ನವದೆಹಲಿ:ಸಂಭಾವ್ಯ ಕರೊನಾ ಮೂರನೇ ಅಲೆಯ ಭೀತಿಯ ನಡುವೆಯೇ ಭಾರತೀಯ ಮಕ್ಕಳು ಹವಾಮಾನ ಬದಲಾವಣೆ ಕಾರಣದಿಂದಾಗಿ ಗಂಭೀರ ಅಪಾಯಕ್ಕೆ ಸಿಲುಕಿರುವ ಸಂಗತಿ ಬಯಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳ ಆರೋಗ್ಯ, ಶಿಕ್ಷಣದ ಭವಿಷ್ಯ ಸಂಕಷ್ಟಕ್ಕೆ ಸಿಲುಕಿರುವುದಾಗಿ ಯುನಿಸೆಫ್ ವರದಿ ಎಚ್ಚರಿಸಿದೆ. ಗಂಭೀರ ಹವಾಮಾನ ವೈಪರೀತ್ಯ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಜತೆಗೆ ದಕ್ಷಿಣ ಏಷ್ಯಾದ ಇತರ ಮೂರು ರಾಷ್ಟ್ರಗಳು ಸ್ಥಾನ ಪಡೆದಿವೆ. ಪಾಕಿಸ್ತಾನ 14, ಬಾಂಗ್ಲಾದೇಶ 15, ಅಫ್ಘಾನಿಸ್ತಾನ 25 ಹಾಗೂ ಭಾರತ 26ನೇ ಸ್ಥಾನದಲ್ಲಿವೆ. ಈ ನಾಲ್ಕು ರಾಷ್ಟ್ರಗಳ ಜತೆಗೆ ಒಟ್ಟಾರೆ 33 ದೇಶಗಳ ಅಂದಾಜು 100 ಕೋಟಿಗೂ ಅಧಿಕ ಮಕ್ಕಳ ಜೀವ ಅಪಾಯದಲ್ಲಿರುವುದಾಗಿ ಯುನಿಸೆಫ್ ಮಕ್ಕಳ ಹವಾಮಾನ ಅಪಾಯ ಸೂಚ್ಯಂಕದ ಪರಿಚಯ (ಸಿಸಿಆರ್)ವರದಿಯಲ್ಲಿ ವಿಶ್ಲೇಷಿಸಿದೆ.
ಕಾಡಲಿದೆ ಅತಿವೃಷ್ಟಿ, ಅನಾವೃಷ್ಟಿ:ಭವಿಷ್ಯದಲ್ಲಿ 60 ಕೋಟಿಗೂ ಅಧಿಕ ಭಾರತೀಯರು ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಲಿದ್ದಾರೆ. ಹಾಗೆಯೇ ಜಾಗತಿಕ ತಾಪಮಾನ ಶೇ.2 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿ ನಗರಗಳಿಗೆ ನೆರೆ ಕಾಡಲಿದೆ ಎಂದು ಎಚ್ಚರಿಸಲಾಗಿದೆ.
ದಕ್ಷಿಣ ಏಷ್ಯಾದ ಲಕ್ಷಾಂತರ ಮಕ್ಕಳು ಬರ, ನೆರೆ, ವಾಯುಮಾಲಿನ್ಯ, ಕೆರೆ ಒತ್ತುವರಿಯ ಪರಿಣಾಮದಿಂದ ನೆಲೆ ಕಳೆದುಕೊಂಡು ಹಸಿದು ಬದುಕುವ ಪರಿಸ್ಥಿತಿಗೆ ಸಿಲುಕಲಿದ್ದಾರೆ. ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ ಬದುಕನ್ನು ಹೈರಾಣಾಗಿಸಲಿದೆ.
|ಜಾರ್ಜ್ ಲರೇಯಾ ಅಡ್ಜೇಯಿಯುನಿಸೆಫ್ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ
ಪೂಜೆ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಪೂಜಾರಿ ಸಾವು; ನೋಡನೋಡುತ್ತಿದ್ದಂತೆ ನೂರಾರು ಅಡಿ ಆಳಕ್ಕೆ ಉರುಳಿದ ದೇಹ..

ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
