ಪ್ರಕೃತಿಯನ್ನು ಶ್ರದ್ಧೆಯಿಂದ ಕಾಣಬೇಕು, ಅದರೊಂದಿಗೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ಯುವಸಮುದಾಯದಲ್ಲಿ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಭಾನುವಾರ ದೇಶಾದ್ಯಂತ ನಡೆದ ‘ಪ್ರಕೃತಿ ವಂದನೆ’ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಪಾಲ್ಗೊಳ್ಳುವಿಕೆ ಜತೆಗೆ ಜನಸಾಮಾನ್ಯರು ಗಿಡಮರ, ನದಿಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಹಿಂದೂ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದಿಂದ (ಹಿಂದೂ ಸ್ಪಿರಿಚುವಲ್ ಸೇವಾ ಫೇರ್) ಭಾನುವಾರ ನಡೆದ ‘ಪ್ರಕೃತಿ ವಂದನೆ’ ಕಾರ್ಯಕ್ರಮದ ನಿಮಿತ್ತ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಗಿಡಮರ, ನದಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಸಸಿ ನೆಟ್ಟರೆ, ಮನೆ ಮುಂದಿನ ತುಳಸಿಕಟ್ಟೆ, ಸಸಿಗಳಿಗೆ ಪೂಜೆ ಸಲ್ಲಿಸಲಾಯಿತು. ಪ್ರಕೃತಿಯನ್ನು ಆರಾಧಿಸುವ ಜತೆಗೆ, ನಿಸರ್ಗಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಸಂದೇಶ ನೀಡುವ ಜತೆಗೆ, ರಚನಾತ್ಮಕ ಕಾರ್ಯಕ್ರಮಗಳು ನಡೆದವು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂತಾದವರು ಕೂಡ ಸಸಿ ನೆಟ್ಟು, ಪರಿಸರ ರಕ್ಷಣೆಯ ಸಂದೇಶ ನೀಡಿದರು. ಸ್ವಾಮೀಜಿಗಳು, ಮಠಾಧೀಶರು, ಸಂತ-ಮಹಂತರು, ಸಾಮಾಜಿಕ ಧುರೀಣರು ಈ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಹೀಗಿತ್ತು ಆಚರಣೆ:ಮೂರು ಬಾರಿ ಓಂಕಾರ ಪಠಿಸಿ, ಮರಕ್ಕೆ ಅರಿಶಿನ/ಕುಂಕುಮದಿಂದ ಪೂಜಿಸಲಾಯಿತು. ರಕ್ಷಣೆಯ ಸಂಕೇತವಾಗಿ ಪವಿತ್ರ ದಾರ ಕಟ್ಟಲಾಯಿತು. ‘ನಮ್ಮ ದೈನಂದಿನ ಜೀವನದಲ್ಲಿ ಪರಿಸರವನ್ನು ರಕ್ಷಿಸುತ್ತೇವೆ’ ಎಂಬ ಪ್ರತಿಜ್ಞೆ, ಸಾಮೂಹಿಕವಾಗಿ ಸ್ವೀಕಾರ. ಮರಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಆರತಿ ಸಮರ್ಪಣೆ.
