ನವದೆಹಲಿ:ಗಲ್ವಾನ್​ ಕಣಿವೆಯ ರಕ್ತಸಿಕ್ತ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾ ನಡುವೆ ರಾಜತಾಂತ್ರಿಕ ಶೀತಲಸಮರ ಏರ್ಪಟ್ಟಿದೆ. ಅಡಕತ್ತರಿಯಲ್ಲಿ ಸಿಲುಕಿದ ಅಡಕೆಯಂತೆ ಸಿಲುಕಿರುವ ಚೀನಾದಲ್ಲಿ ನೆಲೆಸಿರುವ ಭಾರತೀಯ ಮೂಲದವರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಭಾರತೀಯ ಮೂಲದ ಟೆಕ್ಕಿಗಳು, ಸಿದ್ಧ ಉಡುಪಿನ ರಫ್ತುದಾರರು ಮತ್ತು ವಾಣಿಜ್ಯೋದ್ಯಮಿಗಳು ಚೀನಾದ ಡಾಲಿಯನ್​ನ ಸಾಫ್ಟ್​ವೇರ್​ ಕೇಂದ್ರ, ಬೀಜಿಂಗ್​, ಶಾಂಘೈ, ಶೆನ್​ಜೆನ್​ ಮತ್ತು ಗುವಾಂಗ್​ಝೌನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಕೆಲವರು ಚೀನಿ ಮಹಿಳೆಯರನ್ನು ಮದುವೆಯಾಗಿದ್ದಾರೆ. ಇದೀಗ ಅವರೆಲ್ಲರನ್ನೂ ದೇಶದ್ರೋಹಿಗಳು, ದೇಶಭಕ್ತಿ ಇಲ್ಲದವರು ಎಂದು ಹೇಳಿ ಚೀನಾದ ಟ್ರೋಲಿಗರು ನಿಂದಿಸಲಾರಂಭಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ತಮ್ಮ ದೇಶವನ್ನು ಬಿಟ್ಟು ಭಾರತಕ್ಕೆ ಹೋಗದಿರುವುದನ್ನು ಪ್ರಸ್ತಾಪಿಸಿ ಟ್ರೋಲಿಗರು ಇವರೆಲ್ಲರನ್ನೂ ನಿಂದಿಸುತ್ತಿದ್ದಾರೆ. ಇದು ಸಾಲದ್ದಕ್ಕೆ, #Indiansunitedagaistchina ಮತ್ತು #Indianswillcrushchina ಎಂಬ ಟ್ವಿಟರ್​ ಹ್ಯಾಷ್​ಟ್ಯಾಗ್​ನಿಂದಾಗಿ ಟ್ರೋಲಿಗರ ಹಾವಳಿ ಮತ್ತಷ್ಟು ಹೆಚ್ಚಾಗಿದೆ.ಚೀನಾದ 2010ರ ಜನಗಣತಿಯ ಪ್ರಕಾರ ಆ ರಾಷ್ಟ್ರದಲ್ಲಿ 6 ಲಕ್ಷ ವಿದೇಶಿಗರು ನೆಲೆಸಿದ್ದಾರೆ. ಇದೀಗ ಇವರ ಸಂಖ್ಯೆ 1 ದಶಲಕ್ಷ ತಲುಪಿದ್ದು, ಇವರಲ್ಲಿ ಶೇ.3 ಭಾರತೀಯರು ಆಗಿದ್ದಾರೆ.
ಇದನ್ನೂ ಓದಿ:ಹೆತ್ತ ಮಗಳನ್ನೇ ಕೊಂದು ಎದೆಗೆ ಕಲ್ಲುಕಟ್ಟಿ ಕೆರೆಗೆ ಎಸೆದಳು!
ಆದರೆ, ಚೀನಾದಲ್ಲಿ ತಮಗೆ ಏನೊಂದು ಸಮಸ್ಯೆಯಾಗುತ್ತಿಲ್ಲ ಎಂದು ಹೇಳಿರುವ ಡಾಲಿಯಾನ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ದೆಹಲಿ ಮೂಲದ ಎ. ಕುಮಾರ್​, ಯುದ್ಧದ ಕುರಿತ ಸುದ್ದಿಗಾಗಿ ನಾವು ವಿವಿಧ ಚಾನೆಲ್​ಗಳನ್ನು ವೀಕ್ಷಿಸುತ್ತಿದ್ದೆವು. ಲಡಾಖ್​ ಬಿಕ್ಕಟ್ಟಿನ ನಂತರದಲ್ಲಿ ಭಾರತದ ಪ್ರತಿಕೆಗಳನ್ನು ಆನ್​ಲೈನ್​ನಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಬಿಕ್ಕಟ್ಟಿಗೆ ಭಾರತ ಕಾರಣ ಎಂದು ಚೀನಾದ ಪತ್ರಿಕೆಗಳು ಹೇಳುತ್ತಿವೆ. ನ್ಯೂಸ್​ ಚಾನೆಲ್​ಗಳಲ್ಲಿ ಇದಕ್ಕೆ ಚೀನಾ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಎರಡೂ ರಾಷ್ಟ್ರಗಳ ನಡುವೆ ಶೀಘ್ರವೇ ಶಾಂತಿ ಏರ್ಪಡಲಿ ಎಂದು ಹಾರೈಸುತ್ತಿರುವುದಾಗಿ ತಿಳಿಸಿದ್ದಾರೆ.
ಡಾಲಿಯಾನ್​ನ ಐಟಿ ಕೇಂದ್ರದಲ್ಲಿ 15 ಸಾವಿರ ಭಾರತೀಯ ಮೂಲದ ಟೆಕ್ಕಿಗಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ನಿಂದಿಸಲಾಗುತ್ತಿದೆ. ವಾಸ್ತವದಲ್ಲಿ ಚೀನಾದ ನಮ್ಮ ಸಹೋದ್ಯೋಗಿಗಳು ಮತ್ತು ನೆರೆಹೊರೆಯವರು ನಮ್ಮೊಂದಿಗೆ ತುಂಬಾ ಸ್ನೇಹಭಾವದಿಂದ ಇದ್ದು, ನಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದು ವಿ. ವಿಜಯ್​ ಎಂಬುವರು ಹೇಳಿದ್ದಾರೆ.
ಕಾಂಗ್ರೆಸ್‌ ಶಾಸಕನ ಸಂಪರ್ಕಕ್ಕೆ ಬಂದ ಬಿಜೆಪಿ ಶಾಸಕನಿಗೆ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
