ನವದೆಹಲಿ:ಚೀನಾದಲ್ಲಿ ಮಹಾಮಾರಿ ಕೊರೊನಾ ವೈರಸ್​ ಕಾಣಿಸಿಕೊಂಡಿರುವ ಹಿನ್ನೆಲೆ ಭಾರತದ ಎಲೆಕ್ಟ್ರಾನಿಕ್ಸ್​ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಉಂಟಾಗಿದೆ ಎಂದು ಭಾರತೀಯ ಸೆಲ್ಯುಲರ್​ ಮತ್ತು ಎಲೆಕ್ಟ್ರಾನಿಕ್ಸ್​ ಅಸೋಸಿಯೇಷನ್​ (ಐಸಿಇಎ) ಅಧ್ಯಕ್ಷ ಪಂಕಜ್​ ಮೊಹಿಂದ್ರೂ ತಿಳಿಸಿದ್ದಾರೆ.
ಬುಧವಾರದಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪಂಕಜ್​ ಮೊಹಿಂದ್ರೂ, ಚೀನಾದಲ್ಲಿ ಅನೇಕ ಕಾರ್ಖಾನೆಗಳು ತೆರೆದಿವೆ. ಆದರೂ ಅಲ್ಲಿ ಹೆಚ್ಚಿನ ಪ್ರಮಾಣದ ಕೆಲಸ ನಡೆಯುತ್ತಿಲ್ಲ. ಭಾರತ ಎಲೆಕ್ಟ್ರಾನಿಕ್ಸ್​ ವಿಚಾರದಲ್ಲಿ ಚೀನಾವನ್ನು ಅವಲಂಬಿಸಿದೆ. ಹಾಗಾಗಿ ಚೀನಾದಲ್ಲಿ ಉಂಟಾಗಿರುವ ಕೊರೊನಾ ವೈರಸ್​ನ ಭೀತಿಯು ಭಾರತದ ಎಲೆಕ್ಟ್ರಾನಿಕ್ಸ್​ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ನೀಡುತ್ತಿದೆ. ಇಲ್ಲಿನ ಕಾರ್ಖಾನೆಗಳು, ವ್ಯಾಪಾರ ಎಲ್ಲವು ಸ್ಥಗಿತಗೊಳ್ಳುವ ಮಟ್ಟಿಗೆ ಬಂದು ತಲುಪಿದೆ ಎಂದು ಹೇಳಿದರು.
ಚೀನಾ ಎಲೆಕ್ಟ್ರಾನಿಕ್ಸ್​ ವಿಚಾರದಲ್ಲಿ ಚೀನಾವನ್ನು ಅವಲಂಬಿಸಿದೆ. ಅಲ್ಲಿ ತಯಾರಾಗುವ ಅನೇಕ ಎಲೆಕ್ಟ್ರಾನಿಕ್​ ಉಪಕರಣಗಳನ್ನು ಮತ್ತು ಬಿಡಿ ಭಾಗಗಳನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಸ್ಮಾರ್ಟ್​ಫೋನ್​ಗಳ ವಿಚಾರದಲ್ಲಿಯೂ ಚೀನಾವನ್ನು ಅವಲಂಬಿಸಿರುವ ಭಾರತಕ್ಕೆ ಕೊರೊನಾ ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ಚೀನಾದಿಂದ ಆಮದು ಸಾಧ್ಯವಾಗುತ್ತಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + seven =
Remember me