ಹಿನ್ನೆಲೆ:ಅದು 1737ರ ಕಾಲಘಟ್ಟ. ಜೋಧಪುರದ ರಾಜನಿಗಾಗಿ ಅರಮನೆ ನಿರ್ಮಾಣ ನಡೆಯುತ್ತಿತ್ತು. ಅದಕ್ಕಾಗಿ ಕಟ್ಟಿಗೆಗಳನ್ನು ಸಂಗ್ರಹಿಸಲು ಮರಗಳನ್ನು ಕಡಿಯುತ್ತ ರಾಜಸೇವಕರು ಖೇಜ್​ಡಲಿ ಗ್ರಾಮಕ್ಕೆ ಬಂದರು. ರಾಜನ ಆಸ್ಥಾನದ ಅಧಿಕಾರಿಗಳು ಮರಗಳನ್ನು ಕಡಿಯಲು ಆದೇಶಿಸಿದರು. ಬಿಷ್ಣೋಯಿ ಸಮಾಜ ವಾಸಿಸುವ ಈ ಗ್ರಾಮದಲ್ಲಿ ಮರಗಳನ್ನು ಕಡಿಯುವ ಸುದ್ದಿ ಆಕ್ರೋಶಕ್ಕೆ ಕಾರಣವಾಯಿತು. ಮುಂಚೆಯಿಂದಲೂ ಪರಿಸರವನ್ನು ಪೂಜಿಸಿಕೊಂಡು, ಅದರ ರಕ್ಷಣೆ ಮಾಡುತ್ತ ಬಂದಿರುವ ಬಿಷ್ಣೋಯಿ ಸಮಾಜಕ್ಕೆ ಸೇರಿದವರೇ ಅಮೃತಾದೇವಿ. ಅವರು ಮತ್ತು ಅವರ ಇಬ್ಬರು ಮಕ್ಕಳು, ಮರಗಳನ್ನು ಅಪ್ಪಿಕೊಂಡು, ರಕ್ಷಣೆಗೆ ಮುಂದಾದರು. ಕ್ರೌರ್ಯ ಮೆರೆದ ರಾಜಸೇವಕರು ಅಮೃತಾದೇವಿ ಬಿಷ್ಣೋಯಿ ಮತ್ತು ಆಕೆಯ ಇಬ್ಬರು ಪುತ್ರಿಯರ ಹತ್ಯೆ ಮಾಡಿದರು. ಆ ಬಳಿಕ ಅಮೃತಾದೇವಿ ಸ್ನೇಹಿತೆಯರು, ಗ್ರಾಮಸ್ಥರು ಅದೇ ರೀತಿ ಮರವನ್ನು ಅಪ್ಪಿಕೊಂಡರಾದರೂ, 363 ಜನ ಹುತಾತ್ಮರಾದರು! ಹೀಗೆ ಅಪ್ಪಿಕೋ ಚಳವಳಿಗೆ ಆಗಲೇ ಚಾಲನೆ ನೀಡಿ, ಪರಿಸರ ಉಳಿವಿಗೆ ಅಮೃತಾದೇವಿ ಪ್ರಾಣವನ್ನು ಅರ್ಪಿಸಿದ್ದು ಆಗಸ್ಟ್ 28ರಂದು. ಈ ಬಲಿದಾನವನ್ನು ಸ್ಮರಿಸಿ, ಪರಿಸರ ಉಳಿವಿನ ಅಗತ್ಯವನ್ನು ಸಾರಲು ಪ್ರಕೃತಿ ವಂದನೆ ನಡೆಯಿತು.
ಪ್ರಕೃತಿ ಸಂರಕ್ಷಣೆ ನಮ್ಮ ಜೀವನಧರ್ಮದ ಭಾಗವೇ ಆಗಿದೆ.ಕೆಲ ವರ್ಷಗಳಿಂದ ಭಾರತದಲ್ಲಿ ಮರ ಮತ್ತು ಅರಣ್ಯದ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿಯೂ ಒಟ್ಟಾಗಿ ಸಾಗಬೇಕಿದೆ.
| ನರೇಂದ್ರ ಮೋದಿಪ್ರಧಾನಿ
ಪ್ರಕೃತಿಯಲ್ಲಿ ಪರಮಾತ್ಮ ಇದ್ದಾನೆ. ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡುಕೊಳ್ಳದವರು ಬೇರೆಲ್ಲೂ ಕಂಡುಕೊಳ್ಳಲು ಸಾಧ್ಯವಿಲ್ಲ. ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಕರ್ತವ್ಯ ಮಾತ್ರವಲ್ಲ ಅದನ್ನು ಪವಿತ್ರವಾದ ಪೂಜೆ ಎಂದೇ ಭಾವಿಸಬೇಕು. ಜಲಸ್ರೋತಗಳನ್ನು ರಕ್ಷಿಸಿಕೊಳ್ಳಬೇಕು. ಕೆರೆಗಳ ಜೀಣೋದ್ಧಾರ ಆಗಬೇಕು. ನಿಜಾರ್ಥದಲ್ಲಿ ಪರಿಸರದ ಪೂಜೆ ಮಾಡೋಣ.
| ಶ್ರೀ ಶ್ರೀ ರವಿಶಂಕರ್ ಗುರೂಜಿಆಧ್ಯಾತ್ಮಿಕ ನಾಯಕರು

ದಾಖಲೆ ಮೊತ್ತಕ್ಕೆ ಓಟಿಟಿಗೆ ಸೇಲ್​ ಆಯ್ತಾ ತಮಿಳಿನ ಮಾಸ್ಟರ್​?; ದಕ್ಷಿಣ ಭಾರತದಲ್ಲಿಯೇ ಇದು ಹೊಸ ರೆಕಾರ್ಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
