ಬೆಂಗಳೂರು:ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ರೆಂಡೆಸಿವಿರ್​ನ ಉತ್ಪಾದನೆಗೆ ಅಮೆರಿಕದ ಗಿಲ್​ಲೀಡ್​ ಕಂಪನಿಯ ಪರವಾನಗಿ ಪಡೆದಿರುವ ಭಾರತದ ಹೈದರಾಬಾದ್​ ಮೂಲದ ಹೆಟೆರೊ ಲ್ಯಾಬ್ಸ್​ ಲಿಮಿಟೆಡ್​, ರೆಂಡೆಸಿವಿರ್​ನ ಜೆನರಿಕ್​ ಮಾದರಿಯ ಔಷಧದ ಬೆಲೆಯನ್ನು 100 ಮಿಲಿಗ್ರಾಂನ ಒಂದು ವಯಲ್​ಗೆ 5,400 ರೂ. ನಿಗದಿಪಡಿಸಿದೆ.
ಹೆಟೆರೋ ಕಂಪನಿಯು ಈಗಾಗಲೆ ರೆಂಡೆಸಿವಿರ್​ನ ಜೆನರಿಕ್​ ಮಾದರಿಯ ಚುಚ್ಚುಮದ್ದುಗಳನ್ನು ಉತ್ಪಾದಿಸಿದ್ದು, 20 ಸಾವಿರ ವಯಲ್​ಗಳನ್ನು ಆಸ್ಪತ್ರೆಗೆ ಸರಬರಾಜು ಮಾಡುತ್ತಿರುವುದಾಗಿ ಹೇಳಿದೆ.
ಇದನ್ನೂ ಓದಿ:ಕರೊನಾ ರೋಗಲಕ್ಷಣ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಾಯುತ್ತಿರುವ ಜನ
ಸಿಪ್ಲಾ ಕಂಪನಿ ಕೂಡ ಗಿಲ್​ಲೀಡ್​ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ತಾನು ಸಿದ್ಧಪಡಿಸುವ ರೆಂಡೆಸಿವಿರ್​ ಕೋವಿಡ್​ ನಿರೋಧಕ ಚುಚ್ಚುಮದ್ದಿನ ಬೆಲೆಯಲ್ಲಿ 100 ಮಿಲಿಗ್ರಾಂನ ಒಂದು ವಯಲ್​ಗೆ 5 ಸಾವಿರ ರೂ. ನಿಗದಿಪಡಿಸುವುದಾಗಿ ಹೇಳಿದೆ.
ತುರ್ತು ಅವಶ್ಯಕತೆ ಇರುವ ಕರೊನಾ ಸೋಂಕಿತರಿಗೆ ಮಾತ್ರವೇ ಕೊಡಬೇಕು ಎಂಬ ಷರತ್ತಿನ ಮೇರೆಗೆ ಭಾರತದಲ್ಲಿ ರೆಂಡೆಸಿವಿರ್​ನ ಜೆನರಿಕ್​ ಮಾದರಿಯ ಚುಚ್ಚುಮದ್ದನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕಿರುತೆರೆ ನಟಿ ಮನೆಗೆ ನುಗ್ಗಿ ಯುವಕರ ಗುಂಪಿನಿಂದ ಹಲ್ಲೆ: ಅಶ್ಲೀಲ ಪದಗಳಿಂದ ನಿಂದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
