ಮುಂಬೈ:ತೀವ್ರ ಹಣದುಬ್ಬರ ಅಪಾಯ ಇರುವ ಕಾರಣ ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಸಾಕಷ್ಟು ದ್ರವ್ಯತೆ ಖಾತರಿಪಡಿಸಿಕೊಳ್ಳುವ ಸೂಕ್ಷ್ಮ ವಿಧಾನವನ್ನು ಅನುಸರಿಸಲಾಗುವುದು. ಸಂಕಷ್ಟಗಳ ನಡುವೆಯೂ ಭಾರತದ ಅರ್ಥವ್ಯವಸ್ಥೆ ಪುನಶ್ಚೇತನ ಕಾಣಲಿದೆ ಎಂಬ ವಿಶ್ವಾಸವನ್ನು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ವ್ಯಕ್ತಪಡಿಸಿದೆ.
ಆರ್​ಬಿಐ ಶುಕ್ರವಾರ ತನ್ನ 2021&22ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಕಟಿಸಿದೆ. ಕಳೆದ ವರ್ಷದಲ್ಲಿ ಅನೇಕ ಸವಾಲುಗಳಿದ್ದವು. ಬೃಹತ್​ ಸವಾಲುಗಳಿದ್ದರೂ ಅವುಗಳನ್ನು ಎದುರಿಸುತ್ತ ಪುನಶ್ಚೇತನವನ್ನೂ ಆಥಿರ್ಕತೆ ಕಾಣುತ್ತಿದೆ. ಪೂರೈಕೆ ಜಾಲದ ತೊಡಕುಗಳನ್ನು ನಿವಾರಿಸುತ್ತ, ವಿತ್ತೀಯ ನೀತಿಯ ಮಾಪನಾಂಕ ಮಾಡುತ್ತ ಹಣದುಬ್ಬರವನ್ನು ನಿಶ್ಚಿತ ಮಿತಿಯೊಳಗೆ ತರುವುದು ಸಾಧ್ಯವಾದಾಗ ಬೆಳವಣಿಗೆಯ ಪಥವೂ ಸುಗಮವಾಗಲಿದೆ. ಬೇಡಿಕೆಯನ್ನು ಹದಗೊಳಿಸಲು ವಿತ್ತೀಯ ನೀತಿ ಸರಳಗೊಳಿಸುವುದು, ವಿಶೇಷವಾಗಿ ಬಂಡವಾಳ ವೆಚ್ಚ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದರಿಂದ ಅರ್ಥವ್ಯವಸ್ಥೆ ಹಸನಾಗಲಿದೆ ಎಂದು ವರದಿ ಹೇಳಿದೆ.
ಜಾಗತಿಕ ಪರಿಸ್ಥಿತಿ ಪ್ರಭಾವ:ಆರ್​ಬಿಐನ ವಾರ್ಷಿಕವರದಿಯು, ಹಣದುಬ್ಬರದ ಮೇಲೆ ಜಾಗತಿಕ ಭೌಗೋಳಿಕ ಪರಿಸ್ಥಿತಿಯ ತತ್​ಕ್ಷಣದ ಪ್ರಭಾವ, ಮೂರು&ನಾಲ್ಕು ತಿಂಗಳ ಗ್ರಾಹಕ ದರ ಸೂಚ್ಯಂಕ ಅಪಾಯದಲ್ಲಿರುವ ಅಂಶಗಳನ್ನು ಉಲ್ಲೇಖಿಸಿದೆ. ಕಚ್ಚಾ ತೈಲ, ಲೋಹಗಳು, ರಸಗೊಬ್ಬರಗಳ ಅಂತಾರಾಷ್ಟ್ರೀಯ ದರ ಏರಿಕೆ, ವ್ಯಾಪಾರ ಆಘಾತವಾಗಿ ಪರಿವತಿರ್ತವಾಗಿದೆ. ಇದು ವ್ಯಾಪಾರ ಮತ್ತು ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸಿದೆ. ಯೂಕ್ರೇನ್​ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಪರಿಸ್ಥಿತಿ ಕೈ ಮೀರಿದೆ. ಕೇಂದ್ರ ಬ್ಯಾಂಕ್​ ತನ್ನ ಗಮನವನ್ನು ಹಣದುಬ್ಬರ ನಿಯಂತ್ರಿಸುವತ್ತ ಗಮನಹರಿಸಬೇಕಾಯಿತು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್​ ಸಂಕಷ್ಟದಿಂದ ಆಥಿರ್ಕತೆ ಬಳಲಿತು ಎಂದು ವರದಿ ಹೇಳಿದೆ.
