ಕೋಲ್ಕತ್ತ:ಜಪಾನ್​ನ ಐಷಾರಾಮಿ ಹಡಗು ಡೈಮೆಂಡ್ ಪ್ರಿನ್ಸ್​ನಲ್ಲಿ ಇರುವ 3700ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಈಗಾಗಲೇ 137 ಜನರಲ್ಲಿ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ.
ಹಡಗಿನಲ್ಲಿದ್ದ ಹಾಂಗ್​ಕಾಂಗ್​ ವ್ಯಕ್ತಿಯೋರ್ವರಿಗೆ ಕೊರೊನಾ ವೈರಸ್​ ಸೋಂಕಿತರು ಇರುವ ಕಾರಣ ಅದನ್ನು ಜಪಾನ್​ ಬಂದರಿನಿಂದ ನಿರ್ಬಂಧಿಸಲಾಗಿದೆ. ಫೆ.5ರಿಂದಲೂ ಅದು ಯೊಕೊಹಾಮಾ ಎಂಬಲ್ಲಿ ಸಮುದ್ರದ ಮಧ್ಯೆಯೇ ಇದೆ. ಅದಲ್ಲಿರುವ 3700 ಜನರಲ್ಲಿ 160 ಮಂದಿ ಭಾರತೀಯರೂ ಇದ್ದಾರೆ.
ಸೋಮವಾರ 66 ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು ಅಲ್ಲಿಗೆ ಸೋಂಕಿತರ ಸಂಖ್ಯೆ 137ಕ್ಕೆ ಏರಿದೆ. ಈ ಮಧ್ಯೆ ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ತಮ್ಮನ್ನು ರಕ್ಷಿಸುವಂತೆ ಪ್ರಧಾನಿ ಮೋದಿಯವರ ಬಳಿ ಮನವಿ ಮಾಡಿದ್ದಾರೆ.
ಬಿನಯ್​ ಕುಮಾರ್​ ಸರ್ಕಾರ್​ ಎಂಬುವರು ಇನ್ನೂ ಕೆಲವು ಭಾರತೀಯರ ಜತೆ ನಿಂತು ವಿಡಿಯೋ ಮಾಡಿದ್ದಾರೆ. ಇಂದು ಮತ್ತೆ 66 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿ ನಿಜಕ್ಕೂ ಭಯಭೀತರಾಗಿದ್ದೇವೆ. ನಮ್ಮನ್ನು ರಕ್ಷಿಸಲು ಭಾರತ ಸರ್ಕಾರ ಹಾಗೂ ವಿಶ್ವಸಂಸ್ಥೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಇಲ್ಲಿರುವ ಪ್ರಯಾಣಿಕರನ್ನು ಕೂಡಲೇ ಹಡಗಿನಿಂದ ಬೇರ್ಪಡಿಸಬೇಕು. ಹಡಗಿನಲ್ಲಿ 3700 ಮಂದಿ ಇದ್ದಾರೆ. ಆದರೆ ಅಧಿಕಾರಿಗಳು ಕೇವಲ 500 ಮಂದಿಯ ರಕ್ತದ ಮಾದರಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಯಾರಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆಯೋ ಅವರನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದೆ. ಉಳಿದವರನ್ನು ಯಾರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿಲ್ಲ. ನಮಗೆ ಸಹಾಯ ಮಾಡಲು ಜಪಾನ್​ಗೆ ಸಾಧ್ಯವಿಲ್ಲ ಎಂದಾದರೆ ಕೂಡಲೇ ವಿಶ್ವಸಂಸ್ಥೆ ಅಥವಾ ಭಾರತ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿಕೊಂಡಿದ್ದು, ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿನಯ್​ ಕುಮಾರ್ ಸರ್ಕಾರ್​ ಸೇರಿ ಭಾರತೀಯ ಮೂಲದ ಹಲವರು ಹಡಗಿನಲ್ಲಿ ಶೆಫ್​ (ಬಾಣಸಿಗ) ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಇಲ್ಲಿರುವ ಶೇ.90ರಷ್ಟು ಭಾರತೀಯರು ಸುರಕ್ಷಿತವಾಗಿ ಇದ್ದಾರೆ. ಆದರೆ ನಮ್ಮನ್ನು ರಕ್ಷಿಸಿ ಎಂದು ಮೋದಿ ಜೀ ಅವರನ್ನು ಕೇಳಿಕೊಳ್ಳುತ್ತಿದ್ದೇನೆ ಎಂದು ಬಿನಯ್​ ಹೇಳಿದ್ದಾರೆ. (ಏಜೆನ್ಸೀಸ್​)
https://www.facebook.com/binaykumar.sarkar/videos/1780986532031897/?t=1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
