ಚೆನ್ನೈ:ಗೆಲುವಿನ ನಾಗಾಲೋಟ ವಿಸ್ತರಿಸಿದ ಹರ್ಮಾನ್​ಪ್ರೀತ್​ ಸಿಂಗ್​ ಸಾರಥ್ಯದ ಭಾರತ ತಂಡ 7ನೇ ಆವೃತ್ತಿಯ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಮಲೇಷ್ಯಾ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆತಿಥೇಯ ಭಾರತ ತಂಡ 4-3 ಗೋಲುಗಳಿಂದ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ 4ನೇ ಬಾರಿಗೆ ಪ್ರಶಸ್ತಿ ಜಯಿಸಿದ ಭಾರತ ತಂಡ, ಮುಂಬರುವ ಏಷ್ಯನ್​ ಗೇಮ್ಸ್​ಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ಮೇಯರ್​ ರಾಧಾಕೃಷ್ಣನ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಜಿದ್ದಾಜಿದ್ದಿನ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಜುಗ್ರಾಜ್​ ಸಿಂಗ್​ 9ನೇ ನಿಮಿಷದಲ್ಲಿ ಸಿಡಿಸಿದ ಗೋಲಿನ ಬಲದಿಂದ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ ನಂತರ ಮಲೇಷ್ಯಾ ನೀಡಿದ ತಿರುಗೇಟಿಗೆ ಭಾರತ ತಂಡ ತತ್ತರಿಸಿತು. 14ನೇ ನಿಮಿಷದಲ್ಲಿ ಅಬು ಕಮಲ್​ ಅರ್ಜೈ ಫೀಲ್ಡ್​ ಗೋಲು ಸಿಡಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದರು. ನಂತರ ರಝಿ ರಹೀಂ (18ನೇ ನಿಮಿಷ) ಮತ್ತು ಅಮಿನುದ್ದೀನ್​ ಮುಹಮದ್​ (28) ತಲಾ ಒಂದು ಗೋಲು ಬಾರಿಸಿದರು. ಇದರೊಂದಿಗೆ ಮಲೇಷ್ಯಾ ಮೊದಲಾರ್ಧದಲ್ಲಿ 3-1 ಮುನ್ನಡೆ ಸಾಧಿಸಿ ಬೀಗಿತು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ದ್ವೀತಿಯಾರ್ಧದಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಭಾರತ, 45ನೇ ನಿಮಿಷದಲ್ಲಿ ಗುರ್ಜಂತ್​ ಸಿಂಗ್​ ಮತ್ತು ನಾಯಕ ಹರ್ಮಾನ್​ಪ್ರೀತ್​ ಸಿಂಗ್​ ಕೆಲವೇ ಸೆಕೆಂಡ್​ ಅಂತರದಲ್ಲಿ ಸಿಡಿಸಿದ 2 ಗೋಲುಗಳಿಂದ 3ನೇ ಕ್ವಾರ್ಟರ್​ ಅಂತ್ಯಕ್ಕೆ 3-3 ಸಮಬಲ ಸಾಧಿಸಿತು.
ಕೊನೇ ಕ್ವಾರ್ಟರ್​ನಲ್ಲಿ ಆಕಾಶ್​ದೀಪ್​ ಸಿಂಗ್​ (56ನೇ ನಿಮಿಷ) ಸಿಡಿಸಿದ ಫೀಲ್ಡ್​ ಗೋಲಿನಿಂದ ಭಾರತ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಲೀಗ್​ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಡ್ರಾ ಸಾಧಿಸಿ ಅಜೇಯವಾಗಿದ್ದ ಭಾರತ ತಂಡ, ಸೆಮಿಫೈನಲ್​ನಲ್ಲಿ ಜಪಾನ್​ ವಿರುದ್ಧ 5-0ಯಿಂದ ಸುಲಭ ಗೆಲುವು ದಾಖಲಿಸಿತ್ತು. ಟೂರ್ನಿಯಲ್ಲಿ ಭಾರತ ತಂಡ ಈ ಮುನ್ನ 2011, 2016, 2018ರಲ್ಲಿ ಪ್ರಶಸ್ತಿ ಗೆದ್ದಿತ್ತು.
ವೈದ್ಯರು ಜನರಿಕ್ ಔಷಧ ಬರೆಯುವುದು ಕಡ್ಡಾಯ, ತಪ್ಪಿದರೆ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
