ಕೊಚ್ಚಿ:ಕೇರಳದ ಜೋಡಿಯೊಂದು ಭಾರತೀಯ ಸೇನೆಗೆ ತಮ್ಮ ಮದುವೆಗೆ ಬರುವಂತೆ ಆಹ್ವಾನಿಸಿರುವ ಆಹ್ವಾನ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.
ಆಹ್ವಾನ ಪತ್ರಿಕೆಯ ಜೊತೆಗೆ ರಾಹುಲ್​ ಮತ್ತು ಕಾರ್ತಿಕಾ ಜೋಡಿ ಸೇನಾ ಸಿಬ್ಬಂದಿಗೆ ಮನಮುಟ್ಟುವ ಸಂದೇಶವೊಂದನ್ನು ಸಹ ಬರೆದು ಕಳುಹಿಸಿದ್ದಾರೆ. ದೇಶಕ್ಕಾಗಿ ಅವರ ತ್ಯಾಗ ಮತ್ತು ಎದೆಗಾರಿಕೆಗೆ ಧನ್ಯವಾದ ತಿಳಿಸಿದ್ದಾರೆ.
ಪ್ರೀತಿಯ ಹೀರೋಗಳೇ ನವೆಂಬರ್​ 10ರಂದು ನಾವು ಮದುವೆ ಆಗುತ್ತಿದ್ದೇವೆ. ನಮ್ಮ ದೇಶದ ಬಗೆಗಿನ ಪ್ರೀತಿ, ಸಂಕಲ್ಪ ಮತ್ತು ದೇಶಭಕ್ತಿಗಾಗಿ ನಾವು ನಿಜವಾಗಿಯೂ ಕೃತಜ್ಞರಾಗಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ಆಳವಾದ ಕೃತಜ್ಞತೆಯ ಋಣವನ್ನು ತೀರಿಸುತ್ತೇವೆ. ನಿಮ್ಮಿಂದಾಗಿ ನಾವು ಶಾಂತಿಯುತವಾಗಿ ಮಲಗಿದ್ದೇವೆ. ನಮ್ಮ ಪ್ರೀತಿಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮಿಂದಾಗಿ ನಾವು ಸುಖವಾಗಿ ಮದುವೆಯಾಗುತ್ತಿದ್ದೇವೆ. ನಮ್ಮ ಈ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ನಾವು ತುಂಬಾ ಸಂತೋಷಪಡುತ್ತೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ ಎಂದು ಜೋಡಿ ಕೇಳಿಕೊಂಡಿದೆ.
ಈ ಆಹ್ವಾನ ಪತ್ರಿಕೆಯನ್ನು ಇಂಡಿಯನ್​ ಆರ್ಮಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದೆ. ನಿಮಗೆ ನಮ್ಮ ಆಶೀರ್ವಾದಗಳು. ಇಂಡಿಯನ್​ ಆರ್ಮಿ ರಾಹುಲ್​ ಮತ್ತು ಕಾರ್ತಿಕಾಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತದೆ. ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲೆಂದು ನಾವು ಶುಭ ಹಾರೈಸುತ್ತೇವೆ. ಜೀವನ ಉದ್ದಕ್ಕೂ ಒಟ್ಟಾಗಿರಿ ಎಂದು ಇಂಡಿಯನ್​ ಆರ್ಮಿ ಹರಸಿದೆ.
ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿದಾಗಿನಿಂದ ಈವರೆಗೂ 85 ಸಾವಿರಕ್ಕೂ ಹೆಚ್ಚು ಲೈಕ್​​ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಸಹ ಜೋಡಿಯ ಆಹ್ವಾನ ಪತ್ರಿಕೆಗೆ ಫಿದಾ ಆಗಿದ್ದು, ಕಾಮೆಂಟ್​ಗಳ ಮಹಾಪೂರವನ್ನೇ ಹರಿಸುವ ಮೂಲಕ ಶುಭ ಕೋರುತ್ತಿದ್ದಾರೆ.(ಏಜೆನ್ಸೀಸ್​)

A post shared by Indian Army (@indianarmy.adgpi)

ಬರೋಬ್ಬರಿ 140 ವರ್ಷದ ಬಳಿಕ ಅಪರೂಪದ ಪಕ್ಷಿಯ ಮರುಶೋಧನೆ! ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವಿದು

ರೇಷನ್​ ಕಾರ್ಡ್​ನಲ್ಲಿ ಕುತ್ತಾ ಅಂತಾ ಬರೆದಿದ್ದಕ್ಕೆ ನಾಯಿಯಂತೆ ಬೊಗಳಿ ಅಧಿಕಾರಿಯನ್ನು ಪೇಚಿಗೆ ಸಿಲುಕಿಸಿದ ವ್ಯಕ್ತಿ!

PHOTO GALLERY | ವಿಜಯಾನಂದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದ ಸಂಭ್ರಮದ ಕ್ಷಣಗಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
