ನವದೆಹಲಿ:ಭಾರತ ಹಾಗೂ ನೇಪಾಳದ ಸಂಬಂಧ ಈಗ ಮೊದಲಿನಷ್ಟು ಸೌಹಾರ್ಧಯುತವಾಗಿ ಇಲ್ಲ. ಈ ಮಧ್ಯೆ ಭಾರತೀಯ ಸೇನೆ, ನೇಪಾಳ ಸೇನೆಗೆ 10 ವೆಂಟಿಲೇಟರ್​​ಗಳನ್ನು ಉಡುಗೊರೆ ನೀಡಿದೆ.
10 ವೆಂಟಿಲೇಟರ್​​ಗಳನ್ನು ನೇಪಾಳದಲ್ಲಿರುವ ಭಾರತೀಯ ರಾಯಭಾರಿ ವಿನಯ್​ ಮೋಹನ್​ ಕ್ವಾತ್ರಾ ಅವರು ನೇಪಾಳ ಸೇನಾ ಮುಖ್ಯಸ್ಥ ಪೂರ್ಣಚಂದ್ರ ತಾಪಾ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಸುಧಾರಿತ ವಿನ್ಯಾಸದ ಈ ವೆಂಟಿಲೇಟರ್​ಗಳು ಭಾರವಿಲ್ಲ ಹಾಗೂ ಕೈಯಲ್ಲಿ ಸಾಗಿಸಬಹುದಾಗಿದೆ. ಐಸಿಯುಗಳಲ್ಲಿ ಇರುವ ರೋಗಿಗಳಿಗೆ ತುರ್ತು ಅಗತ್ಯವಾಗಿ ಸುಗಮವಾಗಿ ಲಭ್ಯವಾಗುವಂತಹ ವೆಂಟಿಲೇಟರ್​ಗಳು ಇವು ಎನ್ನಲಾಗಿದೆ.
ನೇಪಾಳದಲ್ಲಿ ಕರೊನಾ ಸೋಂಕಿಗೆ ಈಗಾಗಲೇ 75 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 22,972 ಮಂದಿಗೆ ವೈರಸ್​ ತಗುಲಿದೆ. ಕೊವಿಡ್​-19 ವಿರುದ್ಧ ಹೋರಾಡಲು ನೇಪಾಳಿಗರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗುವುದು ಎಂದು ರಾಯಭಾರಿ ಕ್ವಾತ್ರಾ ತಿಳಿಸಿದ್ದಾರೆ. (ಏಜೆನ್ಸೀಸ್​)
ಜಮ್ಮು-ಕಾಶ್ಮೀರದ ಬಿಜೆಪಿ ಮುಖಂಡರಲ್ಲಿ ಹೆಚ್ಚುತ್ತಿದೆ ಭಯ; ಇಂದು ನಾಲ್ವರು ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 19 =
Remember me
