ನವದೆಹಲಿ:ಟೀಂ ಇಂಡಿಯಾದ ಯುವ ವೇಗದ ಬೌಲರ್ ಮುಖೇಶ್ ಕುಮಾರ್ ತಮ್ಮ ಬಾಲ್ಯದ ಗೆಳತಿ ಬಿಹಾರದ ದಿವ್ಯಾ ಸಿಂಗ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಅದ್ದೂರಿಯಾಗಿ ನಡೆದ ಈ ವಿವಾಹದ ಫೋಟೋಗಳು ಶೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿವೆ.
Mukesh Kumar, Caught & Bowled ft. Divya Singh 🫶
Welcome to the DC Family, Divya ♥️pic.twitter.com/E8Ue3Rglpd
— Delhi Capitals (@DelhiCapitals)November 29, 2023

ಈ ವರ್ಷದ ಫೆಬ್ರವರಿಯಲ್ಲಿ ಮುಕೇಶ್ ಅವರು ದಿವ್ಯಾ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.  ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ  ನವೆಂಬರ್ 28 ರ ಮಂಗಳವಾರದಂದು ಗೋರಖ್‌ಪುರದ ಹೋಟೆಲ್‌ನಲ್ಲಿ  ಈ ವಿವಾಹ ಕಾರ್ಯಕರಮ ನಡೆದಿದೆ.  ಡಿಸೆಂಬರ್ 4 ರಂದು ಗೋರಖ್‌ಪುರದಲ್ಲಿ ಮುಖೇಶ್-ದಿವ್ಯಾ ವಿವಾಹ ಆರತಕ್ಷತೆ ನಡೆಯಲಿದೆ.
ಚಾಪ್ರಾದ ಬನಿಯಾಪುರ ಬೇರುಯಿ ಗ್ರಾಮದ ನಿವಾಸಿ ದಿವ್ಯಾ ಸಿಂಗ್ ಅವರನ್ನು ಮುಖೇಶ್ ಕುಮಾರ್ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.ಡಿಸೆಂಬರ್ 4 ರಂದು ಮುಖೇಶ್ ಕುಮಾರ್ ಅವರ ಸ್ವಗ್ರಾಮದಲ್ಲಿ ಔತಣ ಕೂಟ ಆಯೋಜಿಸಲಾಗಿದೆ.
ವರ್ಷದ ಹಿಂದೆ ಟೀಂ ಇಂಡಿಯಾವನ್ನು ಸೇರಿಕೊಂಡ ಮುಖೇಶ್ ವರ್ಷದೊಳಗೆ ತಂಡದ ಪರವಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿರುವುದು ಗಮನಾರ್ಹ. ಈ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ, ಟೆಸ್ಟ್ ಮತ್ತು ಟಿ20 ಸ್ವರೂಪಗಳಲ್ಲಿ ಭಾರತದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಖೇಶ್ ಪಾದಾರ್ಪಣೆ ಮಾಡಿದ್ದರು. ಮುಖೇಶ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, 2022 ರ ಐಪಿಎಲ್ ಹರಾಜಿನಲ್ಲಿ ಮುಖೇಶ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 5 ಕೋಟಿಗೆ ಖರೀದಿಸಿತು.
ಪವರ್‌ಲಿಫ್ಟಿಂಗ್‌ ಸ್ಪರ್ಧೆ; ಕಂಚಿನ ಪದಕ ಗೆದ್ದ ನಟಿ ಪ್ರಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
