ಕಂಪಾಲಾ:ಕರ್ತವ್ಯನಿರತ ಪೊಲೀಸ್​ ಪೇದೆಯೊಬ್ಬರು ಭಾರತೀಯ ಮೂಲದ ಬ್ಯಾಂಕ್​ ಕೆಲಸಗಾರರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಗಾಂಡದ ರಾಜಧಾನಿ ಕಂಪಾಲಾದಲ್ಲಿ ನಡೆದಿದೆ.
ಘಟನೆ ಮೇ 12ರಂದು ನಡೆದಿದ್ದು ಮೃತ ದುರ್ದೈವಿಯನ್ನು ಉತ್ತಮ್​ ಭಂಡಾರಿ(39) ಎಂದು ಗುರುತಿ ಹಿಡಿಯಲಾಗಿದ್ದು ಇವಾನ್ ವಾಬ್ವೈರ್(30) ಎಂದು ಗುರುತು ಹಿಡಿಯಲಾಗಿದೆ.
ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಆರೋಪಿ ದುರ್ದೈವಿ ಮೇಲೆ ಹಲವು ಸುತ್ತು ಗುಂಡು ಹಾರಿಸುವುದು ಕಂಡು ಬರುತ್ತದೆ.
TFS ಬ್ಯಾಂಕ್​ನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಭಂಡಾರಿ ಹಾಗೂ ಪೊಲೀಸ್​ ಪೇದೆ ವಾಬ್ವೈರ್ ನಡುವೆ ಹಣಕಾಸು ಪಾವತಿ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ತಿಳಿದು ಬಂದಿದೆ.
Kampala Metropolitan Police spokesperson, Patrick Onyango explains circumstances under which Police Constable (PC) Ivan Wabwire shot and killed a money lender at Parliamentary Avenue in Kampala. "He (PC Wabwire) was servicing two loans he acquired since 2020"pic.twitter.com/DcWZuLL0ir
ಇದನ್ನೂ ಓದಿ:ವಿವಾಹಿತೆ ಜೊತೆ ಕಾಣಿಸಿಕೊಂಡ ಪ್ರಿಯಕರ; ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಿದ ಗ್ರಾಮಸ್ಥರು
ಶುಕ್ರವಾರ ಮೇ 12ರಂದು ಆರೋಪಿ ವಾಬ್ವೈರ್ ಬ್ಯಾಂಕಿಗೆ ಭೇಟಿ ನೀಡಿದ ವೇಳೆ ಭಂಡಾರಿ 2.1ಮಿಲಿಯನ್​ ಶಿಲ್ಲಿಂಗ್​(46,000 ಸಾವಿರ ರೂಪಾಯಿ) ಸಾಲದ ಮೊತ್ತದ ಬಗ್ಗೆ ತಿಳಿಸಿದ್ದಾರೆ.
ಈ ವೇಳೆ ಭಂಡಾರಿ ಅವರೊಂದಿಗೆ ಜಗಳ ತೆಗೆದ ಆರೋಪಿ ಮಾತನಾಡುವ ವೇಳೆ ಎಕೆ-47 ರೈಫಲ್​ನೊಂದಿಗೆ ಗುಂಡಿಕ್ಕಿ ಅವರನ್ನು ಹತ್ಯೆ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಂಪಾಲಾ ಮೆಟ್ರೋಪಾಲಿಟನ್​ ಪೊಲೀಸ್​ ವಕ್ತಾರ ಪ್ಯಾಟ್ರಿಕ್​ ಆನ್​ಯಾಂಗೋ ಆರೋಪಿ ಕೆ-47 ರೈಫಲ್​ ಕದ್ದು ಬ್ಯಾಂಕ್​ ನಿರ್ದೇಶಕ ಭಂಡಾರಿ ಅವರನ್ನು ಹತ್ಯೆ ಮಾಡಿದ್ಧಾನೆ.
ಆರೋಪಿಯ ಮಾನಸಿಕ ಸ್ಥಿತಿ ಸರಿ ಇಲ್ಲದ ಕಾರಣ ಆತನಿಗೆ ಐದು ವರ್ಷಗಳ ಹಿಒಂದೆ ಬಂದೂಕು ನೀಡದಂತೆ ಆದೇಶ ಹೊರಡಿಸಲಾಗಿತ್ತು. ಹಾಗಿದ್ದರೂ ಗನ್​​ ಕಳವು ಮಾಡಿ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
