ನವದೆಹಲಿ: 77ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಭಾರತೀಯ ಸೇನೆಯ ಯೋಧರು ಒಂದೊಳ್ಳೆಯ ಕಾರ್ಯವನ್ನು ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕಟ್ಟಕಡೆಯ ಹಳ್ಳಿಯೊಂದರ ಜನರಿಗೆ ಸೇತುವೆಯೊಂದನ್ನು ಮಾಡಿಕೊಟ್ಟು ಅರ್ಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಚ್ಛಲ್ ಸೆಕ್ಟರ್​ನ ಲೈನ್ ಆಫ್ ಕಂಟ್ರೋಲ್​ನ ಕಟ್ಟಕಡೆಯ ಹಳ್ಳಿಯಾಗಿರುವ ದನ್ನಾ ಗ್ರಾಮದ ಜನರಿಗೆ 115 ಅಡಿ ಉದ್ದದ ಸೇತುವೆಯೊಂದನ್ನು ಮಾಡಿಕೊಟ್ಟಿದ್ದಾರೆ. ಅದನ್ನು ಸ್ವಾತಂತ್ರ್ಯೋತ್ಸವ ದಿನವಾದ ಇಂದು ಕೊಡುಗೆಯಾಗಿ ಗ್ರಾಮಸ್ಥರಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ:ಇಲ್ಲಿನ ಶಿಕ್ಷಕರು ಉದ್ಯೋಗಕ್ಕೆ ಸೇರುವ ಮುನ್ನ ಈ ಕೆಲಸ ಮಾಡಲೇಬೇಕು: ಏನಿದು ಲ್ಯಾಬ್​ ಸ್ಕೂಲ್?
ಭಾರತೀಯ ಸೇನೆಯ ಇಂಜಿನಿಯರ್​​ಗಳ ನೇತೃತ್ವದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಪ್ರತಿಕೂಲ ಹವಾಮಾನಗಳ ನಡುವೆ ಕಳೆದ ಎರಡು ತಿಂಗಳಿನಿಂದ ಇದಕ್ಕಾಗಿ ನಮ್ಮ ಯೋಧರು ಪರಿಶ್ರಮ ಪಟ್ಟಿದ್ದರು. ಈ ಸೇತುವೆಯು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸೇನೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಆರ್ಮಿ ಪಿಆರ್​ಒ ತಿಳಿಸಿದ್ದಾರೆ.
ಈ ಹೊಸ ಸೇತುವೆಯಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ಮಚ್ಛಲ್ ನಲ ಎಂಬ ಊರಿನ ಜತೆ ಸಂರ್ಪಕ ಸರಳವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು, ವಯೋವೃದ್ಧರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲು ಈ ಸೇತುವೆ ಮಹದುಪಕಾರಿ ಆಗಿದೆ. ಇಲ್ಲಿನ ಸುಂದರ ಪರಿಸರವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೂ ಇದು ಅನುಕೂಲವಾಗಿದೆ.
VIDEO | Indian Army dedicates 115-feet long bridge to locals of Danna, the last village on the Line of Control in Machhal Sector in J&K on the occasion of 77th Independence Day.
(Source: Third Party)pic.twitter.com/BCa216aYIa
— Press Trust of India (@PTI_News)August 15, 2023

ಹೇಗಿದೆ ನೋಡಿ ಕಾಕತಾಳೀಯ!: ಇಂದಿರುವುದೂ ಸ್ವಾತಂತ್ರ್ಯ ಸಿಕ್ಕಿದ್ದ ದಿನದಂದು ಇದ್ದ ತಿಥಿ-ನಕ್ಷತ್ರವೇ!

ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
