ಕಂದಹಾರ್​​ :ಆಫ್ಘಾನಿಸ್ತಾನದ ಹೊಸ ಪ್ರದೇಶಗಳನ್ನು ತಾಲಿಬಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಭಾರತ, ಕಂದಹಾರ್​ನಲ್ಲಿರುವ ತನ್ನ ದೂತಾವಾಸ(ಕಾನ್ಸುಲೇಟ್​)ದ ಸುಮಾರು 50 ಡಿಪ್ಲೋಮಾಟ್​ಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ವಾಪಸ್​ ಕರೆಸಿಕೊಳ್ಳುತ್ತಿದೆ ಎನ್ನಲಾಗಿದೆ.
ಐಎಎಫ್​ನ ವಿಶೇಷ ವಿಮಾನವೊಂದನ್ನು ಶನಿವಾರ ಕಂದಹಾರ್​ಗೆ ಕಳುಹಿಸಲಾಗಿದ್ದು, ಅಲ್ಲಿರುವ ಭಾರತೀಯ ಡಿಪ್ಲೋಮ್ಯಾಟ್​ಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಇಂಡೋಟಿಬೆಟನ್ ಬಾರ್ಡರ್​ ಪೊಲೀಸರ ತಂಡವನ್ನು ತೆರವುಗೊಳಿಸಲಾಗುವುದು. ಭಾರತೀಯ ಕಾನ್ಸುಲೇಟನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೋವಿಡ್ ನಿಯಮ ಮರೆತು ಮಧ್ಯರಾತ್ರಿ ಪಾರ್ಟಿ! 37 ಜನರ ಬಂಧನ
ಅಮೆರಿಕವು ತನ್ನ ಪಡೆಗಳನ್ನು ಆಗಸ್ಟ್​ ವೇಳೆಗೆ ಹಿಂತೆಗೆಯುವ ಬಗ್ಗೆ ಚಿಂತಿಸುತ್ತಿರುವಂತೆಯೇ, ಹಲವು ಆತಂಕವಾದಿ ದಾಳಿಗಳು ನಡೆಯುತ್ತಿವೆ. ಅಫ್ಘಾನಿಸ್ತಾನದ 421 ಜಿಲ್ಲೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಒಂದನೇ ಮೂರರಷ್ಟು ಪ್ರದೇಶಗಳನ್ನು ಈಗ ತಾಲಿಬಾನ್ ನಿಯಂತ್ರಿಸುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್)
ಜನಸಂಖ್ಯೆ ನಿಯಂತ್ರಿಸಲು ಸಜ್ಜಾಯ್ತು ಈ ರಾಜ್ಯ! 2026 ರೊಳಗೆ ಜನನ ದರ ಇಳಿಸುವ ಗುರಿ

ಮನೆ ಮುಂದೆ ನಿಲ್ಲಿಸುವ ದ್ವಿಚಕ್ರವಾಹನಗಳೇ ಈತನ ಟಾರ್ಗೆಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
