ನವದೆಹಲಿ:ಭಾರತದ ಹೆಸರಾಂತ ಆಭರಣ ಮಳಿಗೆಗಳಲ್ಲಿ ಒಂದಾದ ಜೋಯಾಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಅಲುಕ್ಕಾಸ್ ಅವರು ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ದೇಶದ ಅಗ್ರ 50 ಶ್ರೀಮಂತರಲ್ಲಿ ಒಬ್ಬರಾದ ಅಲುಕ್ಕಾಸ್​ ಅವರು ತಮ್ಮ ಮೊದಲ ರೋಲ್ಸ್ ರಾಯ್ಸ್ ಖರೀದಿಸಿದ ಸಂದರ್ಭ ಹಾಗೂ ಐಷಾರಾಮಿ ಕಾರುಗಳನ್ನು ಕೊಳ್ಳಲು ಕಾರಣವಾದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ:ಅಕ್ಷಯ್​ ನೀಡಿದ್ದ ಆಫರ್​ ತಿರಸ್ಕರಿಸಿ ನಿಮಗೂ ಮಗಳಿದ್ದಾಳೆ ಅರ್ಥಮಾಡಿಕೊಳ್ಳಿ ಎಂದಿದ್ದೆ; ಕಂಗನಾ ಹೀಗೆಳಿದ್ದೇಕೆ?
ರೋಲ್ಸ್-ರಾಯ್ಸ್ ಡೀಲರ್‌ಶಿಪ್‌ನಲ್ಲಿನ ಸಿಬ್ಬಂದಿಯಿಂದ ಅವಮಾನಿಸಿಕೊಂಡ ಸನ್ನಿವೇಶವನ್ನು ಇತ್ತೀಚಿಗಿನ ಸಂದರ್ಶವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 2000ನೇ ವರ್ಷದಲ್ಲಿ ದುಬೈನಲ್ಲಿ ರೋಲ್ಸ್ ರಾಯ್ಸ್ ಕಾರು ಶೋರೂಮ್​​​​​ಗೆ ಹೋಗಿದ್ದೆ. ಸಿಬ್ಬಂದಿ ಒಬ್ಬರು ಬಂದು ಏನು ಬೇಕು ಎಂದು ಕೇಳಿದರು. ನಾನು ರೋಲ್ಸ್​​ ರಾಯ್ಸ್​​ ಕಾರನ್ನು ನೋಡಲು ಬಂದಿದ್ದೇನೆ ಎಂದು ಹೇಳಿದೆ.
ನಾನು ಸಿಂಪಲ್​ ಆಗಿರುವುದನ್ನು ಕಂಡು ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸುವಷ್ಟು ಶ್ರೀಮಂತನಲ್ಲ ಎಂದು ಭಾವಿಸಿ ಸಿಬ್ಬಂದಿ, ನೀವು ಕಾರು ಕೊಳ್ಳಲು ಬಯಸಿದರೆ ಹತ್ತಿರದ ಮಿತ್ಸುಬಿಷಿ ಶೋರೂಮ್​​​ಗೆ ಹೋಗಿ ಅಲ್ಲಿ ಐಷಾರಾಮಿ ಕಾರುಗಳು ಸಿಗುತ್ತವೆ ಎಂದು ವ್ಯಂಗ್ಯವಾಡಿದರು. ಆತನ ನಡುವಳಿಕೆಯಿಂದ ನನಗೆ ಮುಜುಗರವಾಯಿತು. ಬಳಿಕ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದೆ ಆದರೆ ನಾನು ಅದನ್ನು ಬಳಸಲಿಲ್ಲ. ಆ ರೋಲ್ಸ್​ ರಾಯ್ಸ್​​ ಕಾರನ್ನು ಜಾಯ್ ಅಲುಕ್ಕಾಸ್ ಗೋಲ್ಡ್ ಜ್ಯುವೆಲ್ಲರಿ ನಡೆಸಿದ ಬಂಪರ್ ಡ್ರಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನೀಡಲಾಯಿತು ಎಂದು ತಿಳಿಸಿದರು.
ಈಗ ಜಾಯ್ ಅಲುಕ್ಕಾಸ್ ಅವರ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಆ ಬಗ್ಗೆ ಮಾತನಾಡಿದ ಅವರು, ಐಷಾರಾಮಿ ಕಾರುಗಳೆಂದರೆ ಇಷ್ಟವಾದರೂ ಆ ಅನುಭವದ ನಂತರ ಆ ಸಂದರ್ಭದಲ್ಲಿ ಮನಸ್ಸು ಬದಲಾಯಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳಿದರು. ಪ್ರಸ್ತುತ ನಂತರ ದೇಶ-ವಿದೇಶಗಳಲ್ಲಿ ತಮ್ಮ ವ್ಯಾಪಾರ ವಿಸ್ತರಿಸುತ್ತಿದ್ದಂತೆ ಐಷಾರಾಮಿ ಕಾರುಗಳನ್ನು ಕೊಳ್ಳುವ ಆಸೆಯೂ ಈಡೇರಿದೆ. ಎಷ್ಟೇ ಹಣ ಸಂಪಾದಿಸಿದರೂ ಸರಳವಾಗಿರಬಹುದು ಎಂಬುದನ್ನು ಸಾಬೀತುಪಡಿಸಿದ ಅವರು ಸ್ವಾಭಿಮಾನ ದೊಡ್ಡದು ಎಂದ ತೋರಿಸಿಕೊಟ್ಟಿದ್ದಾರೆ.
ಮೊದಲೆಲ್ಲಾ ರೋಲ್ಸ್ ರಾಯ್ಸ್ ಕಾರುಗಳನ್ನು ಸಮಾಜದಲ್ಲಿ ಪ್ರತಿಷ್ಠಿತರಿಗೆ ಮಾತ್ರ ಮಾರಾಟ ಮಾಡಲಾಗುತಿತ್ತು ಎಂದು ಹೇಳಲಾಗುತ್ತದೆ. ಕಂಪನಿಯ ಪ್ರತಿನಿಧಿಗಳು ಕಾರನ್ನು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳು ಮಾತ್ರ ಬಳಸಬೇಕೆಂದು ಬಯಸುತ್ತಿದ್ದರು. ಈಗ ರೋಲ್ಸ್ ರಾಯ್ಸ್ ಕಾರುಗಳು ವ್ಯಾಪಕವಾಗಿ ಲಭ್ಯವಿವೆ. ಸಮಾಜದಲ್ಲಿ ಸ್ಥಿತಿವಂತರು ರೋಲ್ಸ್ ರಾಯ್ಸ್ ಕಾರುಗಳನ್ನು ಸುಲಭವಾಗಿ ಖರೀದಿಸುತ್ತಿದ್ದಾರೆ. (ಏಜೆನ್ಸೀಸ್​​)
ರಾಮ್​ಚರಣ್​ ನೆಕ್ಸ್ಟ್ ಸಿನಿಮಾ ರಿಲೀಸ್​ ಯಾವಾಗ ಗೊತ್ತಾ; ನಿರ್ಮಾಪಕರು ಕೊಟ್ಟ ಸ್ಪಷ್ಟನೆ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