ಬ್ಯಾಂಕಿಂಗ್​ ಸೆಕ್ಟರ್​ನಲ್ಲೂ ಚೇತರಿಕೆಅನುತ್ಪಾದಕ ಆಸ್ತಿ (ಎನ್​ಪಿಎ) ಹೆಚ್ಚಳವಾಗಿ ಸಂಕಷ್ಟದಲ್ಲಿದ್ದ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಈಗ ಚೇತರಿಕೆಯ ಹಾದಿಯಲ್ಲಿವೆ. ಒಟ್ಟು ಎನ್​ಪಿಒ ಅನುಪಾತವು ಷೆಡ್ಯೂಲ್ಡ್​ ಕಮಷಿರ್ಯಲ್​ ಬ್ಯಾಂಕುಗಳಲ್ಲಿ ಆರು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಸಾಲ ವಸೂಲಾತಿ ಹೆಚ್ಚಳ, ಟೆಕ್ನಿಕಲ್​ ರೈಟಾ್​ಗಳ ನೆರವಿನೊಂದಿಗೆ ಎನ್​ಪಿಎ ಅನುಪಾತ ಕಡಿಮೆ ಆಗಿದೆ ಎಂದು ವರದಿ ಹೇಳಿದೆ.
ಅರ್ಥವ್ಯವಸ್ಥೆಗೆ ಬಲ ತುಂಬುವ ಕ್ರಮವರ್ಷದ ಅವಧಿಯಲ್ಲಿ, ನಗದು ಮೀಸಲು ಅನುಪಾತವನ್ನು ಕೋವಿಡ್​ ಸಂಕಷ್ಟ ಪೂರ್ವದ ಮಟ್ಟಕ್ಕೆ ಮರುಸ್ಥಾಪಿಸುವುದು, ಉದ್ದೇಶಿತ ದೀರ್ಘಾವಧಿಯ ರೆಪೊ ಕಾರ್ಯಾಚರಣೆಗಳ ಮರುಪಾವತಿ ಮತ್ತು ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮಾರಾಟದ ಮೂಲಕ 2.2 ಲಕ್ಷ ಕೋಟಿ ರೂಪಾಯಿಯನ್ನು ವ್ಯವಸ್ಥೆಯಿಂದ ಹಿಂಪಡೆಯಲಾಗಿದೆ. ಹೀಗೆ ದ್ರವ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ಷ$್ಮ ವಿಧಾನಗಳನ್ನು ಆರ್​ಬಿಐ ಅನುಸರಿಸುತ್ತಿದೆ ಎಂದು ವರದಿ ಹೇಳಿದೆ.
