ನವದೆಹಲಿ: ಪೂರ್ವ ಲಡಾಖ್​​​ನ ಪ್ಯಾಂಗೋಂಗ್​ ಸರೋವರದ ದಕ್ಷಿಣ ತೀರದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಭಾರತ-ಚೀನಾ ನಡುವೆ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಇಂದು ಭಾರತ ಮತ್ತು ಚೀನಾ ನಡುವೆ ಕಮಾಂಡರ್​ ಮಟ್ಟದ ಮಾತುಕತೆ ನಡೆಯುತ್ತಿದೆ. ಆದರೆ ಇತ್ತ ಗಡಿಯಲ್ಲಿ ಎರಡೂ ದೇಶಗಳ ಸೈನಿಕರು, ಸುಸಜ್ಜಿತ ಅಸ್ತ್ರಗಳು, ಯುದ್ಧದ ಟ್ಯಾಂಕ್​​ಗಳೊಂದಿಗೆ ಪರಸ್ಪರ ಗುಂಡಿನ ದಾಳಿ ನಡೆಸುವಷ್ಟು ಅಂತರದಲ್ಲಿ ಬೀಡುಬಿಟ್ಟಿವೆ.ಚೀನಾದ ಯುದ್ಧದ ಟ್ಯಾಂಕ್​​ಗಳು, ಶಸ್ತ್ರಾಸ್ತ್ರಗಳನ್ನೊಳಂಡ ವಾಹನಗಳು ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವ ಕಾಲಾ ಟಾಪ್​ ತಪ್ಪಲು ಪ್ರದೇಶದ ಬಳಿ ಬಂದು ನಿಂತಿವೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಸಜ್ಜುಗೊಂಡಿದೆ. ಸೈನಿಕರು ಕಾಲಾ ಟಾಪ್​ ಬಳಿ ಫಿರಂಗಿ, ಯುದ್ಧದ ಟ್ಯಾಂಕ್​ ಮತ್ತು ಅಗತ್ಯ ಶಸ್ತ್ರಾಸ್ತ್ರಗಳನ್ನು ಸಿದ್ಧ ಮಾಡಿಕೊಂಡು ನಿಂತಿದ್ದಾರೆ.
ಗಡಿಯಲ್ಲಿ ಮತ್ತೆ ಹೊಸದಾಗಿ ಉದ್ವಿಗ್ನತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಭಾರತೀಯ ಯುದ್ಧ ಟ್ಯಾಂಕ್​​ಗಳನ್ನು ಸ್ಪ್ಯಾಂಗೂರ್​ ತ್ಸೋ ಮತ್ತು ಚುಶುಲ್​ ನಡುವಿನ ಸೂಕ್ಷ್ಮ ಪ್ರದೇಶವಾದ ನೈಋತ್ಯ ಬಯಲು ಪ್ರದೇಶಗಳಲ್ಲಿ ಭಾರತೀಯ ಯುದ್ಧ ಟ್ಯಾಂಕ್​ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಗಿದೆ.ಇದನ್ನೂ ಓದಿ:ಸುದೀಪ್​ ಮತ್ತು ಇಂದ್ರಜಿತ್​ ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ!; ಇದರ ಹಿಂದಿನ ಮರ್ಮವೇನು?
ಭಾರತ-ಚೀನಾ ನಡುವೆ ಈಗಾಗಲೇ ಮಾತುಕತೆ ನಡೆದಿದೆ. ಆದರೂ ಚೀನಾ ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ. ಆಗಸ್ಟ್​ 29-30 ರ ಮಧ್ಯರಾತ್ರಿ ಚೀನಾ ಸೈನಿಕರು ಪ್ಯಾಂಗೋಂಗ್​ ಸರೋವರದ ದಕ್ಷಿಣ ತೀರದ ಬಳಿ ಏಕಪಕ್ಷೀಯವಾಗಿ ವಾಸ್ತವ ಸ್ಥಿತಿ ಬದಲಿಸಲು ಪ್ರಚೋದನಕಾರಿ ಪ್ರಯತ್ನಗಳನ್ನು ಮಾಡಿದ್ದರು. ಅವರನ್ನು ಭಾರತೀಯ ಸೇನೆ ಸಮರ್ಥವಾಗಿ ಹಿಮ್ಮೆಟ್ಟಿಸಿದೆ ಎಂದು ನಿನ್ನೆ ರಕ್ಷಣಾ ಸಚಿವಾಲಯ ಹೇಳಿತ್ತು. ಚೀನಾದ ಉಪಟಳ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಎರಡೂ ದೇಶಗಳ ನಡುವೆ ಕಮಾಂಡರ್​ ಮಟ್ಟದ ಮಾತುಕತೆ ನಡೆಯುತ್ತಿದೆ. (ಏಜೆನ್ಸೀಸ್)
‘ಅಂದು ಏನು ನಡೆಯಿತೋ..ಅದು ಭಯಾನಕತೆಯನ್ನೂ ಮೀರಿದ್ದು…’ ಸುರೇಶ್​ ರೈನಾ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
