ನವದೆಹಲಿ:ಕೇರಳದ ತ್ರಿಶೂರ್​ನ ಸುನೀಲ್​ಕುಮಾರ್​ ಎಂಬಾತ ಯುಎಇನಲ್ಲಿ ದಾಖಲೆಗಳನ್ನು ಕಳೆದುಕೊಂಡು ಸಿಕ್ಕಿ ಹಾಕಿಕೊಂಡಿದ್ದು, ಕೊನೆಗೂ 18 ವರ್ಷಗಳ ಪರದಾಟದ ಬಳಿಕ ಮನೆಗೆ ಮರಳಿದ್ದಾರೆ. 2005ರಲ್ಲಿ ಯುಎಇಗೆ ತೆರಳಿದ್ದ ಇವರು, ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಂಡು, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು. ನಂತರ 2007ರಲ್ಲಿ ಪಾಸ್​ಪೋರ್ಟ್​ ಅವಧಿ ಮುಗಿದರೂ ದುಬೈನಲ್ಲಿನ ಇಂಡಿಯನ್​ ಕಾನ್ಸುಲೇಟ್​ನಿಂದ ತುರ್ತು ಪ್ರಮಾಣಪತ್ರ ಪಡೆದಿದ್ದರು.
ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಕ್ಷಮಾದಾನ ಸಿಕ್ಕರೂ ಮನೆಗೆ ಮರಳಲು ಆಗಿರಲಿಲ್ಲ. ರಾಯಭಾರ ಕಚೇರಿ ಮೂಲಕ ಈ ವಿಷಯ ಸಾಮಾಜಿಕ ಕಾರ್ಯಕರ್ತರಿಗೆ ಗೊತ್ತಾಗಿ ಮುಂದಿನ ವ್ಯವಸ್ಥೆ ಮಾಡಲು ಮುಂದಾದರೂ ಪಾಸ್​ಪೋರ್ಟ್​ ವಿವರ ಓದಲು ಸಾಧ್ಯವಾಗದ್ದರಿಂದ ಅದನ್ನು ಕೊಚ್ಚಿ ಪಾಸ್​ಪೋರ್ಟ್​ ಕಚೇರಿಗೆ ಕಳುಹಿಸಿ 2023ರ ಅಕ್ಟೋಬರ್​ನಲ್ಲಿ ಇನ್ನೊಂದು ತುರ್ತು ಪ್ರಮಾಣಪತ್ರ ಪಡೆಯಲಾಯಿತು.
ಈ ಮಧ್ಯೆ ಸುನಿಲ್​ ಆರೋಗ್ಯ ಇನ್ನಷ್ಟು ಹದಗೆಟ್ಟು ಶಾರ್ಜಾದಲ್ಲಿ ಉಳಿಯುವಂತಾಗಿತ್ತು. ಅಗತ್ಯವಿರುವ ಇನ್ನಷ್ಟು ಕ್ರಮಗಳನ್ನು ಡಿಸೆಂಬರ್​ನಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಕರ್ತರು ಜ. 4ರಂದು ಕೇರಳಕ್ಕೆ ಕರೆಸಿಕೊಂಡು, ಬಳಿಕ ತ್ರಿಶೂರ್​ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