100ರ ನೋಟಿಗೆ ಬೇಡಿಕೆ ಹೆಚ್ಚು
ಭಾರತೀಯ ರಿಸರ್ವ್​ ಬ್ಯಾಂಕ್​(ಆರ್​ಬಿಐ) ನಡೆಸಿದ ಗ್ರಾಹಕರ ಬ್ಯಾಂಕ್​ ನೋಟ್​ ಸಮೀಕ್ಷೆಯ ಫಲಿತಾಂಶದ ಪ್ರಕಾರ, 100ರ ನೋಟಿಗೆ ಭಾರಿ ಬೇಡಿಕೆ. 2000ದ ನೋಟಿಗೆ ಕನಿಷ್ಠ ಬೇಡಿಕೆ ವ್ಯಕ್ತವಾಗಿದೆ. ನಾಣ್ಯಗಳ ಪೈಕಿ 5 ರೂಪಾಯಿ ನಾಣ್ಯಕ್ಕೆ ಹೆಚ್ಚಿನ ಬೇಡಿಕೆ, 1 ರೂಪಾಯಿಗೆ ಕಡಿಮೆ ಬೇಡಿಕೆ ಇದೆ.
ಪುನಶ್ಚೇತನ ಲಕ್ಷಣ ಗೋಚರಹಲವು ರೀತಿಯ ಸವಾಲು, ಸಂಕಷ್ಟಗಳು ಇದ್ದರೂ ಆಥಿರ್ಕತೆ ಪುನಶ್ಚೇತನಗೊಳ್ಳುತ್ತಿರುವ ಗುಣಲಕ್ಷಣ ಗೋಚರವಾಗಿದೆ. ಎಲ್ಲ ಸೆಕ್ಟರ್​ಗಳಲ್ಲೂ ಚಟುವಟಿಕೆಗಳು ಗರಿಗೆದರಿದೆ. ಗ್ರಾಹಕ ಮತ್ತು ವ್ಯಾಪಾರ ವಿಶ್ವಾಸ ವೃದ್ಧಿಯಾಗಿದೆ. ಖಾಸಗಿ ಹೂಡಿಕೆ ಕೂಡ ಹೆಚ್ಚಾಗಿದೆ. ಸೆಮಿಕಂಡಕ್ಟರ್​ಗಳ ಕೊರತೆ ಆಟೋ ಮೊಬೈಲ್​ ಸೆಕ್ಟರ್​ ಕಾಡಿದ್ದರೂ, ಇನ್​ಪುಟ್​ ವೆಚ್ಚ ಹೆಚ್ಚಾಗಿದ್ದರೂ ಅನೇಕ ಕೈಗಾರಿಕೆಗಳು ತಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿಕೊಂಡು ಮತ್ತೆ ಸಹಜ ಸ್ಥಿತಿಗೆ ಮರಳತೊಡಗಿವೆ ಎಂದು ವರದಿ ವಿವರಿಸಿದೆ.
ನೋಟುಗಳಲ್ಲಿ ಸುರಾ ಅಂಶನೋಟುಗಳಲ್ಲಿ ಮಹಾತ್ಮ ಗಾಂಧಿ ಚಿತ್ರದ ವಾಟರ್​ಮಾರ್ಕ್​, ಸುರಾ ತಂತಿ ಅತಿ ಹೆಚ್ಚು ಗುರುತಿಸಲ್ಪಟ್ಟ ಸುರಾ ಅಂಶ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇಕಡ ಮೂವರಿಗೆ ಬ್ಯಾಂಕ್​ ನೋಟುಗಳ ಸುರಾ ಅಂಶಗಳ ಅರಿವು ಇಲ್ಲ. ಒಟ್ಟಾರೆಯಾಗಿ 10 ಜನರ ಪೈಕಿ 7 ಜನರಿಗೆ ಹೊಸ ನೋಟುಗಳ ಸರಣಿ ಇಷ್ಟವಾಗಿದೆ. ದೃಷ್ಟಿ ದೋಷ ಇರುವವರೂ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಅವರಿಗೆ ನೋಟಿಗೆ ಬಳಸಿದ ಕಾಗದದ ಗುಣಮಟ್ಟ ಮತ್ತು ಗಾತ್ರದ ಅರಿವು ಇದೆ. 28 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ, ಅರೆನಗರ ಮತ್ತು ನಗರ, ಮೆಟ್ರೋ ಪ್ರದೇಶಗಳ 11,000 ಜನ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 1 =
Remember me
