ಶ್ರೀನಗರ:ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ನಡೆದ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರು ಓರ್ವ ಉಗ್ರನನ್ನ ಹತ್ಯೆಗೈದಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಉಗ್ರ ಶರಣಾಗಿದ್ದಾನೆಂದು ತಿಳಿದು ಬಂದಿದೆ.
19 ವರ್ಷದ ಲಷ್ಕರ್​​-ಇ-ತೊಯ್ಬಾ ಉಗ್ರ ಸಂಘಟನೆ ಭಯೋತ್ಪಾದಕ ಎಂದು ತಿಳಿದು ಬಂದಿದೆ. ಬಂಧಿತ ಉಗ್ರನನ್ನ ಪಾಕಿಸ್ತಾನದ ಪಂಜಾಬ್​​ನ ಅಲಿ ಬಾಬರ್​ ಎಂದು ಗುರುತಿಸಲಾಗಿದೆ. ಆತ ಎಲ್​ಇಟಿ ಸದಸ್ಯನೆಂದು ಒಪ್ಪಿಕೊಂಡಿದ್ದಾಗಿ ಭಾರತೀಯ ಸೇನೆ ತಿಳಿಸಿದೆ.
ಶ್ರೀನಗರದ ರಾಜೌರಿಕದಲ್​ ಪ್ರದೇಶದಲ್ಲಿ ಉಗ್ರರ ಅಡಗುತಾಣ ನಿರ್ಮಾಣ ಮಾಡಲು ಲಷ್ಕರ್​​-ಇ-ತೊಯ್ಬಾ ಕಮಾಂಡರ್​ ರಿಯಾಜ್​ ಸತರ್​ಗುಂಡ್​ನ ಆದೇಶ ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆಂದು ಮೇಜರ್ ಜನರಲ್ ವೀರೇಂದ್ರ ವಾಟ್ಸ್ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಭಯೋತ್ಪಾದಕರು ಗಡಿಯೊಳಗೆ ನುಸುಳುವ ಯತ್ನ ಮಾಡ್ತಿದ್ದು, ಭಾರತೀಯ ಯೋಧರು ಅವರಿಗೆ ಸೂಕ್ತ ತಿರುಗೇಟು ನೀಡುತ್ತಿದ್ದಾರೆ.
‘ಹುಕ್ಕಾ ಬಾರ್​ ಅಂದ್ರೆ ಏನು, ಅದು ಹೇಗಿರುತ್ತೆ?’ ಎಂದು ಕೇಳಿ ಅಚ್ಚರಿ ಮೂಡಿಸಿದ ಗೃಹ ಸಚಿವ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
