ಅಮೆರಿಕ:ಅಮೆರಿಕದ ಗುರುದ್ವಾರದಲ್ಲಿ ಖಲಿಸ್ತಾನಿ ಬೆಂಬಲಿಗರು ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ಹೀಯಾಳಿಸಿ ತಳ್ಳಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಹಿಕ್ಸ್‌ವಿಲ್ಲೆ ಗುರುದ್ವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಧು ಅವರ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾಗಿದೆ. ಗುರುಪುರಬ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಸಂಧು ಗುರುದ್ವಾರಕ್ಕೆ ಹೋಗಿದ್ದರು.
ವೈರಲ್ ವಿಡಿಯೋದಲ್ಲಿ ಏನಿದೆ?ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಹಿಕ್ಸ್‌ವಿಲ್ಲೆ ಗುರುದ್ವಾರಕ್ಕೆ ತರಂಜಿತ್ ಸಿಂಗ್ ಸಂಧು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಂಧು ಅವರನ್ನು ಖಲಿಸ್ತಾನ್-ಪರ ಗುಂಪು ಸುತ್ತುವರೆದು, ದೌರ್ಜನ್ಯ ನಡೆಸಿದ್ದಾರೆ. ಈಗಾಗಲೇ ವೈರಲ್ ಆಗಿರುವ ಹಲವಾರು ವಿಡಿಯೋಗಳಲ್ಲಿ ಭಯೋತ್ಪಾದಕರಾದ ಹರ್ದೀಪ್ ಸಿಂಗ್ ನಿಜ್ಜರ್ ಮತ್ತು ಗುರುಪತ್ವಂತ್ ಸಿಂಗ್ ಪನ್ನುನ್ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವ ಖಲಿಸ್ತಾನಿ ಬೆಂಬಲಿಗರೊಂದಿಗೆ ಸಂಧು ಘರ್ಷಣೆಯನ್ನು ಕಾಣಬಹುದು.
Khalistanies tried to heckle Indian Ambassador@SandhuTaranjitSwith basless Questions for his role in the failed plot to assassinate Gurpatwant, (SFJ) and Khalistan Referendum campaign.
Himmat Singh who led the pro Khalistanies at Hicksville Gurdwara in New York also accused…pic.twitter.com/JW5nqMQSxO
— RP Singh National Spokesperson BJP (@rpsinghkhalsa)November 27, 2023

ಶೇರ್ ಮಾಡಿದ ಬಿಜೆಪಿ ಮುಖಂಡ
ಬಿಜೆಪಿ ನಾಯಕ ಆರ್‌ಪಿ ಸಿಂಗ್ ಅವರು  ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರ ವಿಡಿಯೋವನ್ನು ಹಂಚಿಕೊಂಡಿದ್ದು,ಲಾಂಗ್ ಐಲ್ಯಾಂಡ್‌ನ ಗುರುನಾನಕ್ ದರ್ಬಾರ್‌ನಲ್ಲಿ  ಗುರುಪುರಬ್ ಆಚರಿಸಲು ರಾಯಭಾರಿಗೆ ಅವಕಾಶ ಸಿಕ್ಕಿತ್ತು ಎನ್ನಲಾಗಿದೆ. “ನಾನು ಕೀರ್ತನೆಯನ್ನು ಆಲಿಸಿದೆ. ಗುರುನಾನಕ್ ದೇವ್ ಜಿ ಅವರ ಒಗ್ಗಟ್ಟು, ಏಕತೆ ಮತ್ತು ಸಮಾನತೆಯ ಸಂದೇಶದ ಬಗ್ಗೆ ಎಲ್ಲರೊಂದಿಗೆ ಮಾತನಾಡಿದೆ” ಎಂದು ರಾಯಭಾರಿ ಹೇಳಿದ್ದಾರೆ. ಲಂಗರ್ ತಿನ್ನುವುದರ ಜೊತೆಗೆ ಎಲ್ಲರ ಆಶೀರ್ವಾದ ಪಡೆದು, ನ್ಯೂಯಾರ್ಕ್‌ನ ಶ್ರೀ ಗುರು ರವಿದಾಸ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಗ್ಗೆಯೂ ಸಂಧು ತಿಳಿಸಿದ್ದಾರೆ.
#WATCH| Indian Ambassador to US Taranjit Singh Sandhu celebrates Guru Purab with the Sikh community in New Yorkpic.twitter.com/2yH0X5BSaU
— ANI (@ANI)November 27, 2023

ಎಲ್ಲೆಲ್ಲೂ ಮಲಯಾಳಿಗಳು…182 ದೇಶಗಳಲ್ಲಿ ಇವರದ್ದೇ ಹವಾ: ಯುಎಇಯಲ್ಲಿದೆ ಹೆಚ್ಚಿನ ಸಂಖ್ಯೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
