ಲಖನೌ:ಭಾರತೀಯ ಸೇನೆಯ ಯೋಧರಿಗಾಗಿ ಬುಲೆಟ್ ಪ್ರೂಫ್​ ಜಾಕೆಟ್​ ಕಂಡು ಹಿಡಿದಿದ್ದ ಮೇಜರ್​ ಅನೂಪ್​ ಮಿಶ್ರಾ ಈಗ ಮತ್ತೊಂದು ಸಾಧನೆ ಮಾಡಿದ್ದಾರೆ.
ಸೈನಿಕರಿಗಾಗಿ ಗುಂಡು ನಿರೋಧಕ ಹೆಲ್ಮೆಟ್​ (ಶಿರಸ್ತ್ರಾಣ)ನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಸ್ನೈಪರ್​ ಗುಂಡುಗಳಿಂದ ಯೋಧರನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ಸುಮಾರು 10 ಮೀಟರ್​ವರೆಗಿನ​ ಅಂತರದಿಂದ ನುಗ್ಗಿ ಬರುವ ಎಕೆ 47 ಗುಂಡುಗಳನ್ನೂ ತಡೆದುಕೊಳ್ಳಬಲ್ಲ ವಿಶ್ವದ ಮೊದಲ ಬುಲೆಟ್​ಪ್ರೂಫ್​ ಹೆಲ್ಮೆಟ್​ ಎನ್ನಲಾಗಿದೆ.ಅಭೇದ್ಯ ಎಂಬ ಕಲ್ಪನೆಯಡಿ ಈ ಬುಲೆಟ್​ ಪ್ರೂಫ್​ ಹೆಲ್ಮೆಟ್​ನ್ನು ಮೇಜರ್​ ಅನೂಪ್​ ಮಿಶ್ರಾ ಅಭಿವೃದ್ಧಿಪಡಿಸಿದ್ದಾಗಿ ಸೇನಾ ಮೂಲಗಳು ತಿಳಿಸಿವೆ.
ಇದಲ್ಲದೆ, ಭಾರತೀಯ ಸೇನೆಯ ಮಿಲಿಟರಿ ಇಂಜಿನಿಯರಿಂಗ್ ಕಾಲೇಜು, ಖಾಸಗಿ ಸಂಸ್ಥೆಯೊಂದಿಗೆ ಜಂಟಿಯಾಗಿ ಭಾರತದ ಮೊದಲ, ಜಗತ್ತಿನಲ್ಲೇ ಅತೀ ಅಗ್ಗದ ಗನ್​ಶಾಟ್​ ಲೊಕೇಟರ್​ನ್ನು ಕಂಡು ಹಿಡಿದಿದೆ. (ಗನ್​ ಶಾಟ್​ ಲೊಕೇಟರ್​ ಎಂದರೆ ಬುಲೆಟ್​ಗಳು ತೂರಿಬಂದ ಸ್ಥಳ ಪತ್ತೆ ಹಚ್ಚುವ ಸಾಧನ). ಸುಮಾರು 400 ಮೀಟರ್​ ಅಂತರದಿಂದ ಬರುವ ಬುಲೆಟ್​ಗಳ ಸ್ಥಳ ಪತ್ತೆಹಚ್ಚುವಷ್ಟು ಸಾಮರ್ಥ್ಯವನ್ನು ಇದು ಹೊಂದಿದ್ದು, ಉಗ್ರರನ್ನು, ಶತ್ರುಗಳನ್ನು ಸದೆ ಬಡಿಯಲು ತುಂಬ ಅನುಕೂಲಕರವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
