ್ವಿ ಜೀವನಗಾಥೆ ತಮಗೆ ಪ್ರೇರಣೆ ನೀಡಿದೆ ಎಂದಿದ್ದಾರೆ.(ಏಜೆನ್ಸೀಸ್​)
FACT CHECK: ಹಾದಿ ತಪ್ಪಿರುವ ಸೂರತ್ ಶ್ರಮಿಕ್​ ರೈಲು, ಸಾವು: ಈ ವರದಿಯಲ್ಲಿ ಸತ್ಯಾಂಶ ಇದೆಯೆ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 1 =
Remember me
