ನವದೆಹಲಿ:ಸ್ಯಾನ್​ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ಮಾಡಿ, ಬೆಂಕಿಯಿಟ್ಟಿರುವುದಾಗಿ ವರದಿಯಾಗಿದೆ. ಈ ಘಟನೆಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.
ಘಟನೆಯ ಬಗ್ಗೆ ಯುನೈಟೆಡ್​ ಸ್ಟೇಟ್​ ಡಿಪಾರ್ಟ್​ಮೆಂಟ್​ನ ವಕ್ತಾರ ಮ್ಯಾಥೀವ್​ ಮಿಲ್ಲರ್ ಟ್ವೀಟ್​ ಮಾಡಿದ್ದು, ಶನಿವಾರ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಹಾನಿಗೊಳಿಸಿ, ಬೆಂಕಿ ಹಚ್ಚುವ ಪ್ರಯತ್ನ ಮಾಡಿರುವುದನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿರುವ ರಾಜತಾಂತ್ರಿಕ ವ್ಯವಸ್ಥೆಗಳು ಅಥವಾ ರಾಜತಾಂತ್ರಿಕರ ವಿರುದ್ಧದ ವಿಧ್ವಂಸಕತೆ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ ಎಂದು ಮಿಲ್ಲರ್​ ತಿಳಿಸಿದ್ದಾರೆ.
ಇದನ್ನೂ ಓದಿ:ಪೀಕ್​ ಅವರ್​ನಲ್ಲೇ ಕೈಕೊಟ್ಟ ಮೆಟ್ರೋ: ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ, ಪ್ರಯಾಣಿಕರ ಪರದಾಟ
The U.S. strongly condemns the reported vandalism and attempted arson against the Indian Consulate in San Francisco on Saturday. Vandalism or violence against diplomatic facilities or foreign diplomats in the U.S. is a criminal offense.
— Matthew Miller (@StateDeptSpox)July 3, 2023

ಸ್ಯಾನ್ ಫ್ರಾನ್ಸಿಸ್ಕೋ ಅಗ್ನಿಶಾಮಕ ಇಲಾಖೆಯು ಭಾರತೀಯ ರಾಯಭಾರ ಕಚೇರಿಗೆ ತಗುಲಿದ್ದ ಬೆಂಕಿಯನ್ನು ತ್ವರಿತವಾಗಿ ನಂದಿಸಿದ್ದು, ಈ ಘಟನೆಯಲ್ಲಿ ಯಾರೊಬ್ಬರಿಗೂ ಯಾವುದೇ ದೊಡ್ಡ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ದಿಯಾ ಟಿವಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಯಭಾರ ಕಚೇರಿಗೆ ಬೆಂಕಿ ಇಡುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಖಲಿಸ್ತಾನಿ ಬೆಂಬಲಿಗರೇ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಿಂಸೆ ಹಿಂಸೆಯನ್ನು ಹುಟ್ಟು ಹಾಕುತ್ತದೆ ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ಖಲಿಸ್ತಾನ ಪರ ಸಂಘಟನೆಗಳಾದ ಖಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಕೆನಡಾದ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ನೇತೃತ್ವ ವಹಿಸಿದ್ದ ಗೊತ್ತುಪಡಿಸಿದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರ ಸಾವಿನ ವರದಿಯ ಸುದ್ದಿ ಪತ್ರಿಕೆಯ ತುಣುಕುಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನಿಜ್ಜಾರ್​ ಅವರನ್ನು ಕಳೆದ ತಿಂಗಳು ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಇದನ್ನೂ ಓದಿ:ಗಂಡ-ಗರ್ಲ್​ಫ್ರೆಂಡ್​ ಕಹಾನಿ: ಡೆತ್​ನೋಟ್​ ಬರೆದು,​ ಸ್ಟೇಟಸ್ ಹಾಕಿ ಬದುಕು ಅಂತ್ಯಗೊಳಿಸಿದ ಗೃಹಿಣಿ
ARSON ATTEMPT AT SF INDIAN CONSULATE:#DiyaTVhas verified with@CGISFO@NagenTVthat a fire was set early Sunday morning between 1:30-2:30 am in the San Francisco Indian Consulate. The fire was suppressed quickly by the San Francisco Department, damage was limited and no…pic.twitter.com/bHXNPmqSVm
— Diya TV (@DiyaTV)July 3, 2023

46 ವರ್ಷದ ನಿಜ್ಜಾರ್ ಎಂಬಾತ ಜಲಂಧರ್ ಮೂಲದವನಾಗಿದ್ದು, ಕೆನಡಾ ಮೂಲದ ಅತ್ಯಂತ ಹಳೆಯ ಖಲಿಸ್ತಾನಿ ಭಯೋತ್ಪಾದಕ ಗುಂಪುಗಳಲ್ಲಿ ಒಂದಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ಗೆ (ಬಿಕೆಐ) ಹಣಕಾಸಿನ ನೆರವು ನೀಡಿದ ಆರೋಪ ಹೊತ್ತಿದ್ದರು.
ಕಳೆದ ಮಾರ್ಚ್‌ನಲ್ಲಿ ಪಂಜಾಬ್ ಪೊಲೀಸರು ಭಾರತದಲ್ಲಿ ಅಮೃತ್​ಪಾಲ್ ಸಿಂಗ್‌ಗಾಗಿ ರಾಷ್ಟ್ರವ್ಯಾಪಿ ಹುಡುಕಾಟವನ್ನು ಪ್ರಾರಂಭಿಸಿದಾಗ, ಖಲಿಸ್ತಾನಿ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಾನಿ ಮಾಡಿದ್ದರು.(ಏಜೆನ್ಸೀಸ್​)
ಎನ್‌ಐಎಗೆ ಬೇಕಾಗಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದಲ್ಲಿ ಹತ್ಯೆ

VIDEO|ಖಲಿಸ್ತಾನಿ ಬೆಂಬಲಿಗರ ವಿಕೃತಿ; ಇಂದಿರಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಸ್ತಬ್ಧಚಿತ್ರ ಮೆರವಣಿಗೆ!

ಬ್ರಿಟನ್​ನಲ್ಲಿ ಭಾರತದ ರಾಷ್ಟ್ರಧ್ವಜ ಇಳಿಸಿದ ಖಲಿಸ್ತಾನಿಗಳು; ಭಾರತ ಸರ್ಕಾರದ ಪ್ರತಿಕ್ರಿಯೆ ಹೀಗಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 4 =
Remember me
