ಭಾರತೀಯ ಸೇನೆಯ ಯೋಧರು ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಉತ್ತರ ಗಡಿಯಲ್ಲಿರುವ ಪರ್ವತಗಳು ಮತ್ತು ಹಿಮನದಿಗಳಲ್ಲಿ ಯೋಗ ಪ್ರದರ್ಶಿಸಿದರು. ಸೈನಿಕರು ತಮ್ಮ ಸಮವಸ್ತ್ರದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಿಮದ ವಾತಾವರಣದ ನಡುವೆಯೂ 10ಕ್ಕೂ ಹೆಚ್ಚು ಸೈನಿಕರು ವಿವಿಧ ಆಸನಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನು ಓದಿ:ಸಿಎಂ ಅರವಿಂದ್​ ಕೇಜ್ರಿವಾಲ್​​ ಜಾಮೀನಿಗೆ ಹೈಕೋರ್ಟ್​​ ತಡೆ; ಸುನೀತಾ ಕೇಜ್ರಿವಾಲ್​ ಏನಂದ್ರು ಗೊತ್ತಾ?
ಲಡಾಖ್‌ನ ಲೇಹ್‌ನಲ್ಲಿರುವ ಕರ್ನಲ್ ಸೋನಮ್ ವಾಂಗ್‌ಚುಕ್ ಸ್ಟೇಡಿಯಂನಲ್ಲಿ ಭಾರತೀಯ ಸೇನೆಯ ಸೈನಿಕರು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರದರ್ಶಿಸಿದರು. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರ ಐಟಿಬಿಪಿ ಸಿಬ್ಬಂದಿ ಸಿಕ್ಕಿಂನ ಮುಗುಥಾಂಗ್ ಉಪವಲಯದ ನಕುಲ ಅಕ್ಷದ ಭಾರತ-ಚೀನಾ ಗಡಿಯ ಬಳಿ 15000 ಅಡಿ ಎತ್ತರದಲ್ಲಿ ಯೋಗ ಸೆಷನ್‌ನಲ್ಲಿ ಭಾಗವಹಿಸಿದರು. ಭಾರತೀಯ ನೌಕಾಪಡೆಯ ಸಿಬ್ಬಂದಿ ಐಎನ್​ಎಸ್​​ತರ್ಕಾಶ್ ಮತ್ತು ಐಎನ್​ಎಸ್​​ ಟೆಗ್‌ನಂತಹ ಯುದ್ಧನೌಕೆಗಳಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಿದರು.
#WATCH| Indian Army personnel perform Yoga in icy heights on the northern frontier on#InternationalYogaDay2024
(Source: Indian Army)pic.twitter.com/7zjIBfJ0Ye
— ANI (@ANI)June 21, 2024

10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಉತ್ತರ ಪ್ರದೇಶದ ಮಥುರಾದಲ್ಲಿ ಯೋಗ ಮಾಡಿದರು. ಖಿನ್ನತೆ, ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಯೋಗಾಭ್ಯಾಸವು ಔಷಧವನ್ನು ಅವಲಂಬಿಸುವುದಕ್ಕೆ ಉತ್ತಮ ಪರ್ಯಾಯವಾಗಿದೆ ಎಂದು ಹೇಳಿದ ಸಚಿವರು ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದರು. (ಏಜೆನ್ಸೀಸ್​​)
ನೀಟ್​​​ ಕೌನ್ಸೆಲಿಂಗ್ ಪ್ರಕ್ರಿಯೆ ನಿಷೇಧಿಸಲು ಸುಪ್ರೀಂಕೋರ್ಟ್ ನಿರಾಕರಣೆ; ಎನ್​ಟಿಎಗೆ ನೋಟಿಸ್​ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
