ನವದೆಹಲಿ:ಭಾರತದಲ್ಲಿ ಆಕ್ಸ್​ಫರ್ಡ್​ ವಿವಿಯ ಕರೊನಾ ಲಸಿಕೆ ಉತ್ಪಾದನೆಗೆ ಪರವಾನಗಿ ಪಡೆದು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿರುವ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾಗೆ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ನೋಟಿಸ್​ ನೀಡಿದೆ.
ಬ್ರಿಟನ್​ನಲ್ಲಿ ಈ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಈ ವೇಳೆ ಲಸಿಕೆ ಪಡೆದ ವ್ಯಕ್ತಿಯೊಬ್ಬರಿಗೆ ಗಂಭೀರ ಅಡ್ಡ ಪರಿಣಾಮ ಉಂಟಾದ ಕಾರಣ ನಾಲ್ಕು ದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಈ ವಿಷಯವನ್ನು ತಮ್ಮ ಗಮನಕ್ಕೇಕೆ ತಂದಿಲ್ಲ ಹಾಗೂ ಕ್ಲಿನಿಕಲ್​ ಟ್ರಯಲ್​ ಏಕೆ ನಿಲ್ಲಿಸಿಲ್ಲ ಎಂದು ನೋಟಿಸ್​ನಲ್ಲಿ ಕೇಳಲಾಗಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಬಿಡುಗಡೆಗೆ ತರಾತುರಿ ಇಲ್ಲ; 9 ಕಂಪನಿಗಳ ಜಂಟಿ ಹೇಳಿಕೆ; ವರ್ಷಾಂತ್ಯಕ್ಕೂ ಅನುಮಾನ…!
ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಈ ಪರೀಕ್ಷೆಯನ್ನೇಕೆ ಮುಂದುವರಿಸುತ್ತಿದೆ? ಕ್ಲಿನಿಕಲ್​ ಟ್ರಯಲ್​ ವೇಳೆ ಉಂಟಾದ ಪರಿಣಾಮಗಳ ಬಗ್ಗೆ ವಿಸ್ತೃತ ವರದಿಯನ್ನೇಕೆ ನೀಡಿಲ್ಲ ಎಂದು ನೋಟಿಸ್​ನಲ್ಲಿ ಪ್ರಶ್ನಿಸಲಾಗಿದೆ. ಭಾರತದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್​ ಎಂದು ಕರೆಯಲಾಗುತ್ತಿದೆ. ಜತೆಗೆ ಎರಡನೇ ಹಾಗೂ ಮೂರನೇ ಹಂತದ ಪರೀಕ್ಷೆಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಮೈಸೂರು ಸೇರಿ 17ಕ್ಕೂ ಅಧಿಕ ಕಡೆಗಳಲ್ಲಿ 1,600ಕ್ಕೂ ಅಧಿಕ ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತಿದೆ.
ನಮಗೆ ಈವರೆಗೂ ಟ್ರಯಲ್​ ನಿಲ್ಲಿಸುವಂತೆ ಆದೇಶಗಳು ಬಂದಿಲ್ಲ. ಔಷಧ ಮಹಾನಿಯಂತ್ರಕರ ಸೂಚನೆಗಳನ್ನು ಪಾಲನೆ ಮಾಡಲಾಗುತ್ತದೆ.ಒಂದು ವೇಳೆ ಸುರಕ್ಷತೆ ಬಗ್ಗೆ ಅವರಿಗೆ ಆತಂಕಗಳಿದ್ದರೆ ನಿವಾರಿಸಲಾಗುವುದು ಜತೆಗೆ, ನಿಗದಿತ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದು ಸಿರಂ ಇನ್​ಸ್ಟಿಟ್ಯೂಟ್​ ಮಾಹಿತಿ ನೀಡಿದೆ.
ಇದನ್ನೂ ಓದಿ;ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​ ಸ್ಥಗಿತ; ಲಸಿಕೆ ಪಡೆದ ವ್ಯಕ್ತಿಗೆ ಏನಾಗಿದೆ..?
ಕೋವಿಶೀಲ್ಡ್​ ಲಸಿಕೆ ವರ್ಷಾಂತ್ಯಕ್ಕೆ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿತ್ತು ಜತೆಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 225 ರೂ.ಗೆ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಈಗ ಕೊಂಚ ಆತಂಕ ಮನೆ ಮಾಡಿರುವುದಂತೂ ಸತ್ಯ.
ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:1 − 1 =
Remember me
