ಶ್ರೀನಗರ:ಜಮ್ಮುಮತ್ತುಕಾಶ್ವೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಭಾರತೀಯ ಸೇನೆಯ 48 ರಾಷ್ಟ್ರೀಯ ರೈಫಲ್ಸ್​​ನ ಕ್ಯಾಪ್ಟನ್​​​​ ದೋಡಾದ ಅಸ್ಸಾರ್‌ನಲ್ಲಿರುವ ಶಿವಗಢ್​​ ಧಾರ್​​ನಲ್ಲಿ ಉಸ್ತುವಾರಿ ವಹಿಸಿದ್ದರು ಎಂದು ಭಾರತೀಯ ಸೇನೆ ಖಚಿತಪಡಿಸಿದೆ. ಎನ್​ಕೌಂಟರ್​ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಇದನ್ನು ಓದಿ:ಹಿಂದುಗಳ ಮೇಲಿನ ದಾಳಿ ಮಧ್ಯೆ ಢಾಕೇಶ್ವರಿ ದೇವಸ್ಥಾನಕ್ಕೆ ಮುಹಮ್ಮದ್ ಯೂನಸ್ ಭೇಟಿ; ಅವರ ಸ್ಪಷ್ಟನೆ ಹೀಗಿದೆ..
ಶಿವಗಢ್-ಅಸ್ಸಾರ್ ಬೆಲ್ಟ್‌ನಲ್ಲಿ ಅಡಗಿರುವ ವಿದೇಶಿ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮಂಗಳವಾರ(ಆಗಸ್ಟ್​​ 13) ಉಧಂಪುರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಎನ್​ಕೌಂಟರ್​​​ ಬುಧವಾರವು ಮುಂದುವರಿದಿದೆ.
ಭಯೋತ್ಪಾದಕರು ಅರಣ್ಯದ ನದಿಯ ಬಳಿಕ ಅಡಗಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದರು. ಬುಧವಾರ ಬೆಳಗ್ಗೆ ಎನ್​ಕೌಂಟರ್​​ ಆರಂಭವಾದ ಸಮಯದಲ್ಲಿ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರಿದ್ದ ಸ್ಥಳದಲ್ಲಿ ಅಮೆರಿಕದ ಎಂ-4ರೈಫಲ್​​​ ಮತ್ತು ಮೂರು ಬ್ಯಾಗ್​ ಸ್ಫೋಟಕಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಕ್ಕೂ ಮುನ್ನ ಆಗಸ್ಟ್​​​​ 10ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದರು. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಈ ಎನ್​ಕೌಂಟರ್​ ನಡೆಸಿತ್ತು. (ಏಜೆನ್ಸೀಸ್​​)
ಹಿಂಡೆನ್‌ಬರ್ಗ್ ಆರೋಪ; ಆ.22ರಂದು ರಾಷ್ಟ್ರಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಕಾಂಗ್ರೆಸ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:20 − thirteen =
Remember me
